ಚಾಂಪಿಯನ್ಸ್​ ಟ್ರೋಫಿಗೆ ಮುನ್ನ ಆಸೀಸ್​ಗೆ ಶಾಕ್​! ಮೂವರು ಪ್ರಮುಖ ಆಟಗಾರರು ಮಿಸ್?

web aus
Published on

ಸಿಡ್ನಿ: ಮುಂಬರುವ ಐಸಿಸಿ ಚಾಂಪಿಯನ್ಸ್​ ಟ್ರೋಫಿಗೆ ಮುನ್ನ ಏಕದಿನ ವಿಶ್ವ ಚಾಂಪಿಯನ್​ ಆಸ್ಟ್ರೆಲಿಯಾ ತಂಡಕ್ಕೆ ಆಘಾತ ಎದುರಾಗಿದೆ. ನಾಯಕ ಪ್ಯಾಟ್​ ಕಮ್ಮಿನ್ಸ್​ ಮತ್ತು ವೇಗಿ ಜೋಶ್​ ಹ್ಯಾಸಲ್​ವುಡ್​ ಗಾಯದಿಂದಾಗಿ ಟೂರ್ನಿಯಲ್ಲಿ ಆಡುವ ಬಗ್ಗೆ ಅನುಮಾನ ಮೂಡಿದೆ. ಈಗಾಗಲೆ ಆಲ್ರೌಂಡರ್​ ಮಿಚೆಲ್​ ಮಾರ್ಷ್​ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಕಮ್ಮಿನ್ಸ್​ ಗೈರಾದರೆ ನಾಯಕನ ಹುದ್ದೆ ಅಲಂಕರಿಸಲು ಸ್ಟೀವನ್​ ಸ್ಮಿತ್​ ಮತ್ತು ಟ್ರಾವಿಸ್​ ಹೆಡ್​ ರೇಸ್​ನಲ್ಲಿದ್ದಾರೆ.

ಕಮ್ಮಿನ್ಸ್​ ಇದುವರೆಗೆ ಬೌಲಿಂಗ್​ ಅಭ್ಯಾಸ ಆರಂಭಿಸಿಲ್ಲ. ಕಮ್ಮಿನ್ಸ್​ ಚಾಂಪಿಯನ್​ ಟ್ರೋಫಿಗೆ ಫಿಟ್​ ಆಗುವುದು ಬಹುತೇಕ ಅನುಮಾನವೆಂದು ಆಸೀಸ್​ ತಂಡದ ಮುಖ್ಯ ಕೋಚ್​ ಆಂಡ್ರೋ ಮೆಕ್​ಡೊನಾಲ್ಡ್​ ಬುಧವಾರ ಬಹಿರಂಗಪಡಿಸಿದ್ದಾರೆ. 2ನೇ ಮಗುವಿನ ನಿರೀೆಯಲ್ಲಿ ಕಮ್ಮಿನ್ಸ್​ ಹಾಲಿ ಶ್ರೀಲಂಕಾ ಪ್ರವಾಸದ ಟೆಸ್ಟ್​ ಸರಣಿಯಿಂದ ಹೊರಗುಳಿದಿದ್ದಾರೆ. ಭಾರತ ವಿರುದ್ಧದ ಬಾರ್ಡರ್​&ಗಾವಸ್ಕರ್​ ಟ್ರೋಫಿಯ ವೇಳೆ ಕಮ್ಮಿನ್ಸ್​ಗೆ ಪಾದದ ನೋವು ಕಾಣಿಸಿಕೊಂಡಿತ್ತು.

ಚಾಂಪಿಯನ್ಸ್​ ಟ್ರೋಫಿಗೆ ತಂಡಗಳ ಅಂತಿಮ ಪಟ್ಟಿಯನ್ನು ಸಲ್ಲಿಸಲು ೆಬ್ರವರಿ 12 ಕೊನೇ ದಿನಾಂಕವಾಗಿದ್ದು, ೆಬ್ರವರಿ 19ರಿಂದ ಟೂರ್ನಿ ನಡೆಯಲಿದೆ. ಆಸೀಸ್​ ಈ ಮುನ್ನ ಪ್ರಕಟಿಸಿದ್ದ ತಂಡದಲ್ಲಿ ಕಮ್ಮಿನ್ಸ್​, ಮಾರ್ಷ್​, ಹ್ಯಾಸಲ್​ವುಡ್​ ಸ್ಥಾನ ಪಡೆದಿದ್ದರು. ಹೀಗಾಗಿ ಆಸೀಸ್​ ಇದೀಗ ಮೂವರು ಬದಲಿ ಆಟಗಾರರನ್ನು ಹೆಸರಿಸಬೇಕಾಗಿದೆ. ಮಾರ್ಷ್​ ಸ್ಥಾನದಲ್ಲಿ ಆಲ್ರೌಂಡರ್​ ಮಿಚ್​ ಓವನ್​ ಮತ್ತು ಕಮ್ಮಿನ್ಸ್​, ಹ್ಯಾಸಲ್​ವುಡ್​ ಸ್ಥಾನದಲ್ಲಿ ವೇಗಿಗಳಾದ ಸೀನ್​ ಅಬೋಟ್​ ಮತ್ತು ಸ್ಪೆನ್ಸರ್​ ಜಾನ್ಸರ್​ ಸ್ಥಾನ ಪಡೆಯುವ ನಿರೀಕ್ಷೆ ಇದೆ.

ಇನ್ನಿಬ್ಬರಿಗೂ ಗಾಯದ ಕಳವಳ!

ಚಾಂಪಿಯನ್ಸ್​ ಟ್ರೋಫಿಗೆ ಆಸೀಸ್​ ತಂಡದಲ್ಲಿ ಸ್ಥಾನ ಪಡೆದಿರುವ ಇನ್ನಿಬ್ಬರು ಆಟಗಾರರು ಹಾಗೂ ಆಲ್ರೌಂಡರ್​ಗಳಾದ ಆರನ್​ ಹಾರ್ಡಿ ಮತ್ತು ಮಾರ್ಕಸ್​ ಸ್ಟೋಯಿನಿಸ್​ ಕೂಡ ಗಾಯದ ಕಳವಳ ಹೊಂದಿದ್ದಾರೆ ಎನ್ನಲಾಗಿದೆ. ಸ್ಟೋಯಿನಿಸ್​ ಇತ್ತೀಚೆಗೆ ದಣ ಆಫ್ರಿಕಾದ ಎಸ್​ಎ20 ಲೀಗ್​ನಲ್ಲಿ ಆಡುವಾಗ ಗಾಯಗೊಂಡಿದ್ದು, ಡರ್ಬನ್​ ಸೂಪರ್​ಜೈಂಟ್ಸ್​ ತಂಡದ ಕೊನೇ ಪಂದ್ಯದಲ್ಲಿ ಬೌಲಿಂಗ್​ ಮಾಡಿಲ್ಲ. ಹಾರ್ಡಿ ಇತ್ತೀಚೆಗಷ್ಟೇ ಗಾಯದಿಂದ ಚೇತರಿಸಿಕೊಂಡಿದ್ದು, ಅವರೂ ಬೌಲಿಂಗ್​ನಲ್ಲಿ ಮಾಡುವಾಗ ಅಲ್ಪ ಸಮಸ್ಯೆ ಹೊಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net