

ಬೆಂಗಳೂರು: ಆರ್ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಶ್ರೇಯಾಂಕಾ ಪಾಟೀಲ್ ಕನ್ನಡತಿ ಅನ್ನೋದು ಹೆಮ್ಮೆಯ ವಿಚಾರ. ಕನ್ನಡದ ಮುದ್ದು ಸುಂದರಿ, ಕರ್ನಾಟಕದ ಕ್ರಶ್ ಎಂದೇ ಫೇಮಸ್ ಆಗಿರುವ ಶ್ರೇಯಾಂಕ ಪಾಟೀಲ್ ನಿನ್ನೆ ಭಾನುವಾರ ವಿಜಯಾನಂದ ಟ್ರಾವಲ್ಸ್ ವತಿಯಿಂದ ಹಮ್ಮಿಕೊಳ್ಳಲಾದ ವಿಆರ್ಎಲ್ ಬಸ್ ವರ್ಕ್ಶಾಪ್ ಫ್ಯಾನ್ಸ್ ಮೀಟ್ ಆಂಡ್ ಗ್ರೀಟ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದರಲ್ಲದೆ, ಆಫ್ ಸ್ಪಿನ್ ಬೌಲಿಂಗನ್ನೂ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಶ್ರೇಯಾಂಕಾ ಅವರ ಜತೆಗೆ ಕ್ರಿಕೆಟ್ ಆಡಲು ಕಂಟೆಸ್ಟ್ ಆಯೋಜಿಸಲಾಗಿದ್ದು, ಇದರಲ್ಲಿ ವಿಜೇತರಾದವರು ಶ್ರೇಯಾಂಕಾ ಜತೆಗೆ ಕ್ರಿಕೆಟ್ ಆಡಿ ಫುಲ್ ಖುಷ್ ಆದರು.
ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಶ್ರೇಯಾಂಕಾ ಬೌಲಿಂಗ್ಗೆ ಬ್ಯಾಟ್ ಮಾಡಿ ಸಂತಸ ವ್ಯಕ್ತಪಡಿಸಿದರು. ತದನಂತರದ ಫ್ಯಾನ್ಸ್ ಕ್ವೆಸ್ಚನಿಂಗ್ ಸೆಶನ್ನಲ್ಲಿ ಶ್ರೇಯಾಂಕ ಉತ್ತರಿಸಿದರು. ಅಲ್ಲದೇ ತಾವು ಸೈನ್ ಮಾಡಿದ್ದ ಬಾಲ್ ಮತ್ತು ಬ್ಯಾಟ್ಗಳನ್ನ ಅಭಿಮಾನಿಗಳಿಗೆ ವಿತರಿಸಿದರು.
ವಿಜಯಾನಂದ ಟ್ರಾವೆಲ್ಸ್ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಶ್ರೇಯಾಂಕಾ ಅಭಿಮಾನಿಗಳು ನಾ ಮುಂದು ತಾಮುಂದೆಂದು ಕಾರ್ಯಕ್ರಮದಲ್ಲಿ ಭಾಗವಹಿಸಿದರು.