ಸಂಜು ಸ್ಯಾಮ್ಸನ್​ ಆರ್​ಆರ್​ ಬಿಡಲು ವೈಭವ್ ಸೂರ್ಯವಂಶಿ ಕಾರಣ!? ಶಾಕಿಂಗ್ ಕಾರಣ ಬಿಚ್ಚಿಟ್ಟ ಮಾಜಿ ಕ್ರಿಕೆಟಿಗ | Sanju Samson

ವಿಜಯವಾಣಿ (45)
Published on

Sanju Samson: ಐಪಿಎಲ್​ 19ನೇ ಆವೃತ್ತಿಯ ಹರಾಜು ಪ್ರಕ್ರಿಯೆಗೂ ಮುನ್ನವೇ ರಾಜಸ್ಥಾನ ರಾಯಲ್ಸ್ ತಂಡದಿಂದ ಹೊರನಡೆಯಲು ಸಂಜು ಸ್ಯಾಮ್ಸನ್ ನಿರ್ಧರಿಸಿದ್ದಾರೆ ಎಂದು ಕ್ರಿಕೆಟ್​ ಮೂಲಗಳು ತಿಳಿಸಿವೆ. ಈ ಕುರಿತಾಗಿ ಸ್ವತಃ ಸಂಜು ತಮ್ಮ ಫ್ರಾಂಚೈಸಿಗೆ ತನ್ನನ್ನು ಹರಾಜಿನಲ್ಲಿ ರಿಲೀಸ್ ಮಾಡುವಂತೆ ಕೇಳಿಕೊಂಡಿದ್ದಾರೆ ಎಂದು ವರದಿಗಳು ಸೂಚಿಸಿವೆ. ಅಷ್ಟಕ್ಕೂ ಇದರ ಹಿಂದಿರುವ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಈ ಬಗ್ಗೆ ಮಾತನಾಡಿದ್ದು, ಅವರ ನಿರ್ಗಮನಕ್ಕೆ ಯುವ ಬ್ಯಾಟರ್​ ವೈಭವ್ ಸೂರ್ಯವಂಶಿ ಕಾರಣ ಎಂದಿದ್ದಾರೆ.

ಈ ಕುರಿತಂತೆ ತಮ್ಮ ಯೂಟ್ಯೂಬ್ ಚಾನಲ್​​ನಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಆಕಾಶ್​, "ಸುಖಾಸುಮ್ಮನೆ ಸಂಜು ಯಾಕೆ ತಮ್ಮ ತಂಡವನ್ನು ಬಿಟ್ಟು ಹೋಗ್ತಾರೆ? ನನ್ನ ಪ್ರಕಾರ, ಕಳೆದ ಬಾರಿಯ ಆಕ್ಷನ್​ನಲ್ಲಿ ಸ್ಟಾರ್ ಬ್ಯಾಟರ್​ ಜಾಸ್ ಬಟ್ಲರ್​ರನ್ನು ಫ್ರಾಂಚೈಸಿ ಕೈಬಿಟ್ಟಿತು. ಯಶಸ್ವಿ ಜೈಸ್ವಾಲ್​ಗೆ ಓಪನಿಂಗ್ ಅವಕಾಶ ಕೊಡಲು ಜಾಸ್​ರನ್ನು ಬಿಟ್ಟರು. ಈಗ ತಂಡದ ಆರಂಭಿಕರಾಗಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ ಇರುವುದರಿಂದ ಸ್ಥಾನಗಳು ಬದಲಾಗುವ ಸಾಧ್ಯತೆಗಳಿವೆ. ಇದೇ ಕಾರಣದಿಂದ ಸ್ಯಾಮ್ಸನ್​ ಆರ್​ಆರ್​ನಿಂದ ಹೊರಗುಳಿಯಲು ಬಯಸಿರಬಹುದು" ಎಂದು ಅಭಿಪ್ರಾಯಿಸಿದ್ದಾರೆ.

"ಈ ಬೆಳವಣಿಗೆಗಳನ್ನು ಗಮನಿಸಿ ಹೇಳುವುದಾದರೆ, ರಾಜಸ್ಥಾನ ರಾಯಲ್ಸ್​ನಿಂದ ಸಂಜು ಸ್ಯಾಮ್ಸನ್ ಹೊರಬಂದರೆ, ಅವರ ಮುಂದಿರುವ ಆಯ್ಕೆ ಕೋಲ್ಕತ ನೈಟ್​ ರೈಡರ್ಸ್​. ಈ ವಿಚಾರದಲ್ಲಿ ನನಗೆ ಸಿಎಸ್​ಕೆ ಹೆಸರು ಮೊದಲಿಗೆ ಬರುವುದಿಲ್ಲ. ಕೆಕೆಆರ್​ ಬಳಿ ಉತ್ತಮ ವಿಕೆಟ್​ ಕೀಪರ್​-ಬ್ಯಾಟರ್​ ಇಲ್ಲ. ಹೀಗಾಗಿ ಅವರ ಮುಂದಿರುವ ಒಂದೊಳ್ಳೆ ಆಯ್ಕೆ ಸ್ಯಾಮ್ಸನ್​. ​ ಫ್ರಾಂಚೈಸಿ ಅವರನ್ನು ತಮ್ಮ ಮುಂದಿನ ಕ್ಯಾಪ್ಟನ್ ಆಗಿಯೂ ಮಾಡಿಕೊಳ್ಳಬಹುದು. ಇಲ್ಲಿ ನಾನು ಅಜಿಂಕ್ಯಾ ರಹಾನೆ ಅವರ ನಾಯಕತ್ವದ ಬಗ್ಗೆ ಮಾತನಾಡಲ್ಲ. ಅವರಿಂದಲೂ ಉತ್ತಮ ಕ್ಯಾಪ್ಟನ್ಸಿ ಮತ್ತು ರನ್​ಗಳ ಕೊಡುಗೆ ಬಂದಿದೆ" ಎಂದು ಹೇಳಿದ್ದಾರೆ(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net