ಸಚಿನ್​ ತೆಂಡುಲ್ಕರ್​​​ ಅಳಿಯ ಇವರೇ..! ಸಾರಾ ಗೆಳೆಯ ಯಾರು? ಗೋವಾ ಮೂಲದ ಶ್ರೀಮಂತ ಉದ್ಯಮಿ ಜತೆ ಡೇಟಿಂಗ್​​​; ಈತ ಯಾರು..?!

sra mix
Published on

ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ಮತ್ತು ಶುಭಮನ್ ಗಿಲ್ ಡೇಟಿಂಗ್​​​ನಲ್ಲಿದ್ರು ಹಾಗೇನೆ ಇಬ್ಬರೂ ರಿಲೇಷನ್​​​ಶಿಪ್​​ನಲ್ಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಲೇ ಇವೆ. ಇಬ್ಬರೂ ತಮ್ಮ ಇನ್ಸ್​​ಟಾಗ್ರಾಂ ಖಾತೆಯಲ್ಲಿ ಕಾಮೆಂಟ್​​ ಮತ್ತು ಲೈಕ್​​ ಮಾಡಿಕೊಳ್ಳುತ್ತಾರೆ.


ಆದ್ದರಿಂದಲೇ ಇವರಿಬ್ಬರ ಮಧ್ಯೆ ಏನೋ ಇದೆ ಇವರಿಬ್ಬರೂ ಕಪಲ್ಸ್​​​ ಎಂಬ ಗಾಸಿಪ್​ ವ್ಯಾಪಕವಾಗಿ ಹರಡಿತ್ತು. ಇನ್ನು ಸಾರ್ವಜನಿಕವಾಗಿ ಸಾಕಷ್ಟು ಬಾರಿ ಇವರಿಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದು, ಇವರಿಬ್ಬರೂ ಕಪಲ್ಸ್​​ ಎಂಬ ಊಹಾಪೋಹಗಳಿಗೆ ಪುಷ್ಠಿ ಕೊಟ್ಟಿದೆ.

ಆದ್ರೆ ಶುಭ್​​ಮನ್​​ ಸಾರಾ ತೆಂಡುಲ್ಕರ್​​​​, ​ಬಾಯ್​​ಫ್ರೆಂಡ್​​ ಅಲ್ಲ ಇವರಿಬ್ಬರೂ ಜಸ್ಟ್​​​ ಫ್ರೆಂಡ್ಸ್​​ ಎಂದು ಹೇಳಲಾಗುತ್ತಿದು, ಇದು ರೂಮರ್ಸ್​​​ ಅಂತಲೂ ಪರಿಗಣಸಲಾಗಿದೆ. ಮುಂಬೈನಲ್ಲಿ ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಸಾರಾ ಮತ್ತು ಶುಭ್‌ಮನ್ ಗಿಲ್ ಇಬ್ಬರೂ ಭಾಗವಹಿಸಿದ್ದರು, ಸಾರಾ ಜೊತೆಯಲ್ಲಿ ಫೋಟೋ ತೆಗೆಯುವುದನ್ನು ತಪ್ಪಿಸಲು ಶುಭ್​ಮನ್​ ಪ್ರಯತ್ನಿಸಿದ್ರು. ಶುಭ್​​ಮನ್​​​​ ಹೀಗೆ ಮಾಡಿರೋದನ್ನ ನೋಡಿದ್ರೆ ಸಾರಾ ಜತೆ ಫೋಟೋ ತೆಗೆಸಿಕೊಂಡು ಕಪಲ್ಸ್​​​​ ಅನ್ನಿಸಿಕೊಳ್ಳೋದನ್ನ ತಡೆಗಟ್ಟಲು ಹೀಗೆ ಮಾಡಿದ್ದಾರೆ ಎನ್ನಲಾಗುತ್ತಿದೆ.


ಗೋವಾ ಮೂಲದ ಶ್ರೀಮಂತ ಉದ್ಯಮಿಯಂತೆ ಸಾರಾ ಬಾಯ್​ಫ್ರೆಂಡ್​..!
ಆದ್ರೆ ಇಂಟ್ರೆಸ್ಟಿಂಗ್​​​​ ವಿಚಾರ ಅಂದ್ರೆ ಸಾರಾ ಬಾಯ್​​​​ಫ್ರೆಂಡ್​​​​​​​​​, ಗೋವಾ ಮೂಲದ ಶ್ರೀಮಂತ ಉದ್ಯಮಿ ಎಂದು ಹೇಳಲಾಗುತ್ತಿದೆ. ಸಾರಾ ತೆಂಡೂಲ್ಕರ್ ಗೋವಾ ಮೂಲದ ಕಲಾವಿದ ಮತ್ತು ಉದ್ಯಮಿ ಸಿದ್ಧಾರ್ಥ್ ಕೆರ್ಕರ್ ಅವರನ್ನ ಡೇಟ್​​ ಮಾಡುತ್ತಿದ್ದಾರೆ. ಹಾಗೇ ಇವರಿಬ್ಬರೂ ರಿಲೇಷನ್​ಶಿಪ್​ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಸಿದ್ಧಾರ್ಥ್ ಕಲಾವಿದರ ಕುಟುಂಬದಲ್ಲಿ ಜನಿಸಿದ್ದು, ಬಾಲ್ಯದಿಂದಲೂ ಶಿಲ್ಪಕಲೆಯ ಬಗ್ಗೆ ಒಲವು ಹೊಂದಿದ್ದಾರೆ.


ಸಾರಾ ಮತ್ತು ಸಿದ್ಧಾರ್ಥ್ ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಇಬ್ಬರೂ ತಮ್ಮ ಫೋಟೋಗಳನ್ನ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಆದ್ರೆ ನಾವಿಬ್ಬರೂ ರಿಲೇಷನ್​ಶಿಪ್​​ನಲ್ಲಿದ್ದೇವೆ ಅಥವಾ ಡೇಟಿಂಗ್​ನಲ್ಲಿದ್ದೇವೆ ಎಮದು ಸಾರಾ ಆಗಲಿ ಸಿದ್ದಾರ್ಥ್​​​ ಆಗಲಿ ಈವರೆಗೂ ಎಲ್ಲಿಯೂ ಹೇಳಿಕೊಂಡಿಲ್ಲ. ಸಾರಾ ಪೋಷಕರಾದ ಕ್ರಿಕೆಟ್​​ ಮಾಂತ್ರಿಕ ಸಚಿನ್​​ ತೆಂಡುಲ್ಕರ್​​ ಮತ್ತು ತಾಯಿ ಅಂಜಲಿ ಅವರ ಜತೆಗೂ ಸಿದ್ಧಾರ್ಥ್​​ ಉತ್ತಮ ಸಂಬಂಧವನ್ನ ಹೊಂದಿದ್ದಾರೆ. ​​ಹಾಗಾಗಿ ಅರಾ ಸಿದ್ಧಾರ್ಥ್​​​ನನ್ನೇ ಮದುವೆಯಾಗಲಿದ್ದಾರೆ ಎಂದೂ ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net