ರೋಬಾಟ್ ಜತೆಗೆ ಸತ್ಯನ್ ಟಿಟಿ ಅಭ್ಯಾಸ!

page 10 12
Published on

ನವದೆಹಲಿ: ಜಾಗತಿಕ ಕ್ರೀಡಾ ಚಟುವಟಿಕೆ ಸ್ತಬ್ಧಗೊಂಡಿ ರುವ ನಡುವೆ ಕೆಲ ಕ್ರೀಡಾಪಟುಗಳು ಈಗಾಗಲೆ ಆನ್​ಲೈನ್ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಭಾರತದ ಟೇಬಲ್ ಟೆನಿಸ್ ಆಟಗಾರ ಜಿ. ಸತ್ಯನ್ ಇನ್ನಷ್ಟು ವಿನೂತನ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡಿದ್ದು, ಲಾಕ್​ಡೌನ್ ನಡುವೆ ಅಭ್ಯಾಸಕ್ಕಾಗಿ ರೋಬಾಟ್​ಗಳನ್ನು ಬಳಸಿಕೊಂಡಿದ್ದಾರೆ.

ಚೆನ್ನೈನ ಮನೆಯಲ್ಲಿ ಲಾಕ್ ಆಗಿರುವ 27 ವರ್ಷದ ಜಿ. ಸತ್ಯನ್, ಅಲ್ಲೇ ರೋಬಾಟ್ ಜತೆಗೆ ಟೇಬಲ್ ಟೆನಿಸ್ ಆಡಿ ಅಭ್ಯಾಸ ಮಾಡುತ್ತಿದ್ದಾರೆ. ಬಟರ್​ಫ್ಲೈ ಆಮಿಕಸ್ ಪ್ರೖೆಮ್ ರಿಮೋಟ್ ಮೂಲಕ ಆಪರೇಟ್ ಮಾಡಲಾಗುವ ರೋಬಾಟ್​ಅನ್ನು ಜಿ. ಸತ್ಯನ್ ಕಳೆದ ನವೆಂಬರ್​ನಲ್ಲೇ ಜರ್ಮನಿಯಿಂದ ಆಮದು ಮಾಡಿಕೊಂಡಿದ್ದರು. ವಿಶ್ವ ನಂ. 31 ಆಟಗಾರರಾಗಿರುವ ಜಿ. ಸತ್ಯನ್, ಗೋ ಸ್ಪೋರ್ಟ್ಸ್

ಫೌಂಡೇಷನ್​ನ ಆರ್ಥಿಕ ನೆರವಿನಿಂದ ಈ ರೋಬಾಟ್ ಖರೀದಿಸಿದ್ದರು. ಇದು ಭಿನ್ನ ವೇಗಗಳಲ್ಲಿ ಚೆಂಡು ರಿಟರ್ನ್ ಮಾಡುತ್ತದೆ. ಒಟ್ಟು 300 ಚೆಂಡುಗಳನ್ನು ಅದರಲ್ಲಿ ಲೋಡ್ ಮಾಡಬಹುದು. ಈಗಿನ ಸಮಯದಲ್ಲಿ ಇದು ಬಹಳ ಉಪಯುಕ್ತ ಎಂದು ಜಿ.ಸತ್ಯನ್ ಹೇಳಿದ್ದಾರೆ.

ಮನೆಯಿಂದಲೇ ಮ್ಯಾರಥಾನ್ ಸ್ಪರ್ಧೆ!: ಆನ್​ಲೈನ್ ಗೇಮಿಂಗ್​ಗಳ ನಡುವೆ ಇದೀಗ ಮ್ಯಾರಥಾನ್ ಓಟವನ್ನೂ ಆಯೋಜಿಸಲಾಗಿದ್ದು, 62 ದೇಶಗಳಿಂದ 749 ಓಟಗಾರರು ಮನೆಯಿಂದಲೇ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ! ಸ್ಪರ್ಧೆಯಲ್ಲಿ ಓಟಗಾರರು ಟ್ರೆಡ್​ವಿುಲ್ ಅಥವಾ ಬೇರಾವುದೇ ಟ್ರೇನಿಂಗ್ ಯಂತ್ರಗಳನ್ನು ಬಳಸುವಂತಿಲ್ಲ. ಸಾರ್ವಜನಿಕ ಸ್ಥಳಗಳಲ್ಲೂ ಓಡುವಂತಿಲ್ಲ. ಮನೆಯೊಳಗೆ ಮಾತ್ರ ಓಡಬೇಕು. ಈ ವೇಳೆ ಸ್ಪರ್ಧಿಗಳು ಓಡುವ ದೂರವನ್ನು ಸ್ಟಾವ ಆಪ್ ಮೂಲಕ ಅಳೆಯಲಾಗುವುದು. ಸ್ಮಾರ್ಟ್​ವಾಚ್ ಅಥವಾ ಸ್ಮಾರ್ಟ್​ಫೋನ್​ವುೂಲಕ ಸ್ಟಾವದಲ್ಲಿ ಸ್ಪರ್ಧಿಗಳ ಚಲನೆ ಮತ್ತು ಓಟದ ಸಮಯ ಲೆಕ್ಕಹಾಕಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net