ಮತ್ತೆ ಮನೀಷ್ ಪಾಂಡೆ ಸಾರಥ್ಯಕ್ಕೆ ಒಲಿದ ಪ್ರಶಸ್ತಿ: ಮಹಾರಾಜ ಟ್ರೋಫಿ ಪ್ರಶಸ್ತಿ ವಿಜೇತರ ಪಟ್ಟಿ ಇಂತಿದೆ

winner list
Published on

ಬೆಂಗಳೂರು: ಬ್ಯಾಟರ್ ಮೊಹಮದ್ ತಾಹ (72 ರನ್, 40 ಎಸೆತ, 7 ಬೌಂಡರಿ, 4 ಸಿಕ್ಸರ್) ಹಾಗೂ ನಾಯಕ ಮನೀಷ್ ಪಾಂಡೆ (50* ರನ್, 23 ಎಸೆತ, 3 ಬೌಂಡರಿ, 4 ಸಿಕ್ಸರ್) ಅರ್ಧಶತಕಗಳ ಬಲ ಮತ್ತು ವೇಗಿ ಮನ್ವಂತ್ ಕುಮಾರ್ (32ಕ್ಕ 3) ಕೊನೇ ಓವರ್‌ನ ಬಿಗಿ ಬೌಲಿಂಗ್ ದಾಳಿಯ ನೆರವಿನಿಂದ ಹುಬ್ಬಳ್ಳಿ ಟೈಗರ್ಸ್‌ ತಂಡ 2ನೇ ಆವೃತ್ತಿಯ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಮಂಗಳವಾರ ನಡೆದ ೈನಲ್ ಪಂದ್ಯದಲ್ಲಿ ಮನೀಷ್ ಪಾಂಡೆ ಬಳಗ ಮೈಸೂರು ವಾರಿಯರ್ಸ್‌ ಎದುರು 8 ರನ್‌ಗಳಿಂದ ರೋಚಕ ಗೆಲುವು ದಾಖಲಿಸಿ ಚಾಂಪಿಯನ್ ಪಟ್ಟವೇರಿತು. ಇದರೊಂದಿಗೆ ಟೂರ್ನಿಯಲ್ಲಿ ಸತತ 2ನೇ ವರ್ಷ ಮನೀಷ್ ಪಾಂಡೆ ನಾಯಕತ್ವದ ತಂಡವೊಂದು ಪ್ರಶಸ್ತಿ ಗೆದ್ದಂತಾಗಿದೆ. ಕಳೆದ ವರ್ಷ ಗುಲ್ಬರ್ಗಾ ಮಿಸ್ಟಿಕ್ಸ್ ತಂಡ ಮನೀಷ್ ಪಾಂಡೆ ಸಾರಥ್ಯದಲ್ಲೇ ಪ್ರಶಸ್ತಿ ಗೆದ್ದಿತ್ತು.

ಇತರ ಪ್ರಶಸ್ತಿಗಳ ಪಟ್ಟಿ;

ಫೈನಲ್‌ನ ಪಂದ್ಯಶ್ರೇಷ್ಠ: ಮನೀಷ್ ಪಾಂಡೆ

ಟೂರ್ನಿಯ ಗರಿಷ್ಠ ಸ್ಕೋರರ್: ಕರುಣ್ ನಾಯರ್, 532 ರನ್ (ಮೈಸೂರು ವಾರಿಯರ್ಸ್‌).

ಟೂರ್ನಿಯ ಗರಿಷ್ಠ ವಿಕೆಟ್: ಮನ್ವಂತ್ ಕುಮಾರ್, 22 ವಿಕೆಟ್ (ಹುಬ್ಬಳ್ಳಿ ಟೈಗರ್ಸ್‌).

ಸರಣಿ ಶ್ರೇಷ್ಠ: ಮೊಹಮದ್ ತಾಹ

ಉದಯೋನ್ಮುಖ ಬ್ಯಾಟರ್ : ಕಾರ್ತಿಕ್ ಎಸ್‌ಯು (ಮೈಸೂರು ವಾರಿಯರ್ಸ್‌).

ಉದಯೋನ್ಮುಖ ವಿಕೆಟ್ ಕೀಪರ್: ಲವನೀತ್ ಸಿಸೋಡಿಯಾ (ಹುಬ್ಬಳ್ಳಿ ಟೈಗರ್ಸ್‌).

ಉದಯೋನ್ಮುಖ ಆಲ್ರೌಂಡರ್: ಮನ್ವಂತ್ ಕುಮಾರ್ (ಹುಬ್ಬಳ್ಳಿ ಟೈಗರ್ಸ್‌).

ಉದಯೋನ್ಮುಖ ಬೌಲರ್: ಹಾರ್ದಿಕ್ ರಾಜ್ (ಗುಲ್ಬರ್ಗಾ ಮಿಸ್ಟಿಕ್ಸ್).

ಫೇರ್ ಪ್ಲೇಯರ್ ಆಫ್ ದಿ ಟೂರ್ನ್ ಮೆಂಟ್: ಶ್ರೇಯಸ್ ಗೋಪಾಲ್ (ಶಿವಮೊಗ್ಗ ಲಯನ್ಸ್)

ಟೂರ್ನಿಯ ಬೆಸ್ಟ್ ಫೀಲ್ಡರ್: ಪ್ರವೀಣ್ ದುಬೆ (ಹುಬ್ಬಳ್ಳಿ ಟೈಗರ್ಸ್‌).

ಎಲ್ಲ ಪ್ರಶಸ್ತಿಗಳು 25 ಸಾವಿರ ಬಹುಮಾನ ಮೊತ್ತ ಹೊಂದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net