ಕ್ರೀಡಾಕೂಟದಲ್ಲಿ ಶೆಟ್ಟಿಹಳ್ಳಿ ಕೆಪಿಎಸ್ ಸಾಧನೆ

Shettyhalli KPS
ಸರ್ಕಾರಿ ಪ್ರೌಢಶಾಲೆಗಳ ವಲಯಮಟ್ಟದ ಕ್ರೀಡಾಕೂಟದ ಹಲವು ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಶೆಟ್ಟಿಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳು. ಚೆನ್ನಮ್ಮ ಧೂಳಪ್ಪವರ್, ರಶ್ಮಿ, ರೇವತಿ, ಶೋಭಾ ಇತರರಿದ್ದರು.
Published on

ಶಿವಮೊಗ್ಗ: ನಗರದ ನೆಹರು ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಸರ್ಕಾರಿ ಪ್ರೌಢಶಾಲೆಗಳ ವಲಯಮಟ್ಟದ ಕ್ರೀಡಾಕೂಟದಲ್ಲಿ ಶೆಟ್ಟಿಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳು ಗುಂಪು ಆಟ ಮತ್ತು ವೈಯಕ್ತಿಕ ಆಟಗಳ ವಿಭಾಗದಲ್ಲಿ ಅನೇಕ ಪ್ರಶಸ್ತಿ ಹಾಗೂ ಬಹುಮಾನ ಪಡೆದಿದ್ದಾರೆ.

ಕಬಡ್ಡಿಯಲ್ಲಿ ಬಾಲಕಿ-ಬಾಲಕಿಯರ ತಂಡ ಪ್ರಥಮ, ಉದ್ದ ಜಿಗಿತ ಮತ್ತು ಟ್ರಿಪಲ್ ಜಂಪ್‌ನಲ್ಲಿ ಎಸ್.ಪಿ.ಕರುಣ್ ಪ್ರಥಮ ಸ್ಥಾನ, ಬಾಲಕರ ರಿಲೇಯಲ್ಲಿ ಗೌತಮ್, ರಾಕೇಶ್, ಎಸ್.ಪಿ.ಕರುಣ್, ಇ.ವೆಂಕಟೇಶ್ ಪ್ರಥಮ ಸ್ಥಾನ, ಬಾಲಕಿಯರ ರಿಲೇಯಲ್ಲಿ ಶ್ರೇಯಾ, ತನುಶ್ರೀ, ಬೃಂದಾ, ಸನಾ ಪ್ರಥಮ ಸ್ಥಾನ ಪಡೆದರು. ಶಾಲೆ ಹಿರಿಯ ಶಿಕ್ಷಕಿ ಚೆನ್ನಮ್ಮ ಧೂಳಪ್ಪವರ್, ಶಿಕ್ಷಕರಾದ ರಶ್ಮಿ, ರೇವತಿ, ಶೋಭಾ, ಆದಿಲಕ್ಷ್ಮೀ, ಡಾ. ಕೆ.ಪಿ.ಪ್ರಕಾಶ್, ಎಚ್.ಟಿ.ಪ್ರಕಾಶ್, ಎಚ್.ನಾಗರಾಜ್, ಕೆ.ನಾಗರಾಜ್, ಆಸಿಮುಲ್ಲ ಶರೀಫ್, ಮಲ್ಲಿಕಾರ್ಜುನ್, ಅನ್ನಪೂರ್ಣಾ, ಸುಮಾ, ಎಚ್.ಲಕ್ಷ್ಮೀ, ಡಾ. ನಾಗವೇಣಿ, ಎಸ್‌ಡಿಎಂಸಿ ಅಧ್ಯಕ್ಷ ವಿಜಯಕುಮಾರ್, ನಾಗರಾಜ್, ಕೃಷ್ಣಮೂರ್ತಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net