ಪಾದಚಾರಿ ಮೇಲೆ ಗಾಡಿ ಹರಿದು ಸಾವು: ಬ್ಯಾಟ್ಸ್‌ಮನ್‌ ಕುಸಲ್‌ ಬಂಧನ

accident cricket
Published on

ಕೋಲಂಬೊ: ವಾಹನ ಚಾಲನೆ ಮಾಡುವ ಸಮಯದಲ್ಲಿ ಪಾದಚಾರಿಯೊಬ್ಬರ ಮೇಲೆ ವಾಹನ ಹಾಯಿಸಿ, ಅವರ ಸಾವಿಗೆ ಕಾರಣವಾಗಿರುವ ಆರೋಪ ಹೊತ್ತ ಶ್ರೀಲಂಕಾ ಬ್ಯಾಟ್ಸ್‌ಮನ್ ಕುಸಲ್ ಮೆಂಡಿಸ್ ಅವರನ್ನು ಭಾನುವಾರ ಬಂಧಿಸಲಾಗಿದೆ.

ಕೊಲಂಬೊ ಉಪನಗರ ಪನದುರಾದಲ್ಲಿ ಮೆಂಡಿಸ್ ಬಳಿ ಈ ಅಪಘಾತ ನಡೆದಿದೆ. ಘಟನೆಯಲ್ಲಿ 74 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ.

ಅಪಘಾತ ಮಾಡಿರುವ ಆರೋಪ ಹೊತ್ತ ಕುಸನ್‌ ಅವರ ವಿರುದ್ಧ ಮೊಕದ್ದಮೆ ದಾಖಲು ಮಾಡಲಾಗಿದ್ದು, ಇಂದು ಅವರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

25 ವರ್ಷದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ 44 ಟೆಸ್ಟ್ ಮತ್ತು 76 ಏಕದಿನ ಪಂದ್ಯಗಳಲ್ಲಿ ಶ್ರೀಲಂಕಾವನ್ನು ಪ್ರತಿನಿಧಿಸಿದ್ದಾರೆ.

ಕಳೆದ ವರ್ಷ ಕೂಡ ಇವರು ಕ್ರಿಕೆಟ್‌ ಮೈದಾನದಲ್ಲಿಯೇ ಬೈಕ್‌ ಓಡಿಸಿ ಆಯ ತಪ್ಪಿ ಕೆಳಗೆ ಬಿದ್ದು ಎಡವಟ್ಟು ಮಾಡಿಕೊಂಡಿದ್ದರು. ಸತತ ನಾಲ್ಕು ವರ್ಷಗಳ ಬಳಿಕ ತವರಿನಲ್ಲಿ ಮೊದಲ ಸರಣಿ ಗೆದ್ದ ಲಂಕಾ ಆಟಗಾರರು ಸಂಭ್ರಮದಲ್ಲಿ ತೇಲಾಡುತ್ತಿದ್ದರು. ಈ ಸಮಯದಲ್ಲಿ ಕುಸಲ್ ಮೆಂಡಿಸ್ ಬೈಕ್‌ ಓಡಿಸಿ ಇಂಥದ್ದೊಂದು ಕೆಲಸ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net