ಹೆಣ್ಣು ಮಗುವಿಗೆ ಜನ್ಮ ನೀಡಿದ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್

ss
Published on

ವಾಷಿಂಗ್ಟನ್ (ಅಮೆರಿಕ): ಸ್ಟಾರ್ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್ ಬುಧವಾರ ಹೆಣ್ಣು ಮಗುವಿಗೆ ಜನ್ಮ ನೀಡಿರುವುದಾಗಿ ಒಂದು ವರ್ಷದ ಬಳಿಕ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ಖುಷಿ ಹಂಚಿಕೊಂಡಿದ್ದಾರೆ. ಮಗುವಿಗೆ ಆದಿರಾ ರಿವರ್ ಒಹಾನಿಯನ್ ಎಂಬ ಹೆಸರಿಟ್ಟಿದ್ದಾರೆ.

23 ಗ್ರಾಂಡ್ ಸ್ಲಾಂ ಸಿಂಗಲ್ಸ್ ಪ್ರಶಸ್ತಿಗಳ ಒಡತಿ ಎನಿಸಿರುವ ಸೆರೆನಾ ಹಾಗೂ ರೆಡ್ಡಿಟ್‌ನ ಸಹ-ಸಂಸ್ಥಾಪಕ ಅಲೆಕ್ಸಿಸ್ ಒಹಾನಿಯನ್ ಅವರಿಗೆ ಇದು ಎರಡನೇ ಮಗುವಾಗಿದ್ದು, ಒಲಂಪಿಯಾ ಎಂಬ ಆರು ವರ್ಷದ ಮಗಳಿದ್ದಾಳೆ. 2017 ರಲ್ಲಿ ಸೆರೆನಾ ಮೊದಲ ಮಗುವಿಗೆ ಜನ್ಮ ನೀಡಿದ್ದರು.

2022 ರ ಯುಎಸ್ ಓಪನ್ ಗ್ರಾಂಡ್ ಸ್ಲಾಂ ಟೂರ್ನಿಯಲ್ಲಿ ಕೊನೆಯದಾಗಿ ಕಣಕ್ಕಿಳಿದಿದ್ದ ಸೆರೆನಾ ವಿಲಿಯಮ್ಸ್, ಮೇ ತಿಂಗಳಲ್ಲಿ ಮೆಟ್ ಗಾಲಾದಲ್ಲಿ ತಾನು ಗರ್ಭಿಣಿ ಎಂದು ಬಹಿರಂಗಪಡಿಸಿದ್ದರು.

ಆದಿರಾ ರಿವರ್ ಒಹಾನಿಯನ್‌ಗೆ ಸ್ವಾಗತ

ನಮ್ಮ ಮನೆಗೆ ಸೇರುತ್ತಿರುವ ನಿನಗೆ ಸ್ವಾಗತ ಬಯಸಸಲು ನಾನು ಆಭಾರಿಯಾಗಿದ್ದೇನೆ.

ನವಜಾತ ಹೆಣ್ಣು ಮಗು ಹಾಗೂ ತಾಯಿ ಸಂತೋಷ ಮತ್ತು ಆರೋಗ್ಯಯುತವಾಗಿದ್ದಾರೆ.

ಸೆರೆನಾ ವಿಲಿಯಮ್ಸ್ ನೀವು ನನಗೆ ಮತ್ತೊಂದು ಉಡುಗೊರೆಯನ್ನು ನೀಡಿದ್ದೀರಿ. ನಿಮ್ಮ ಶಾಂತಿಯು ನದಿಯಂತೆ, ನಿಮ್ಮ ಯೋಗಕ್ಷೇಮವು ಸಮುದ್ರದ ಅಲೆಗಳಂತೆ ಎಂದು ಅಲೆಕ್ಸಿಸ್ ಒಹಾನಿಯನ್ ಟ್ವೀಟ್ ಮೂಲಕ ಸಂತೋಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net