

ನವದೆಹಲಿ: ಆರಂಭಿಕ ಬ್ಯಾಟುಗಾರ್ತಿ ಶೆಫಾಲಿ ವರ್ಮ ಕಳಪೆ ಫಾರ್ಮ್ ಹಿನ್ನೆಲೆಯಲ್ಲಿ ಮುಂಬರುವ ಆಸ್ಟ್ರೆಲಿಯಾ ಪ್ರವಾಸದ ಮಹಿಳೆಯರ ಏಕದಿನ ಸರಣಿಗೆ ಭಾರತ ತಂಡದಿಂದ ಹೊರಬಿದ್ದಿದ್ದಾರೆ. ಡಿಸೆಂಬರ್ 3ರಿಂದ ನಡೆಯಲಿರುವ 3 ಪಂದ್ಯಗಳ ಸರಣಿಗೆ ಬಿಸಿಸಿಐ ಮಂಗಳವಾರ 16 ಆಟಗಾರ್ತಿಯರ ಭಾರತ ತಂಡವನ್ನು ಪ್ರಕಟಿಸಿದ್ದು, ಕನ್ನಡತಿ ಶ್ರೇಯಾಂಕಾ ಪಾಟೀಲ್ ಗಾಯದಿಂದಾಗಿ ಅಲಭ್ಯರಾಗಿದ್ದಾರೆ.
20 ವರ್ಷದ ಶೆಫಾಲಿ ಇತ್ತೀಚೆಗೆ ಏಕದಿನ ಮಾದರಿಯಲ್ಲಿ ರನ್ಬರ ಎದುರಿಸಿದ್ದು, ಹಾಲಿ ವರ್ಷ ಆಡಿದ 6 ಇನಿಂಗ್ಸ್ಗಳಲ್ಲಿ 108 ರನ್ ಮಾತ್ರ ಗಳಿಸಿದ್ದಾರೆ. ಈ ಪೈಕಿ 33 ರನ್ ಗಳಿಸಿರುವುದೇ ಗರಿಷ್ಠವಾಗಿದೆ. ಕಳೆದ ಕಿವೀಸ್ ವಿರುದ್ಧದ ತವರಿನ ಸರಣಿಯಲ್ಲಿ ಆಡಿದ್ದ ಉಮಾ ಛೇಟ್ರಿ, ಡಿ. ಹೇಮಲತಾ ಮತ್ತು ಸಯಾಲಿ ಸಟ್ಘರೆ ಕೂಡ ಹೊರಬಿದ್ದಿದ್ದಾರೆ.
ಹರ್ಲೀನ್ ಡಿಯೋಲ್, ಮಿನ್ನು ಮಣಿ, ಟಿಟಾಸ್ ಸಾಧು ಮತ್ತು ಪ್ರಿಯಾ ಪೂನಿಯಾ ತಂಡಕ್ಕೆ ಮರಳಿದ್ದಾರೆ. 12ನೇ ತರಗತಿ ಪರೀೆಯಿಂದಾಗಿ ಕಿವೀಸ್ ಸರಣಿಗೆ ಗೈರಾಗಿದ್ದ ವಿಕೆಟ್ ಕೀಪರ್-ಬ್ಯಾಟರ್ ರಿಚಾ ಘೋಷ್ ಕೂಡ ವಾಪಸ್ ಆಗಿದ್ದಾರೆ. ಆಶಾ ಶೋಭನಾ ಮತ್ತು ಪೂಜಾ ವಸ್ತ್ರಾಕರ್ ಗಾಯದಿಂದಾಗಿ ಹೊರಗುಳಿದಿದ್ದಾರೆ.
ತಂಡ: ಹರ್ಮಾನ್ಪ್ರೀತ್ ಕೌರ್ (ನಾಯಕಿ), ಸ್ಮ$ತಿ ಮಂದನಾ (ಉಪನಾಯಕಿ), ಪ್ರಿಯಾ ಪೂನಿಯಾ, ಜೆಮೀಮಾ ರೋಡ್ರಿಗಸ್, ಹರ್ಲೀನ್ ಡಿಯೋಲ್, ಯಸ್ತಿಕಾ ಭಾಟಿಯಾ (ವಿ.ಕೀ), ರಿಚಾ ಘೋಷ್ (ವಿ.ಕೀ), ತೇಜಲ್ ಹಸಬ್ನಿಸ್, ದೀಪ್ತಿ ಶರ್ಮ, ಮಿನ್ನು ಮಣಿ, ಪ್ರಿಯಾ ಮಿಶ್ರಾ, ರಾಧಾ ಯಾದವ್, ಟಿಟಾಸ್ ಸಾಧು, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್, ಸೈಮಾ ಠಾಕೊರ್.