69 ಕೋಟಿ ರೂ. ಮೌಲ್ಯದ ಸೂಪರ್ ಲಕ್ಸುರಿ ಅಪಾರ್ಟ್‌ಮೆಂಟ್ ಖರೀದಿಸಿದ ಶಿಖರ್ ಧವನ್! Shikhar Dhawan

shikhar dhawan (1)
Published on

Shikhar Dhawan: ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರ ಶಿಖರ್ ಧವನ್  ಇತ್ತೀಚೆಗೆ ಅವರು ಇನ್​ಸ್ಟಾಗ್ರಾಮ್​​  ಪೋಸ್ಟ್ ಮೂಲಕ ತಮ್ಮ ಹೊಸ ಗೆಳತಿಯೊಂದಿಗಿನ ಸಂಬಂಧವನ್ನು ದೃಢಪಡಿಸಿದರು.  ಇದೀಗ ದುಬಾರಿ ಮೌಲ್ಯದ ಅಪಾರ್ಟ್​​ಮೆಂಟ್​​ ಖರೀದಿ ಮಾಡಿದ್ದಾರೆ.

ಐರ್ಲೆಂಡ್‌ನ ಸೋಫಿ ಶೈನ್. ಸೋಫಿ ಐರಿಶ್ ಉತ್ಪನ್ನ ಸಲಹೆಗಾರರಾಗಿದ್ದು, ಅಬುಧಾಬಿಯ ನಾರ್ದರ್ನ್ ಟ್ರಸ್ಟ್ ಕಾರ್ಪೊರೇಷನ್‌ನಲ್ಲಿ ಎರಡನೇ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಸಮಯದಲ್ಲಿ ಧವನ್ ಮತ್ತು ಸೋಫಿ ಒಟ್ಟಿಗೆ ಕಾಣಿಸಿಕೊಂಡರು. ಅಂದಿನಿಂದ ಅವರು ಒಟ್ಟಿಗೆ ಸಮಯ ಕಳೆಯುತ್ತಿದ್ದಾರೆ.

ಧವನ್ ಮತ್ತು ಸೋಫಿ ನಡುವೆ ವಯಸ್ಸಿನಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ. ಸೋಫಿ ಜೂನ್ 1990 ರಲ್ಲಿ ಐರ್ಲೆಂಡ್‌ನ ಲಿಮೆರಿಕ್‌ನಲ್ಲಿ ಜನಿಸಿದರು. ಅದರ ಪ್ರಕಾರ, ಅವರ ಪ್ರಸ್ತುತ ವಯಸ್ಸು 35 ವರ್ಷಗಳು. ಅವರು ಲಿಮೆರಿಕ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಮಾರ್ಕೆಟಿಂಗ್ ಮತ್ತು ಮ್ಯಾನೇಜ್ಮೆಂಟ್​​ನಲ್ಲಿ ಪದವಿ ಪಡೆದಿದ್ದಾರೆ. ಅವರು ಪ್ರಸ್ತುತ ಯುಎಇಯಲ್ಲಿ ವಾಸಿಸುತ್ತಿದ್ದಾರೆ. ಮತ್ತೊಂದೆಡೆ, ಶಿಖರ್ ಧವನ್ ಅವರಿಗೆ 39 ವರ್ಷ. ಅಂದರೆ ಅವರಿಬ್ಬರ ನಡುವೆ ಕೇವಲ 4 ವರ್ಷಗಳ ವಯಸ್ಸಿನ ವ್ಯತ್ಯಾಸವಿದೆ.

ಸೋಫಿಯ ಒಟ್ಟು ಗಳಿಕೆಯು ಸಾರ್ವಜನಿಕವಾಗಿ ಲಭ್ಯವಿಲ್ಲ. ಆದರೆ ಕಾರ್ಪೊರೇಟ್ ವಲಯದಲ್ಲಿ ಅವರ ಕೆಲಸದ ಕಾರಣದಿಂದಾಗಿ ಅವರ ಸಂಬಳ ಗಣನೀಯವಾಗಿದೆ. Cricketledger.com ವರದಿಯ ಪ್ರಕಾರ, ಅಬುಧಾಬಿಯ ನಾರ್ದರ್ನ್ ಟ್ರಸ್ಟ್ ಕಾರ್ಪೊರೇಷನ್‌ನ ಎರಡನೇ ಉಪಾಧ್ಯಕ್ಷೆಯಾಗಿರುವ ಸೋಫಿ ಅವರ ನಿವ್ವಳ ಮೌಲ್ಯ ಸುಮಾರು 1.2 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ.  ಶಿಖರ್ ಧವನ್ ಅವರ ಒಟ್ಟು ನಿವ್ವಳ ಮೌಲ್ಯ ಸುಮಾರು 125 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಧವನ್ 2023 ರಲ್ಲಿ ತಮ್ಮ ಮಾಜಿ ಪತ್ನಿ ಆಯೇಷಾ ಮುಖರ್ಜಿ ಅವರಿಂದ ವಿಚ್ಛೇದನ ಪಡೆದರು. ಅವರಿಗೆ ಜೋರಾವರ್ ಎಂಬ ಮಗನಿದ್ದಾನೆ. ಈಗ ಧವನ್ ಮತ್ತು ಸೋಫಿ ಹೊಸ ಪ್ರಯಾಣವನ್ನು ಆರಂಭಿಸಿದ್ದಾರೆ.

