ಭಾರತ ತಂಡದಲ್ಲಿ ಕಿಂಗ್​, ಸ್ಟೈಲಿಶ್​ ಮತ್ತು ಬಿಲ್ಡಪ್​ ಆಟಗಾರ ಯಾರು? ಮೊಹಮ್ಮದ್ ಶಮಿ ಕೊಟ್ಟ ಉತ್ತರ ವೈರಲ್​

Mohammed Shami 1
Published on

ನವದೆಹಲಿ: ಟೀಮ್​ ಇಂಡಿಯಾದ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಖ್ಯಾತ ಪತ್ರಕರ್ತ ಶುಭಂಕರ್ ಮಿಶ್ರಾ ಅವರೊಂದಿಗೆ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಅವರು ಹಲವು ಆಸಕ್ತಿದಾಯಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ, ಕೆಲವು ತಮಾಷೆಯ ಕಾಮೆಂಟ್‌ಗಳನ್ನು ಸಹ ಮಾಡಿದ್ದಾರೆ.

ಸಂದರ್ಶನದಲ್ಲಿ ತಮ್ಮ ವೃತ್ತಿಜೀವನದ ಜೊತೆಗೆ, ತಮ್ಮ ವೈಯಕ್ತಿಕ ಜೀವನದ ಬಗ್ಗೆ ಅನೇಕ ಆಸಕ್ತಿದಾಯಕ ವಿಷಯಗಳನ್ನು ಬಹಿರಂಗಪಡಿಸಿದ ಶಮಿ, ಭಾರತ ತಂಡದ ಆಟಗಾರರ ಬಗ್ಗೆ ಮಾತನಾಡುತ್ತಾ ತಮಾಷೆಯ ಉತ್ತರಗಳನ್ನು ನೀಡಿದರು. ಟೀಮ್ ಇಂಡಿಯಾದಲ್ಲಿ ಬಿಲ್ಡಪ್​ ಬಾಯ್ ಎಂದು ಕರೆಸಿಕೊಳ್ಳುವವರು ಯಾರು? ಕಿಂಗ್ ಎಂದರೆ ಯಾರು ನೆನಪಿಗೆ ಬರುತ್ತಾರೆ? ಟೀಮ್​ನಲ್ಲಿ ಸ್ಟೈಲಿಶ್ ಪ್ಲೇಯರ್ ಯಾರು? ಹೀಗೆ ಹಲವು ಸಂಗತಿಗಳನ್ನು ಬಹಿರಂಗಪಡಿಸಿದರು.

ಸದ್ಯ ಶಮಿ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪತ್ರಕರ್ತ ಮಿಶ್ರಾ ಅವರ ಪ್ರಶ್ನೆಗಳಿಗೆ ಒಂದೇ ಮಾತಿನಲ್ಲಿ ಶಮಿ ಉತ್ತರಿಸಿದರು. ಕಿಂಗ್ ಎಂಬ ಪದವನ್ನು ಕೇಳಿದಾಗ ಯಾರು ನೆನಪಿಗೆ ಬರುತ್ತಾರೆ ಎಂಬ ಪ್ರಶ್ನೆಗೆ ವಿರಾಟ್ ಕೊಹ್ಲಿ ಹೆಸರನ್ನು ಹೇಳಿದರು. ಸ್ಪೀಡ್​ ಯಾರು ಎಂಬ ಪ್ರಶ್ನೆಗೆ ಜಡೇಜಾ ಹೆಸರು, ದೇಸಿ ಹುಡುಗ ಯಾರೆಂಬುದಕ್ಕೆ ತನ್ನ ಹೆಸರು ಹೇಳಿದರು.

ಚಿನ್ನದ ತೋಳು ಅಂದರೆ ಮಹೇಂದ್ರ ಸಿಂಗ್ ಧೋನಿ, ಲಪ್ಪೆಬಾಸ್​ ಅಂದರೆ ಸಿರಾಜ್, ಫೇಕು (ಬಿಲ್ಡಪ್​ ರಾಜ) ಯಾರೆಂಬುದಕ್ಕೆ ಜಡೇಜ ಹೆಸರನ್ನು ಶಮಿ ಹೇಳಿದರು. ಭಯಾನಕ ಯಾರೆಂಬ ಪ್ರಶ್ನೆಗೆ ಜಸ್ಪ್ರೀತ್ ಬುಮ್ರಾ ಮತ್ತು ಸ್ಟೈಲಿಶ್ ಎಂದರೆ ವಿರಾಟ್ ಕೊಹ್ಲಿ ಎಂದರು. ಆದರೆ, ಇದರಲ್ಲಿ ಜಡೇಜಾ ಬಗ್ಗೆ ಹೇಳಿರುವ ವಿಷಯಗಳು ಕುತೂಹಲಕಾರಿಯಾಗಿವೆ.

ಇದಿಷ್ಟೇ ಅಲ್ಲದೆ, ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮ ನಾಯಕತ್ವ, ಟಿ20 ವಿಶ್ವಕಪ್ ಗೆಲುವು ಸೇರಿದಂತೆ ಹಲವು ವಿಷಯಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಸದ್ಯ ಗಾಯದಿಂದ ಚೇತರಿಸಿಕೊಂಡು ಫಿಟ್ ಆಗಲು ಕಸರತ್ತು ನಡೆಸುತ್ತಿರುವ ಶಮಿ, ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡುವ ಸಾಧ್ಯತೆ ಇದೆ.

2023ರ ಏಕದಿನ ವಿಶ್ವಕಪ್ ಬಳಿಕ ಶಮಿ ಮತ್ತೆ ಮೈದಾನಕ್ಕೆ ಇಳಿಯಲಿಲ್ಲ. ಆ ವಿಶ್ವಕಪ್‌ನಲ್ಲಿ ಶಮಿ ಅದ್ಭುತ ಪ್ರದರ್ಶನ ನೀಡಿದರು. ಏಕದಿನ ವಿಶ್ವಕಪ್​ನಲ್ಲಿ ಮೊದಲ ನಾಲ್ಕು ಪಂದ್ಯಗಳನ್ನು ಆಡದ ಶಮಿ ಐದನೇ ಪಂದ್ಯದಿಂದ ತಂಡಕ್ಕೆ ಸೇರಿದರು. ಬಳಿಕ ಮಿಂಚಿನ ಬೌಲಿಂಗ್‌ ದಾಳಿಯೊಂದಿಗೆ ಮಿಂಚಿದರು. ವಿಶ್ವಕಪ್‌ನಲ್ಲಿ ನೋವಿನ ನಡುವೆಯೇ ಆಡಿದ ಶಮಿ, ನಂತರ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳುವತ್ತ ಗಮನ ಹರಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net