

ಕೋಪನ್‌ಹೇಗನ್: ಭಾರತದ ಅಗ್ರ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ಹಾಗೂ ಚಿರಾಗ್ ಶೆಟ್ಟಿ ಜೋಡಿ ಬಿಡಬ್ಲುೃಎ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್‌ೈನಲ್‌ಗೇರಿದೆ. ಮಹಿಳಾ ಡಬಲ್ಸ್‌ನಲ್ಲಿ ತ್ರಿಸಾ ಜೋಲಿ-ಗಾಯತ್ರಿ ಗೋಪಿಚಂದ್ ಜೋಡಿ ಅಂತಿಮ 16ರ ಘಟ್ಟದಲ್ಲಿ ಎಡವಿದೆ.
ಗುರುವಾರ ನಡೆದ ಪ್ರಿ ಕ್ವಾರ್ಟರ್‌ೈನಲ್‌ನಲ್ಲಿ ವಿಶ್ವ ನಂ.2 ಭಾರತೀಯ ಜೋಡಿ ಸಾತ್ವಿಕ್- ಚಿರಾಗ್ 21-15, 19-21, 21-9 ಅಂತರದಿಂದ ಮೂರು ಗೇಮ್‌ಗಳ ಹೋರಾಟದಲ್ಲಿ ಇಂಡೋನೇಷ್ಯಾದ ಲಿಯೋ ರೋಲಿ ಕಾರ್ನಾಡೊ ಮತ್ತು ಡೇನಿಯಲ್ ಮಾರ್ಟಿನ್ ಜೋಡಿಯನ್ನು ಮಣಿಸಿದರು. ಕಳೆದ ಆವೃತ್ತಿಯಲ್ಲಿ ಕಂಚಿನ ಪದಕ ಜಯಿಸಿದ್ದ ಭಾರತೀಯ ಜೋಡಿ ಕ್ವಾರ್ಟರ್‌ೈನಲ್ ಸ್ಥಾನ ಖಚಿತ ಪಡಿಸಲು 61 ನಿಮಿಷಗಳ ಕಠಿಣ ಸವಾಲು ಎದುರಿಸಿತು.
ಮಹಿಳಾ ವಿಭಾಗದಲ್ಲಿ ತ್ರಿಸಾ ಜೋಲಿ-ಗಾಯತ್ರಿ ಗೋಪಿಚಂದ್ 14-21, 9-21 ರಿಂದ ಅಗ್ರ ಶ್ರೇಯಾಂಕಿತ ಜೋಡಿ ಚೀನಾದ ಚೆನ ಕಿಂಗ್ ಚೆನ್ -ಜಿಹ ಯಿ ಪನ್‌ಗೆ ಸುಲಭ ತುತ್ತಾದರು. ಮೊದಲ ಸುತ್ತಿನಲ್ಲಿ ಬೈ ಪಡೆದುಕೊಂಡಿದ್ದ ವಿಶ್ವ ನಂ.19 ಭಾರತೀಯ ಜೋಡಿ ತ್ರಿಸಾ-ಗಾಯತ್ರಿ, 2ನೇ ಸುತ್ತಿನ ಪಂದ್ಯದಲ್ಲಿ 21-18, 21-10 ನೇರ ಗೇಮ್‌ಗಳಿಂದ ಚೀನಾ ತೈಪೆಯ ಚಾಂಗ್ ಚಿಂಗ್ ಹುವೈ-ಯಾಂಗ್ ಚಿಂಗ್ ಟುನ್ ಜೋಡಿಯ ಎದುರು ಸುಲಭ ಗೆಲುವು ದಾಖಲಿಸಿ ಪ್ರಿ ಕ್ವಾರ್ಟರ್‌ೈನಲ್‌ಗೇರಿತ್ತು.