PHOTO: ಗೆಳತಿಯೊಂದಿಗೆ ವಿವಾಹವಾದ ಕರ್ನಾಟಕದ ಕ್ರಿಕೆಟಿಗ ಶ್ರೇಯಸ್ ಗೋಪಾಲ್

syreyas gopal web
Published on

ಬೆಂಗಳೂರು: ಕರ್ನಾಟಕದ ಕ್ರಿಕೆಟಿಗ ಶ್ರೇಯಸ್ ಗೋಪಾಲ್ ದೀರ್ಘಕಾಲದ ಗೆಳತಿ ನಿಕಿತಾ ಶಿವ್ ಅವರೊಂದಿಗೆ ಬುಧವರ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಉದ್ಯಾನನಗರಿಯ ರೆಸಾರ್ಟ್ ಒಂದರಲ್ಲಿ ವಿವಾಹ ಕಾರ್ಯಕ್ರಮ ನಡೆಯಿತು.

ಗುರುವಾರ ವಿವಾಹದ ಚಿತ್ರಗಳನ್ನು ಪ್ರಕಟಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ 28 ವರ್ಷದ ಶ್ರೇಯಸ್ ಇದನ್ನು ಪ್ರಕಟಿಸಿದ್ದಾರೆ. ನಿಕಿತಾ ಖಾಸಗಿ ಕಂಪನಿಯ ಸಿಇಒ ಆಗಿದ್ದಾರೆ.

ಇತ್ತೀಚೆಗೆ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ರನ್ನರ್‌ಅಪ್ ಆದ ಕರ್ನಾಟಕ ತಂಡದ ಭಾಗವಾಗಿದ್ದ ಸ್ಪಿನ್ ಬೌಲಿಂಗ್ ಆಲ್ರೌಂಡರ್ ಶ್ರೇಯಸ್ ಗೋಪಾಲ್, ಕಳೆದ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಈ ಹಿಂದೆ 2 ಬಾರಿ ರಣಜಿ ಟ್ರೋಫಿ ಪ್ರಶಸ್ತಿ ಜಯಿಸಿದ ಕರ್ನಾಟಕ ತಂಡದ ಭಾಗವೂ ಆಗಿದ್ದರು. ಡಿಸೆಂಬರ್ 8ರಿಂದ ನಡೆಯಲಿರುವ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲೂ ಅವರು ಆಡುವ ನಿರೀಕ್ಷೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net