ಶಿಖರ್ ಧವನ್ ಕುಟುಂಬಕ್ಕೆ ಇಬ್ಬರು ಹೊಸ ಅತಿಥಿಗಳ ಆಗಮನ..!

shikar dhawan for web
Published on

ನವದಹೆಲಿ: ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಮನೆಗೆ ಇಬ್ಬರು ಹೊಸ ಅತಿಥಿಗಳ ಆಗಮನವಾಗಿದೆ. ಈ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮದಿಂದ ಧವನ್ ಹಂಚಿಕೊಂಡಿದ್ದಾರೆ. ಹೊಸ ಸದಸ್ಯರುಗಳಿಗೆ ‘ಚೋಲೆ ಮತ್ತು ವ್ಯಾಲೆಂಟೈನ್’ ಅಂತ ಹೆಸರಿಟ್ಟಿದ್ದಾರೆ. ತಮ್ಮ ಮಗ ಜೊರಾವರ್ ಜತೆಗೆ ಎರಡು ಮುದ್ದಿ ನಾಯಿಮರಿಗಳೊಂದಿಗೆ ಇರುವ ಫೋಟೋವನ್ನು ಧವನ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಎರಡು ದೇಸೀ ತಳಿಯ ನಾಯಿ ಮರಿಗಳನ್ನು ಧವನ್ ಖರೀದಿಸಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಕ್ರಿಕೆಟ್ ಚಟುವಟಿಕೆಗಳಿಂದ ದೂರ ಉಳಿದಿರುವ ಧವನ್‌ಗೆ ಸಾಮಾಜಿಕ ಜಾಲತಾಣವೇ ಪ್ರಮುಖ ಅಸವಾಗಿದೆ. ಪತ್ನಿ, ಮಗನೊಂದಿಗೆ ದೆಹಲಿಯಲ್ಲಿ ಲಾಕ್ ಆಗಿರುವ ಧವನ್, ವಿವಿಧ ಹಾಡುಗಳಿಗೆ ವಿಡಿಯೋ ಮಾಡುವ ಮೂಲಕ ಗಮನಸೆಳೆಯುತ್ತಿದ್ದಾರೆ. ಇದೀಗ ಎರಡು ದೇಸೀ ತಳಿಯ ನಾಯಿಮರಿ ಖರೀದಿಸಿದ್ದಾರೆ. ಟ್ವಿಟರ್‌ನಲ್ಲಿ ಫೋಟೋ ಪ್ರಕಟಿಸಿದ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ವೇಗಿ ಮಿಚೆಲ್ ಮೇಕ್ಲೀನಘನ್ ‘ನೈಸ್’ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಜತೆಗೆ ಅಭಿಮಾನಿಗಳು ಧವನ್ ಪ್ರಾಣಿ ಪ್ರೀತಿಯನ್ನು ಕೊಂಡಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net