ಪಾಕ್​ ಮಾಜಿ ಆಟಗಾರ ಶೋಯೆಬ್ ಅಖ್ತರ್ ಪ್ರಕಾರ ಟಿ20 ವಿಶ್ವಕಪ್ ಎತ್ತಿ ಹಿಡಿಯುವ ತಂಡವಿದು!​

Shoaib Akthar
Published on

ನವದೆಹಲಿ: ಟಿ20 ವಿಶ್ವಕಪ್ ಸೆಮಿಫೈನಲ್​ಗೆ ಕ್ಷಣಗಣನೆ ಆರಂಭವಾಗಿದೆ. ಜೂನ್ 27ರಂದು ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ಮುಖಾಮುಖಿಯಾಗಲಿದ್ದು, ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತವು ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.

2023ರ ಏಕದಿನ ವಿಶ್ವಕಪ್‌ನಲ್ಲಿ ಅಲ್ಪ ಅಂತರದಲ್ಲಿ ಸೋತಿರುವ ಭಾರತ, ಕಿರು ವಿಶ್ವಕಪ್​ ಗೆಲ್ಲುವ ಗುರಿಯೊಂದಿಗೆ ಸೆಮಿಫೈನಲ್ ಪ್ರವೇಶಿಸಿದೆ. ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಟೀಮ್​ ಇಂಡಿಯಾ ಕೂಡ ಒಂದು. ರೋಹಿತ್ ಸೇನೆ ವಿಶ್ವಕಪ್ ಗೆಲ್ಲಬೇಕೆಂದು ಭಾರತೀಯ ಅಭಿಮಾನಿಗಳು ಬಯಸಿದ್ದಾರೆ. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಕೂಡ ಭಾರತ ಪ್ರಶಸ್ತಿ ಗೆಲ್ಲಬೇಕೆಂದು ಬಯಸಿದ್ದಾರೆ. ಅಲ್ಲದೆ, ವಿಶ್ವಕಪ್​ ಎತ್ತಿಹಿಡಿಯುವ ತಂಡ ಕೂಡ ಭಾರತ ಎಂದಿದ್ದಾರೆ.

2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತ ತನ್ನ ಸೋಲಿಗೆ ಆಸ್ಟ್ರೇಲಿಯಾ ವಿರುದ್ಧ ಸೇಡು ತೀರಿಸಿಕೊಂಡಿತು. ಸೂಪರ್-8 ಹಂತದಲ್ಲಿ ಆಸಿಸ್​ ತಂಡವನ್ನು ಹೀನಾಯವಾಗಿ ಸೋಲಿಸಿ ಮನೆಗೆ ಕಳುಹಿಸಿತು. ಸದ್ಯ ಕಿರು ವಿಶ್ವಕಪ್ ಎತ್ತಿಹಿಡಿಯಲು ಭಾರತಕ್ಕೆ ಇನ್ನೆರಡು ಹೆಜ್ಜೆಗಳು ಮಾತ್ರ ಬಾಕಿ ಇದೆ. ಆಸ್ಟ್ರೇಲಿಯಾ ವಿರುದ್ಧ 2023ರ ವಿಶ್ವಕಪ್ ಫೈನಲ್ ಸೋಲಿಗೆ ಸೇಡು ತೀರಿಸಿಕೊಂಡ ಭಾರತ ತಂಡವನ್ನು ಶೋಯೆಬ್ ಅಖ್ತರ್ ಹೊಗಳಿದ್ದಾರೆ.

shoaib akthar

ಆಸ್ಟ್ರೇಲಿಯಾ ವಿರುದ್ಧ ಭಾರತ ಭರ್ಜರಿ ಜಯ ಸಾಧಿಸಿದೆ. ಗೆಲ್ಲಬೇಕಿದ್ದ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಸೋತ ನಂತರ ತೀವ್ರ ನಿರಾಸೆ ಅನುಭವಿಸಿತ್ತು. ಆ ಹತಾಶೆ ಪ್ರತೀಕಾರವಾಗಿ ಬದಲಾಯಿತು. ಅವರು ಈ ಟೂರ್ನಿಯಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದ್ದಾರೆ ಎಂದು ಅಖ್ತರ್ ಹೇಳಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ರೋಹಿತ್ ಶರ್ಮ ಏನು ಮಾಡಬೇಕೋ ಅದೆಲ್ಲವನ್ನೂ ಮಾಡಿದರು. ಅವರು ಸ್ಟಾರ್ಕ್ ಅವರನ್ನು ಎದುರಿಸಿದ ರೀತಿ ಸೂಪರ್. ಒಳ್ಳೆಯ ಉದ್ದೇಶದಿಂದ ಆಡಿದರು. ಅವರು 150 ರನ್ ಗಳಿಸಲು ಬಯಸಿದ್ದರು. ರೋಹಿತ್ ಅವರ ಆಲೋಚನೆಗಳಿಗೆ ಸ್ಪಷ್ಟತೆ ಇದೆ. ಅವರು ಟ್ರೋಫಿಗೆ ಅರ್ಹರು. ಭಾರತ ಗೆಲ್ಲಬೇಕು. ಈ ಟ್ರೋಫಿಯು ಉಪಖಂಡದಲ್ಲಿ ಉಳಿಯಬೇಕು. ಹೀಗಾಗಿ ನನ್ನ ಬೆಂಬಲ ಭಾರತಕ್ಕೆ ಇದೆ ಎಂದು ಶೋಯೆಬ್ ಅಖ್ತರ್ ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net