

ಬೆಂಗಳೂರು: ಟೀಮ್ ಇಂಡಿಯಾದ ದೀಪಾವಳಿ ಆಚರಣೆಯ ಸಂದರ್ಭದಲ್ಲಿ, ಕೆಲವು ಫೋಟೋಗಳು ಎಲ್ಲರ ಗಮನ ಸೆಳೆದವು. ಈ ಫೋಟೋಗಳಲ್ಲಿ ಒಂದು ಶ್ರೇಯಸ್ ಜೊತೆ ಕಾಣಿಸಿಕೊಂಡ ಯುವತಿಯದ್ದಾಗಿತ್ತು. ಹೌದು, ಈ ಮಿಸ್ಟರಿ ಗರ್ಲ್ ಜೊತೆಗೆ ಭಾರತ ತಂಡದ ದೀಪಾವಳಿ ಆಚರಣೆಯಲ್ಲಿ ಶ್ರೇಯಸ್ ಭಾಗವಹಿಸಿದ್ದರು. ಇಂತಹ ಅನೇಕ ಫೋಟೋಗಳು ಮತ್ತು ವಿಡಿಯೋಗಳಲ್ಲಿ, ಅವರು ಈ ಯುವತಿಯೊಂದಿಗೆ ಕಾಣಿಸಿಕೊಂಡಿದ್ದಾರೆ. ಅಂದಿನಿಂದ ಶ್ರೇಯಸ್ ಸಿಂಗಲ್ ಆಗಿಲ್ಲ ಎಂಬ ಚರ್ಚೆ ಶುರುವಾಗಿತ್ತು.
ಸದ್ಯ ಶ್ರೇಯಸ್ ಜೊತೆ ಕಾಲ ಕಳೆಯುತ್ತಿರುವವರ ಹೆಸರು ತ್ರಿಷಾ ಕುಲಕರ್ಣಿ. ಶ್ರೇಯಸ್‌ಗೆ ಸಂಬಂಧಿಸಿದವರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಹುಡುಕಿದಾಗ ಈ ಮಾಹಿತಿ ಕಂಡುಬಂದಿದೆ. ಈ ವೇಳೆ ಶ್ರೇಯಸ್ ಮತ್ತು ತ್ರಿಷಾ ಅವರ ಕೆಲವು ಹಳೆಯ ಫೋಟೋಗಳೂ ಪತ್ತೆಯಾಗಿವೆ. ಒಂದು ಫೋಟೋದಲ್ಲಿ, ಜೋಡಿ ಶಾರ್ದೂಲ್ ಠಾಕೂರ್ ಮತ್ತು ಅವರ ಪತ್ನಿಯೊಂದಿಗೆ ರಾತ್ರಿ ಊಟ ಮಾಡುತ್ತಿರುವುದನ್ನು ಕಾಣಬಹುದು.
ಅಂದಹಾಗೆ ತ್ರಿಶಾ ಲೈಮ್ ಲೈಟ್ ನಿಂದ ದೂರ ಉಳಿದಿದ್ದಾರೆ. Instagramನಲ್ಲಿ ಅವರ ಖಾತೆಯು ಖಾಸಗಿಯಾಗಿದೆ. ಆದ್ದರಿಂದ ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ಸಾಧ್ಯವಾಗಲಿಲ್ಲ. ಆದರೆ ಈ ಜೋಡಿ ರಿಲೇಶನ್ಶಿಪ್ಲ್ಲಿದ್ದಾರೆ ಎಂದು ನಂಬಲಾಗಿದೆ. ಶ್ರೇಯಸ್ ಅಯ್ಯರ್ ತ್ರಿಷಾಳನ್ನು ಮಾತ್ರ ಫಾಲೋ ಮಾಡಿಲ್ಲ, ಅಯ್ಯರ್ ಸಹೋದರಿ ಶ್ರೇಷ್ಠಾ ಕೂಡ ಅವರನ್ನು ಫಾಲೋ ಮಾಡಿದ್ದಾರೆ.
ಇತ್ತೀಚೆಗೆ ತ್ರಿಷಾ ಕೂಡ ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ಅವರು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಅವರೊಂದಿಗೆ ಕುಳಿತಿದ್ದಾರೆ. ತ್ರಿಷಾ ಕುರಿತ ಊಹಾಪೋಹಗಳಿಗೆ ಯಾವಾಗ ತೆರೆ ಬೀಳುತ್ತೆ ಎಂಬುದನ್ನು ನಾವು ಕಾದು ನೋಡಬೇಕಿದೆ.