ರಿಯಲ್ ಎಸ್ಟೇಟ್ ವಿಶ್ಲೇಷಣಾ ಸಂಸ್ಥೆ ಸಿಆರ್‌ಇ ಮ್ಯಾಟ್ರಿಕ್ಸ್‌ಗೆ ಲಭ್ಯವಾಗಿರುವ ದಾಖಲೆಗಳ ಪ್ರಕಾರ, ಮಾಜಿ ಕ್ರಿಕೆಟಿಗ ಶಿಖರ್ ಧವನ್ ಗುರುಗ್ರಾಮ್‌ನಲ್ಲಿರುವ ಡಿಎಲ್‌ಎಫ್‌ನ ಇತ್ತೀಚಿನ ಸೂಪರ್-ಐಷಾರಾಮಿ ಕೊಡುಗೆಯಾದ ದಿ ಡೇಲಿಯಾಸ್‌ನಲ್ಲಿ 69 ಕೋಟಿ ರೂ.ಗಳಿಗೆ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ.

ದಾಖಲೆಗಳ ಪ್ರಕಾರ, ಈ ಸೂಪರ್-ಐಷಾರಾಮಿ ಅಪಾರ್ಟ್ಮೆಂಟ್ 6,040 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಗುರುಗ್ರಾಮ್‌ನ ಸೆಕ್ಟರ್ 54, ದಿ ಡೇಲಿಯಾಸ್, ಡಿಎಲ್‌ಎಫ್ 5 ಗಾಲ್ಫ್ ಲಿಂಕ್ಸ್‌ನಲ್ಲಿ ಇದೆ. ಈ ಅಧಿಕ ಮೌಲ್ಯದ ಆಸ್ತಿಯ ಖರೀದಿಯನ್ನು ಫೆಬ್ರವರಿ 2025 ರ ಮೊದಲ ವಾರದಲ್ಲಿ ದಾಖಲಿಸಲಾಗಿದೆ. ಧವನ್ 3.28 ಕೋಟಿ ರೂ.ಗಳ ಮುದ್ರಾಂಕ ಶುಲ್ಕವನ್ನು ಪಾವತಿಸಬೇಕಾಗಿತ್ತು.

ಅಪಾರ್ಟ್ಮೆಂಟ್ ಬೆಲೆ 65.61 ಕೋಟಿ ರೂ. ಮುದ್ರಾಂಕ ಶುಲ್ಕ ಸೇರಿದಂತೆ ಒಟ್ಟು ಬೆಲೆ 68.89 ಕೋಟಿ ರೂ. ಈ ಸೂಪರ್-ಐಷಾರಾಮಿ ಫ್ಲಾಟ್‌ನಲ್ಲಿ ಐದು ಪಾರ್ಕಿಂಗ್ ಸ್ಥಳಗಳನ್ನು ಒದಗಿಸಲಾಗಿದೆ. ಈ ಅಪಾರ್ಟ್‌ಮೆಂಟ್‌ನ ದರ ಪ್ರತಿ ಚದರ ಅಡಿಗೆ ಕಾರ್ಪೆಟ್ ಪ್ರದೇಶದ ಆಧಾರದ ಮೇಲೆ 1,14,068.61 ರೂ. ಆದರೆ, ಸೂಪರ್ ಏರಿಯಾ ಆಧರಿಸಿ ಲೆಕ್ಕ ಹಾಕಿದರೆ, ಪ್ರತಿ ಚದರ ಅಡಿಗೆ ದರ 1,08,631 ರೂ. ಎನ್ನಲಾಗಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net