ವುಮೆನ್ಸ್​ ಏಷ್ಯಾಕಪ್​ನಲ್ಲಿ ಭಾರತಕ್ಕೆ ಆಘಾತ; ಟೂರ್ನಿಯಿಂದ ಹೊರಬಿದ್ದ ಕನ್ನಡತಿ ಶ್ರೇಯಾಂಕಾ ಪಾಟೀಲ್

Shreyanka Patil
Published on

ಕೊಲಂಬೊ: ಭಾರತ ವುಮೆನ್ಸ್​ ಕ್ರಿಕೆಟ್​ ತಂಡದ ಯುವ ಆಟಗಾರ್ತಿ, ಕನ್ನಡತಿ ಶ್ರೇಯಾಂಕಾ ಪಾಟೀಲ್​ ಮಹಿಳಾ ಏಷ್ಯಾಕಪ್​ ಟೂರ್ಇಯಿಂದ ಹೊರಬಿದ್ದಿದ್ದಾರೆ. ಬೆರಳಿನ ಮೂಳೆ ಮುರಿತದಿಂದಾಗಿ ಅವರು ಹೊರಬಿದ್ದಿದ್ದು, ಟೂರ್ನಿಯಿಂದ ಹೊರಗುಳಿಯಲಿದ್ದಾರೆ.

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅವರು ಬೌಲಿಂಗ್​ ಮಾಡುವ ವೇಳೆ ಗಾಯಕ್ಕೆ ತುತ್ತಾಗಿದ್ದರು ಎಂದು ವರದಿಯಾಗಿದೆ. ಈ ಕುರಿತು ಏಷ್ಯನ್​ ಕ್ರಿಕೆಟ್​ ಕೌನ್ಸಿಲ್​ ಪ್ರಕಟಣೆಯನ್ನು ಹೊರಡಿಸಿದೆ.

ಪಾಕಿಸ್ತಾನ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ 3.4 ಓವರ್​ ಬೌಲಿಂಗ್​ ಮಾಡಿದ ಶ್ರೇಯಾಂಕಾ ಪಾಟೀಲ್​  14 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದ್ದರು. ಇದೇ ಪಂದ್ಯದಲ್ಲಿ ಕ್ಯಾಚ್ ಹಿಡಿಯುವ ವೇಳೆ ಶ್ರೇಯಾಂಕಾ ಗಾಯಕ್ಕೆ ತುತ್ತಾಗಿದ್ದರು. ಶ್ರೇಯಾಂಕಾ ಅವರ ಎಡಗೈನ ನಾಲ್ಕನೇ ಬೆರಳಿನ ಮೂಳೆ ಮುರಿದಿದ್ದು, ಹೀಗಾಗಿ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಶ್ರೇಯಾಂಕಾ ಪಾಟೀಲ್ ಏಷ್ಯಾಕಪ್​ನಿಂದ ಹೊರಬೀಳುತ್ತಿದ್ದಂತೆ ಬದಲಿ ಆಟಗಾರ್ತಿಯಾಗಿ ತನುಜಾ ಪಾಟೀಲ್​ ಅವರನ್ನು ನೇಮಿಸಲಾಗಿದೆ. ಏಷ್ಯಾಕಪ್​ಗಾಗಿ ಹೆಸರಿಲ್ಪಟ್ಟ ತಂಡದಲ್ಲಿ ತನುಜಾ ಮೀಸಲು ಆಟಗಾರ್ತಿಯರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಸ್ಪಿನ್ ಆಲ್​ರೌಂಡರ್ ಶ್ರೇಯಾಂಕಾ ಪಾಟೀಲ್ ಹೊರಗುಳಿದಿರುವ ಕಾರಣ ತನುಜಾ ಕನ್ವರ್​ ಅವರನ್ನು ಬದಲಿ ಆಟಗಾರ್ತಿಯಾಗಿ ಆಯ್ಕೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net