ಕರೊನಾ ವಿರುದ್ಧದ ಹೋರಾಟಕ್ಕೆ 3.30 ಲಕ್ಷ ರೂಪಾಯಿ ನೀಡಿದ ಯುವ ಗಾಲ್ಪರ್​ ಅರ್ಜುನ್; ಹಣಕ್ಕಾಗಿ ಅವರು ಮಾರಿದ್ದೇನು ಗೊತ್ತಾ?

Arjun 21 April 20
Published on

ನವದೆಹಲಿ: ಭಾರತದ ಯುವ ಗಾಲ್ಪರ್ ಅರ್ಜುನ್ ಭಾಟಿ ಕರೊನಾ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡುವುದನ್ನು ಮುಂದುವರಿಸಿದ್ದಾರೆ. 2018ರ ವಿಶ್ವ ಜೂನಿಯರ್ ಚಾಂಪಿಯನ್​ಷಿಪ್​ನಲ್ಲಿ ಧರಿಸಿದ್ದ ಶೂ ಮಾರಿ ಸಂಗ್ರಹವಾದ 3.30 ಲಕ್ಷ ರೂ.ಗಳನ್ನು ಪಿಎಂ-ಕೇರ್ಸ್ ನಿಧಿಗೆ 15 ವರ್ಷದ ಅರ್ಜುನ್ ದೇಣಿಗೆ ನೀಡಿದ್ದಾರೆ.

ಇದಕ್ಕೂ ಮೊದಲು ಅವರು ತಾವು ಗೆದ್ದಿದ್ದ 102 ಟ್ರೋಫಿಗಳನ್ನು ಮಾರಾಟ ಮಾಡಿ ಸಂಗ್ರಹವಾದ 4.30 ಲಕ್ಷ ರೂ.ಗಳನ್ನು ದೇಣಿಗೆ ನೀಡಿದ್ದರು. ‘ಹರಿದ ಶೂಗಳನ್ನು ನನ್ನ ಅಂಕಲ್ 3.30 ಲಕ್ಷ ರೂ.ಗೆ ಕೊಂಡುಕೊಂಡರು. ಈ ಮೊತ್ತವನ್ನು ಪಿಎಂ-ಕೇರ್ಸ್ ನಿಧಿಗೆ ನೀಡುತ್ತಿದ್ದೇನೆ. ಇದೇ ಶೂಗಳನ್ನು 2018ರ ವಿಶ್ವ ಜೂನಿಯರ್ ಚಾಂಪಿಯನ್​ಷಿಪ್​ನಲ್ಲಿ ಆಡಿದ್ದೆ’ ಎಂದು ಅರ್ಜುನ್ ಭಾಟಿ ಟ್ವೀಟ್ ಮಾಡಿದ್ದಾರೆ.

1.5 ಲಕ್ಷ ರೂ. ನೀಡಿದ ದೀಪ್ತಿ: ಭಾರತ ಮಹಿಳಾ ತಂಡದ ಆಲ್ರೌಂಡರ್ ದೀಪ್ತಿ ಶರ್ಮ ಕೋವಿಡ್-19 ವಿರುದ್ಧದ ಹೋರಾಟಕ್ಕೆ 1.50 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಪಿಎಂ-ಕೇರ್ಸ್ ನಿಧಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಪರಿಹಾರ ನಿಧಿ ಹಾಗೂ ಪಶ್ಚಿಮ ಬಂಗಾಳ ಸರ್ಕಾರದ ತುರ್ತು ಪರಿಹಾರ ನಿಧಿಗೆ ತಲಾ 50 ಸಾವಿರ ರೂ. ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net