

ಶಿವಮೊಗ್ಗ: ರಾಜ್ಯದ ಅಂಡರ್-19 ಕ್ರಿಕೆಟ್ ತಂಡದಲ್ಲಿ ಶಿವಮೊಗ್ಗದ ಎಸ್.ಲೋಹಿತ್ ಸ್ಥಾನ ಪಡೆದಿದ್ದಾರೆ.
ನ.13ರಿಂದ 21ರವರೆಗೆ ನೇಪಾಳದಲ್ಲಿ ನಡೆಯುವ 19 ವರ್ಷದೊಳಗಿನ ಪಂದ್ಯಾವಳಿಗೆ ಶಿವಮೊಗ್ಗ ಹರಿಗೆ ನಿವಾಸಿ ಶಿವಕುಮಾರ್-ನಾಗರತ್ನಾ ಅವರ ಪುತ್ರ ಲೋಹಿತ್ ಆಯ್ಕೆಯಾಗಿದ್ದಾನೆ. ಒಡಿಶಾದ ಕಟಕ್‌ನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಪಂದ್ಯಾವಳಿಗಳಲ್ಲೂ ಲೋಹಿತ್ ಕರ್ನಾಟಕ ತಂಡದಿಂದ ಭಾಗವಹಿಸಿದ್ದರು.
ಎಸ್.ಲೋಹಿತ್ ಪ್ರಸ್ತುತ ಡಿವಿಎಸ್ ಕಾಲೇಜಿನಲ್ಲಿ ದ್ವಿತೀಯ ಪಿಯು ಓದುತ್ತಿದ್ದು, ಸಹ್ಯಾದ್ರಿ ಕ್ರಿಕೆಟ್ ಅಕಾಡೆಮಿಯಲ್ಲಿ ನಾಗರಾಜ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಶಿವಮೊಗ್ಗದ ಎಫ್‌ಸಿಸಿ ತಂಡದ ಪರ ಪ್ರಥಮ ದರ್ಜೆ ಪಂದ್ಯಾವಳಿಗಳಲ್ಲಿ ಲೋಹಿತ್ ಆಡಿದ್ದಾರೆ.