ಆಂಗ್ಲರ ನೆಲದಲ್ಲಿ ಸರ್ಫರಾಜ್ ಭರ್ಜರಿ ಶತಕ! BCCI ಆಯ್ಕೆಗಾರರಿಗೆ ಖಡಕ್ ಉತ್ತರ ಕೊಟ್ಟ ಸ್ಟಾರ್​ ಬ್ಯಾಟರ್​ | Sarfaraz Khan

ವಿಜಯವಾಣಿ (29)
Published on

Sarfaraz Khan: ಇದೇ ಜೂನ್ 20ರಿಂದ ಆರಂಭವಾಗಲಿರುವ ಇಂಗ್ಲೆಂಡ್​ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾ ಸನ್ನದ್ಧವಾಗಿದೆ. ಶುಭಮನ್ ಗಿಲ್ ನಾಯಕತ್ವದಲ್ಲಿ ಇಂಗ್ಲೆಂಡ್ ಎದುರು ಆಡಲು ಭಾರತ ತಂಡ ಎದುರುನೋಡುತ್ತಿದೆ. ಈ ಟೆಸ್ಟ್ ತಂಡದಿಂದ ತಮ್ಮನ್ನು ಕೈಬಿಟ್ಟದ್ದ ಬಿಸಿಸಿಐ ಮುಖ್ಯ ಆಯ್ಕೆಗಾರರಿಗೆ ಇದೀಗ ಸರ್ಫರಾಜ್ ಖಾನ್​, ಭರ್ಜರಿ ಶತಕದ ಮೂಲಕ ಉತ್ತರ ಕೊಟ್ಟಿದ್ದಾರೆ.

ಬಕಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಇಂಟ್ರಾ-ಸ್ಕ್ವಾಡ್ ಪಂದ್ಯದಲ್ಲಿ ಭಾರತೀಯ ಹಿರಿಯ ತಂಡವು ಭಾರತ ಎ ತಂಡವನ್ನು ಎದುರಿಸುತ್ತಿದೆ. ಆದಾಗ್ಯೂ, ಈ ಪಂದ್ಯದಲ್ಲಿ, ಭಾರತ ಎ ತಂಡದ ಪರ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿರುವ ಸ್ಟಾರ್ ಬ್ಯಾಟರ್​ ಸರ್ಫರಾಜ್ ಖಾನ್, ಆಕರ್ಷಕ ಶತಕ ಸಿಡಿಸುವ ಮೂಲಕ ಎಲ್ಲರ ಗಮನ ಸೆಳೆದರು. ಈ ಪಂದ್ಯವನ್ನು ಸ್ಟೇಡಿಯಂನಲ್ಲೇ ಕುಳಿತು ವೀಕ್ಷಿಸಿದ ಬಿಸಿಸಿಐ ಆಯ್ಕೆಗಾರ ಅಜಿತ್ ಅಗರ್ಕರ್​ ಅವರಿಗೆ ಖಾನ್ ಖಡಕ್ ಉತ್ತರ ರವಾನಿಸಿದ್ದಾರೆ.

ಬಿಸಿಸಿಐ ಮೂಲಗಳ ಪ್ರಕಾರ, ಪಂದ್ಯದ ಎರಡನೇ ದಿನದಂದು ಸರ್ಫರಾಜ್ ಖಾನ್ ಟಿ20ಐಗಳಲ್ಲಿ ತಮ್ಮ ಶತಕದ ಗಡಿಯನ್ನು ತಲುಪಿದರು. 76 ಎಸೆತಗಳಲ್ಲಿ 15 ಬೌಂಡರಿ ಮತ್ತು ಎರಡು ಸಿಕ್ಸರ್‌ ಬಾರಿಸಿ 101 ರನ್ ದಾಖಲಿಸಿದರು. ನಂತರದಲ್ಲಿ ಮತ್ತೊಬ್ಬರಿಗೆ ಬ್ಯಾಟಿಂಗ್ ನೀಡಲು ನಿವೃತ್ತರಾದರು. ಇಂಗ್ಲೆಂಡ್​ ಸರಣಿಗೆ ತಮ್ಮನ್ನು ಕೈಬಿಟ್ಟ ಬಿಸಿಸಿಐ ಆಯ್ಕೆಗಾರರು, ಸರ್ಫರಾಜ್ ಸ್ಥಾನಕ್ಕೆ ಕರುಣ್ ನಾಯರ್​ಗೆ ಅವಕಾಶ ನೀಡಿದರು. ಇದು ಸರ್ಫರಾಜ್​ಗೆ ಅಂದು ತೀರ ಬೇಸರ ತಂದಿತ್ತು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net