ಆಸ್ಟ್ರೇಲಿಯಾ ಎ ವಿರುದ್ಧ ಏಕದಿನ ಸರಣಿಯಲ್ಲಿ ಭಾರತ ಎ ತಂಡಕ್ಕೆ ಶ್ರೇಯಸ್​ ಅಯ್ಯರ್​ ಸಾರಥ್ಯ

web shreas
Published on

ನವದೆಹಲಿ: ಬೆನ್ನುನೋವಿನ ಸಮಸ್ಯೆಯಿಂದಾಗಿ ರೆಡ್​ಬಾಲ್​ ಕ್ರಿಕೆಟ್​ನಿಂದ 6 ತಿಂಗಳ ವಿರಾಮ ಪಡೆದಿರುವ ಮುಂಬೈ ಬ್ಯಾಟರ್​ ಶ್ರೇಯಸ್​ ಅಯ್ಯರ್​, ಸೆಪ್ಟೆಂಬರ್​ 30ರಿಂದ ಕಾನ್ಪುರದಲ್ಲಿ ಆಸ್ಟ್ರೆಲಿಯಾ ಎ ವಿರುದ್ಧ ನಡೆಯಲಿರುವ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಎ ತಂಡವನ್ನು ಮುನ್ನಡೆಸಲಿದ್ದಾರೆ. ಇರಾನಿ ಕಪ್​ ಪಂದ್ಯಕ್ಕೆ ತನ್ನನ್ನು ಪರಿಗಣಿಸದಂತೆ ಕೇಳಿಕೊಂಡಿದ್ದ ಕಾರಣ ಶ್ರೇಯಸ್​ರನ್ನು ಶೇಷ ಭಾರತ ತಂಡಕ್ಕೆ ಸೇರಿಸಲಾಗಿಲ್ಲ. ಏಷ್ಯಾಕಪ್​ನಲ್ಲಿ ಆಡುತ್ತಿರುವ ಅಭಿಷೇಕ್​ ಶರ್ಮ, ತಿಲಕ್​ ವರ್ಮ, ಹರ್ಷಿತ್​ ರಾಣಾ, ಅರ್ಷದೀಪ್​ ಸಿಂಗ್​ ಸರಣಿಯ 2-3ನೇ ಪಂದ್ಯಕ್ಕೆ ಭಾರತ ಎ ತಂಡವನ್ನು ಕೂಡಿಕೊಳ್ಳಲಿದ್ದಾರೆ.

ಮೊದಲ ಏಕದಿನಕ್ಕೆ ಭಾರತ ಎ ತಂಡ: ಶ್ರೇಯಸ್​ ಅಯ್ಯರ್​ (ನಾಯಕ), ಪ್ರಭ್​ಸಿಮ್ರನ್​ ಸಿಂಗ್​ (ವಿ.ಕೀ), ರಿಯಾನ್​ ಪರಾಗ್​, ಆಯುಷ್​ ಬಡೋನಿ, ಸೂರ್ಯಾಂಶ್​ ಶೆಡ್ಗೆ, ವಿಪ್ರಜ್​ ನಿಗಮ್​, ನಿಶಾಂತ್​ ಸಿಂಧು, ಗುರುಜಪ್​ನೀತ್​ ಸಿಂಗ್​, ಯಧ್ವೀರ್​ ಸಿಂಗ್​, ರವಿ ಬಿಷ್ಣೋಯಿ, ಅಭಿಷೇಕ್​ ಪೊರೆಲ್​ (ವಿ.ಕೀ), ಪ್ರಿಯಾಂಶ್​ ಆರ್ಯ, ಸಿಮ್ರನ್​ಜೀತ್​ ಸಿಂಗ್​.

2-3ನೇ ಪಂದ್ಯಕ್ಕೆ ತಿಲಕ್​ ವರ್ಮ (ಉಪನಾಯಕ), ಅಭಿಷೇಕ್​ ಶರ್ಮ, ಹರ್ಷಿತ್​ ರಾಣಾ, ಅರ್ಷದೀಪ್​ ಸಿಂಗ್​ ಸೇರ್ಪಡೆ; ಪ್ರಿಯಾಂಶ್​ ಆರ್ಯ, ಸಿಮ್ರನ್​ಜೀತ್​ ಸಿಂಗ್​ ಔಟ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net