ಆತ ಭಾರತ ಪರ... ನಮ್ಮ ಬ್ಯಾಟರ್​ ಔಟ್​ ಆಗಲಿಲ್ಲ! ಐಪಿಎಲ್​ನತ್ತ ಬೆರಳು ಮಾಡಿದ ಶಾಹೀದ್​ ಅಫ್ರಿದಿ | Catch Controversy

ವಿಜಯವಾಣಿ - 2025-09-23T134029.980
Published on

Catch Controversy: ಭಾನುವಾರ (ಸೆ.21) ನಡೆದ ಏಷ್ಯಾಕಪ್‌ ಪೈಪೋಟಿಯಲ್ಲಿ ಸೂಪರ್​ 4 ಭಾಗವಾಗಿ ಎರಡನೇ ಬಾರಿಗೆ ಭಾರತ ಎದುರು ಮಂಡಿಯೂರಿದ ಪಾಕ್​, ಭಾರೀ ಟೀಕೆ, ವ್ಯಂಗಗಳಿಗೆ ಗುರಿಯಾಯಿತು. 6 ವಿಕೆಟ್​ಗಳ ಭರ್ಜರಿ ಜಯ ಗಳಿಸಿದ ಟೀಮ್ ಇಂಡಿಯಾ ವಿರುದ್ಧ ತೀವ್ರ ಕಿಡಿಕಾರಿರುವ ಪಾಕಿಸ್ತಾನ, ತಮ್ಮ ಬ್ಯಾಟರ್​ ಫಖರ್ ಜಮಾನ್ ಔಟ್ ಆಗಿರಲಿಲ್ಲ. ಆದರೆ, ಅಂಪೈರ್​ ಬೇಕೆಂತಲೇ ಔಟ್​ ಎಂದು ಘೋಷಿಸಿದರು ಎಂದು ಆರೋಪಿಸಿದ್ದಾರೆ.

ಅಷ್ಟಕ್ಕೂ ಏನಾಯ್ತು?

ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಿ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಕ್ಯಾಚ್ ಪಡೆದಾಗ ಫಖರ್ ಜಮಾನ್ ಕೇವಲ 15 ರನ್ ಗಳಿಸಿದ್ದರು. ಸ್ಯಾಮ್ಸನ್ ಹಿಡಿದ ಕ್ಯಾಚ್ ಔಟ್​ ಅಲ್ಲ ಎಂದು ಪಾಕ್​ ವಾದಿಸಿದರೆ, ಈ ಕ್ಯಾಚ್ ತೆಗೆದುಕೊಂಡಾಗ ಬಾಲ್​ ನೆಲವನ್ನು ಮುಟ್ಟಿ ನಂತರ ಕೀಪರ್​ ಗ್ಲೌಸ್‌ಗೆ ಹೋಗಿದೆ ಎಂದು ಹೇಳಲಾಯಿತು. ವಾಸ್ತವವಾಗಿ, ಸಂಜು ಹಿಡಿದ ಕ್ಯಾಚ್​ ಅನ್ನು ಫೀಲ್ಡ್ ಅಂಪೈರ್ ನೇರವಾಗಿ ಟಿವಿ ಅಂಪೈರ್‌ಗೆ ವರ್ಗಾಯಿಸಿ, ಸಹಾಯ ಕೋರಿದರು. ಹಲವಾರು ಬಾರಿ ಪರಿಶೀಲಿಸಿದ ಬಳಿಕ, ಟಿವಿ ಅಂಪೈರ್ ಔಟ್ ಎಂದು ಘೋಷಿಸಿದರು.

ಇದನ್ನೇ ದೊಡ್ಡ ವಿವಾದವನ್ನಾಗಿ ಮಾಡಿರುವ ಪಾಕ್​ ಆಟಗಾರರು, ಟೀಮ್ ಇಂಡಿಯಾ ಮತ್ತು ಅಂಪೈರ್ ವಿರುದ್ಧ ತಿರುಗಿಬಿದ್ದಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಪಿಸಿಬಿ, ಐಸಿಸಿಗೆ ದೂರು ಕೂಡ ನೀಡಿದ್ದು, ಟಿವಿ ಅಂಪೈರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ ಎಂದು ಒಂದಷ್ಟು ಕ್ರಿಕೆಟ್​ ವರದಿಗಳು ತಿಳಿಸಿವೆ.

ಈ ಸಂದರ್ಭದಲ್ಲಿ, ಪಾಕಿಸ್ತಾನದ ಮಾಜಿ ಆಟಗಾರ ಶಾಹಿದ್ ಅಫ್ರಿದಿ ಸಂಜು ಸ್ಯಾಮ್ಸನ್ ಹಿಡಿದ ಕ್ಯಾಚ್ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ಮತ್ತೊಮ್ಮೆ ಟೀಮ್ ಇಂಡಿಯಾ ಮತ್ತು ಐಪಿಎಲ್ ವಿರುದ್ಧ ನಾಲಿಗೆ ಹರಿಬಿಟ್ಟಿರುವ ಅಫ್ರಿದಿ, ಆ ಅಂಪೈರ್ ಐಪಿಎಲ್‌ನಲ್ಲೂ ಅಂಪೈರಿಂಗ್ ಮಾಡಬೇಕೇನೋ ಅದಕ್ಕೆ. ಆತ ಭಾರತದ ಪರ ನಿಂತಿದ್ದು ಸ್ಪಷ್ಟ ಎಂದು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net