ಶಿವಮೊಗ್ಗ ಲಯನ್ಸ್‌ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ವಾರಿಯರ್ಸ್‌

mty
Published on

ಬೆಂಗಳೂರು: ನಾಯಕ ಕರುಣ್ ನಾಯರ್ (60 ರನ್,33 ಎಸೆತ, 9 ಬೌಂಡರಿ, 1 ಸಿಕ್ಸರ್) ಅರ್ಧಶತಕ ಹಾಗೂ

ಕೋದಂಡ ಅಜಿತ್ ಕಾರ್ತಿಕ್ (46 ರನ್ ಹಾಗೂ 28ಕ್ಕೆ 2 ವಿಕೆಟ್) ಆಲ್ರೌಂಡ್ ನಿರ್ವಹಣೆಯಿಂದ ಮೈಸೂರು ವಾರಿಯರ್ಸ್‌ ತಂಡ ಎರಡನೇ ಆವೃತ್ತಿಯ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಟೂರ್ನಿಯಲ್ಲಿ ಶಿವಮೊಗ್ಗ ಲಯನ್ಸ್ ಅಜೇಯ ಓಟಕ್ಕೆ ಬ್ರೇಕ್ ಹಾಕಿ 12 ರನ್‌ಗಳ ಗೆಲುವು ದಾಖಲಿಸಿದೆ. ಇದರೊಂದಿಗೆ ಕರುಣ್ ನಾಯರ ಪಡೆ ಸತತ ಎರಡನೇ ಜಯ ಕಂಡಿದೆ.

ಚಿನ್ನಸ್ವಾಮಿ ಅಂಗಣದಲ್ಲಿ ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಶಿವಮೊಗ್ಗ ತಂಡದ ನಾಯಕ ಶ್ರೇಯಸ್ ಗೋಪಾಲ್ ಫೀಲ್ಡಿಂಗ್ ಆಯ್ದುಕೊಂಡರು. ಮೊದಲು ಬ್ಯಾಟಿಂಗ್ ನಡೆಸಿದ ಮೈಸೂರು ವಾರಿಯರ್ಸ್‌ ತಂಡ 9 ವಿಕೆಟ್‌ಗೆ 190 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ಆರಂಭಿಕ ಆರ್. ಸಮರ್ಥ್ (2) ವಿಕೆಟ್ ಬೇಗನೇ ಕಳೆದುಕೊಂಡ ಮೈಸೂರು ಪರ ಸಿಎ ಕಾರ್ತಿಕ್ ಹಾಗೂ ಕರುಣ್ ನಾಯರ್ ಎರಡನೇ ವಿಕೆಟ್‌ಗೆ 90 ರನ್ ಕಲೆಹಾಕಿದರು. ಕರುಣ್ ನಾಯರ್ 27 ಎಸೆತದಲ್ಲಿ ಸತತ ಮೂರನೇ ಅರ್ಧಶತಕ ಬಾರಿಸಿದರು. ಸ್ಲಾಗ್ ಓವರ್‌ಗಳಲ್ಲಿ ಮನೋಜ್ ಭಾಂಡಗೆ (29) ಬಿರುಸಿನ ಆಟದ ಮೂಲಕ ತಂಡದ ಮೊತ್ತ ಹೆಚ್ಚಿಸಿದರು.

ಪ್ರತಿಯಾಗಿ ಮೈಸೂರು ವಾರಿಯರ್ಸ್‌ನ ಸಂಘಟಿತ ಬೌಲಿಂಗ್ ದಾಳಿಯ ಎದುರು ಶಿವಮೊಗ್ಗ ಲಯನ್ಸ್ ತಂಡ 9 ವಿಕೆಟ್‌ಗಳಲ್ಲಿ 178 ರನ್ ಪೇರಿಸಲಷ್ಟೇ ಸಾಧ್ಯವಾಗಿ ಟೂರ್ನಿಯಲ್ಲಿ ಮೊದಲ ಸೋಲಿನ ರುಚಿ ಕಂಡಿತು.ಆರಂಭಿಕ ರೋಹನ್ ಕದಂ (31) ಶಿವಮೊಗ್ಗ ಪರ ಗರಿಷ್ಠ ಸ್ಕೋರರ್ ಎನಿಸಿದರು.

ಮೈಸೂರು ವಾರಿಯರ್ಸ್‌: 9 ವಿಕೆಟ್‌ಗೆ 190 (ಆರ್. ಸಮರ್ಥ್ 2, ಸಿಎ ಕಾರ್ತಿಕ್ 46, ಕರುಣ್ 60, ಜೆ. ಸುಚಿತ್ 6, ತುಷಾರ್ 12, ಮನೋಜ್ ಭಾಂಡಗೆ 29, ವಿ. ಕೌಶಿಕ್ 34ಕ್ಕೆ2,ಕ್ರಾಂತಿ ಕುಮಾರ್ 35ಕ್ಕೆ2, ಶ್ರೇಯಸ್ 35ಕ್ಕೆ1).

ಶಿವಮೊಗ್ಗ ಲಯನ್ಸ್: 9 ವಿಕೆಟ್‌ಗೆ 178 (ನಿಹಾಲ್ 11, ರೋಹನ್ ಕದಂ 31, ರೋಹನ್ ನವೀನ್ 28, ಅಭಿನವ್ 26, ಶ್ರೇಯಸ್ 26, ಶಿವರಾಜ್ 29*, ಎಂ. ವೆಂಕಟೇಶ್ 18ಕ್ಕೆ3, ಸಿಎ ಕಾರ್ತಿಕ್ 28ಕ್ಕೆ2, ಮೊನೀಷ್ ರೆಡ್ಡಿ 33ಕ್ಕೆ2). ಪಂದ್ಯಶ್ರೇಷ್ಠ: ಸಿಎ ಕಾರ್ತಿಕ್.

ನಾಳೆಯ ಪಂದ್ಯಗಳು

ಬೆಂಗಳೂರು ಬ್ಲಾಸ್ಟರ್ಸ್‌-ಮೈಸೂರು ವಾರಿಯರ್ಸ್‌

ಆರಂಭ: ಮಧ್ಯಾಹ್ನ 1ಕ್ಕೆ

ಹುಬ್ಬಳ್ಳಿ ಟೈಗರ್ಸ್‌-ಶಿವಮೊಗ್ಗ ಲಯನ್ಸ್

ಆರಂಭ: ಸಂಜೆ 5.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಕನ್ನಡ/2.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net