4ನೇ ಟೆಸ್ಟ್​ಗೆ ಪಾದಾರ್ಪಣೆ ಮಾಡ್ತಾರಾ ಈ 24ರ ಯುವಕ? ಕರುಣ್ ನಾಯರ್ ಬಗ್ಗೆ ಗಿಲ್ ಹೇಳಿದ್ದೇನು..?IND VS ENG

Untitled design (3) (1)
Published on

IND VS ENG: ಬುಧವಾರ (ಜು.23) ಮ್ಯಾಂಚೆಸ್ಟರ್‌ನಲ್ಲಿ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತ ಕ್ರಿಕೆಟ್ ತಂಡದ ನಾಯಕ ಶುಭಮನ್ ಗಿಲ್​, ಅಭಿಮಾನಿಗಳಿಗಿದ್ದ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಹೌದು, ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯ 4ನೇ ಟೆಸ್ಟ್​​ನಿಂದ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ, ವೇಗದ ಬೌಲರ್ ಆರ್ಶ್‌ದೀಪ್ ಸಿಂಗ್, ಆಕಾಶ್ ದೀಪ್ ಹೊರಗುಳಿಯಲಿದ್ದಾರೆ ಎಂದು ನಾಯಕ ಗಿಲ್ ಸ್ಪಷ್ಟಪಡಿಸಿದ್ದಾರೆ.

ಪ್ರಸಿದ್ಧ್​ ಮತ್ತು ಅನ್ಶುಲ್ ಯಾರಿಗೆ ಅವಕಾಶ?

ಈ ಕುರಿತು ಮಾತನಾಡಿರುವ ಗಿಲ್​​, ''ಪ್ರಮುಖ ಬೌಲರ್​ಗಳಾದ ಆರ್ಶ್‌ದೀಪ್ ಸಿಂಗ್, ಆಕಾಶ್ ದೀಪ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಪಂದ್ಯದಿಂದ ಹೊರಗಿದ್ದರೂ 4ನೇ ಟೆಸ್ಟ್​ನಲ್ಲಿ ಎದುರಾಳಿ ತಂಡದ 20 ವಿಕೆಟ್‌ಗಳನ್ನು ಪಡೆಯಲು ನಮ್ಮಲ್ಲಿ ಸಮರ್ಥ ಆಟಗಾರರಿದ್ದಾರೆ. ಪ್ರತಿ ಪಂದ್ಯಕ್ಕೂ ವಿಭಿನ್ನ ಬೌಲರ್‌ಗಳನ್ನು ಆಡಿಸುವುದು ಸೂಕ್ತವಲ್ಲ. ಆದರೆ, ಸಂದರ್ಭ ಬಂದಾಗ ಎಲ್ಲದಕ್ಕೂ ಸಿದ್ಧರಾಗಿರಬೇಕಾಗುತ್ತದೆ. ಅನ್ಶುಲ್ ಕಾಂಬೋಜ್ ತಮ್ಮ ಚೊಚ್ಚಲ ಪ್ರವೇಶಕ್ಕೆ ಬಹಳ ಹತ್ತಿರದಲ್ಲಿದ್ದು, ನಾಳೆ ಪ್ರಸಿದ್ಧ್​ ಮತ್ತು ಅನ್ಶುಲ್ ನಡುವೆ ಯಾರಿಗೆ ಅವಕಾಶ ನೀಡಬೇಕು ಎನ್ನುವುದರ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು'' ಎಂದರು.

ಕರುಣ್ ನಾಯರ್ ಕಥೆ ಏನು?

ಇದೇ ಸಂದರ್ಭದಲ್ಲಿ ಕರುಣ್ ನಾಯರ್ ಆಯ್ಕೆಯ ಬಗ್ಗೆ ಮಾತನಾಡಿದ ಗಿಲ್, ಕರುಣ್ ತಮ್ಮ ಫಾರ್ಮ್ ಅನ್ನು ಬದಲಾಯಿಸಿಕೊಳ್ಳುತ್ತಾರೆ ಎಂಬ ವಿಶ್ವಾಸ ತಂಡಕ್ಕಿದೆ. ಅವರ ಬ್ಯಾಟಿಂಗ್‌ನಲ್ಲಿ ಯಾವುದೇ ಸಮಸ್ಯೆ ಇಲ್ಲ. ಒಮ್ಮೆ 50 ರನ್ ಗಳಿಸಿದರೆ ಸಹಜವಾಗಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಮುಂದೆ ಅದನ್ನು ದೊಡ್ಡ ಇನ್ನಿಂಗ್ಸ್​​ ಅಗಿ ಪರಿವರ್ತನೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.(ಎಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net