ದುಬಾರಿ ಮೊತ್ತಕ್ಕೆ ಖರೀದಿಯಾದ ಶ್ರೇಯಸ್​ ಅಯ್ಯರ್​! ಯಾವ ಫ್ರಾಂಚೈಸಿ? ಎಷ್ಟು ಕೋಟಿಗೆ ಗೊತ್ತೇ? | Shreyas Iyer

ವಿಜಯವಾಣಿ - 2024-11-24T161626.914
Published on

ನವದೆಹಲಿ: ಇಂದು ನಡೆಯುತ್ತಿರುವ ಬಹುನಿರೀಕ್ಷಿತ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಮೊದಲು ಭಾರತೀಯ ವೇಗಿ ಅರ್ಷ್​ದೀಪ್ ಸಿಂಗ್ 18 ಕೋಟಿ ರೂ.ಗೆ ಪಂಜಾಬ್ ಕಿಂಗ್ಸ್​ ಪಾಲಾಗಿದ್ದಾರೆ. ಭರ್ಜರಿ ಬಿಡ್ಡಿಂಗ್​ನಲ್ಲಿ ಅಂತಿಮವಾಗಿ ಪಂಜಾಬ್ ಕಿಂಗ್ಸ್​ ತಮ್ಮ ತಂಡಕ್ಕೆ ಅರ್ಷ್​ದೀಪ್​ರನ್ನು ಖರೀದಿ ಮಾಡುವಲ್ಲಿ ಯಶಸ್ವಿಯಾಯಿತು.

ಇನ್ನು ನಂತರದಲ್ಲಿ ಬಂದ ದಕ್ಷಿಣ ಆಫ್ರಿಕಾ ವೇಗಿ ಕಗಿಸೋ ರಬಾಡ ನಂತರ ಹರಾಜಿಗೆ ಬಂದ ಭಾರತದ ಸ್ಟಾರ್ ಬ್ಯಾಟರ್​ ಶ್ರೇಯಸ್​ ಅಯ್ಯರ್​ಗೆ  (Shreyas Iyer) ದೊಡ್ಡ ಬಿಡ್ಡಿಂಗ್​ ನಡೆದಿದ್ದು, ಡೆಲ್ಲಿ ಕ್ಯಾಪಿಟಲ್ಸ್​ ಮತ್ತು ಪಂಜಾಬ್ ಕಿಂಗ್ಸ್​ ನಾ ಮುಂದು ತಾ ಮುಂದು ಎಂದು ಖರೀದಿಗೆ ಬಿದ್ದರು. ಈ ವೇಳೆ 25 ಕೋಟಿ ರೂ. ತಲುಪಿದರೂ ಕೂಡ ಬಿಡ್ಡಿಂಗ್​ನಲ್ಲಿ ಕೈಬಿಡದ ಪಂಜಾಬ್​ ಕಿಂಗ್ಸ್​, ತಮ್ಮ ಗುರಿಯನ್ನು ಸಾಧಿಸುವಲ್ಲಿ ಸೋಲಲಿಲ್ಲ.

ಅಂತಿಮವಾಗಿ 26.75 ಕೋಟಿ ರೂ.ಗೆ ಶ್ರೇಯಸ್​ ಅಯ್ಯರ್​ರನ್ನು ಪ್ರೀತಿ ಜಿಂಟಾ ಮಾಲೀಕತ್ವದ ಪಂಜಾಬ್ ಕಿಂಗ್ಸ್ ಖರೀದಿ ಮಾಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net