ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ಆಯ್ಕೆಯಾದ ಶುಭಮಾನ್ ಗಿಲ್| Shubman Gill

Shubman Gill
Published on

Shubman Gill: ಭಾರತದ ಟೆಸ್ಟ್ ನಾಯಕ ಶುಭಮನ್ ಗಿಲ್ ಜುಲೈ ತಿಂಗಳ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ತಿಂಗಳಲ್ಲಿ ಗಿಲ್ ಆಡಿದ ಮೂರು ಟೆಸ್ಟ್ ಪಂದ್ಯಗಳಲ್ಲಿ, 94.50 ರ ಸರಾಸರಿಯಲ್ಲಿ 567 ರನ್ ಗಳಿಸಿದ್ದಾರೆ. ಅಲ್ಲದೆ, ಬೆನ್ ಸ್ಟೋಕ್ಸ್ ಮತ್ತು ವಿಯಾನ್ ಮುಲ್ಡರ್ ಅವರನ್ನು ಹಿಂದಿಕ್ಕಿ ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.

ಈ ಬಗ್ಗೆ ಮಾತನಾಡಿದ ಗಿಲ್, ಜುಲೈ ತಿಂಗಳ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ಆಯ್ಕೆಯಾಗಿರುವುದು ತುಂಬಾ ಸಂತೋಷ ತಂದಿದೆ. ಈ ಬಾರಿ ನಾಯಕನಾಗಿ ನನ್ನ ಮೊದಲ ಟೆಸ್ಟ್ ಸರಣಿಯಲ್ಲಿನ ನನ್ನ ಪ್ರದರ್ಶನದಿಂದಾಗಿ ಪ್ರಶಸ್ತಿ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ. ಬರ್ಮಿಂಗ್ಹ್ಯಾಮ್‌ನಲ್ಲಿನ ದ್ವಿಶತಕವು ನಾನು ಶಾಶ್ವತವಾಗಿ ನೆನಪಿನಲ್ಲಿ ಉಳಿಯುವ ಸಂಗತಿಯಾಗಿದೆ. ಇದು ನನ್ನ ಮೊದಲ ಇಂಗ್ಲೆಂಡ್ ಪ್ರವಾಸದ ಪ್ರಮುಖ ಘಟನೆಗಳಲ್ಲಿ ಒಂದಾಗಿದೆ ಎಂದು ಐಸಿಸಿ ಉಲ್ಲೇಖಿಸಿ ತಿಳಿದ್ದಾರೆ.

ಅಲ್ಲದೆ, ಮುಂದುವರೆದು ಮಾತನಾಡಿದ ಭಾರತದ ಟೆಸ್ಟ್ ತಂಡದ ನಾಯಕ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯು ನಾಯಕನಾಗಿ ನನಗೆ ಒಂದು ಕಲಿಕೆಯ ಅನುಭವವಾಗಿತ್ತು. ನಾವು ಎರಡೂ ಕಡೆಯ ಆಟಗಾರರಿಂದ ಕೆಲವು ಅತ್ಯುತ್ತಮ ಪ್ರದರ್ಶನಗಳನ್ನು ನೋಡಿದ್ದೇವೆ. ಇದನ್ನು ಎರಡೂ ಕಡೆಯ ಆಟಗಾರರು ದೀರ್ಘಕಾಲ ನೆನಪಿನಲ್ಲಿಟ್ಟುಕೊಳ್ಳುತ್ತಾರೆ ಎಂದು ನನಗೆ ಆನಿಸುತ್ತಿದೆ ಎಂದು ಹೇಳಿದ್ದಾರೆ.

ಈ ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ತೀರ್ಪುಗಾರರಿಗೆ ಮತ್ತು ಈ ರೋಮಾಂಚಕಾರಿ ಸರಣಿಯಲ್ಲಿ ನನ್ನೊಂದಿಗಿದ್ದ ನನ್ನ ತಂಡದ ಸದಸ್ಯರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಮುಂದಿನ ದಿನಗಳಲ್ಲಿ ನನ್ನ ಫಾರ್ಮ್ ಅನ್ನು ಮುಂದುವರಿಸಲು ಮತ್ತು ದೇಶಕ್ಕೆ ಹೆಚ್ಚಿನ ಪ್ರಶಸ್ತಿಗಳನ್ನು ತರಲು ಎದುರು ನೋಡುತ್ತಿದ್ದೇನೆ ಎಂದು ಈ ಸಂದರ್ಭದಲ್ಲಿ ಗಿಲ್​​ ತಿಳಿಸಿದ್ದಾರೆ.

ಕಳೆದ ತಿಂಗಳು ನಡೆದ ಭಾರತ ಮತ್ತು ಇಂಗ್ಲೆಂಡ್ ಸರಣಿಯಲ್ಲಿ ಭಾರತ ತಂಡದ ನಾಯಕ ಶುಭ್ಮನ್​ ಗಿಲ್, ಐದು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 75.40 ಸರಸರಿಯಲ್ಲಿ 754 ರನ್​ಗಳಿಸಿದರು. ಈ ಸರಣಿಯು 2-2 ರಿಂದ ಸಮಬಲವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net