

ಬೆಂಗಳೂರು: ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡುತ್ತಿರುವ ಕೇರಳದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಪತ್ನಿ ಚಾರುಲತಾ ಅವರ ಜನ್ಮದಿನವನ್ನು ಅಬುಧಾಬಿಯ ಬಯೋ-ಬಬಲ್ ವಾತಾವರಣದೊಳಗೆ ಸಂಭ್ರಮಿಸಿದ್ದಾರೆ.
ಭಾನುವಾರ ರಾತ್ರಿ ಚಾರುಲತಾ ಕೇಕ್ ಕತ್ತರಿಸುತ್ತಿರುವ ವಿಡಿಯೋವನ್ನು ಸಂಜು ಸ್ಯಾಮ್ಸನ್ ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದು, ‘ನನ್ನ ಪಾಲಿಗೆ ಎಲ್ಲವೂ ಆಗಿರುವ ನಿನಗೆ ಜನ್ಮದಿನದ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ. ಸೋಮವಾರ ಚೆನ್ನೈ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಪತ್ನಿಗೆ ಜನ್ಮದಿನದ ಉಡುಗೊರೆ ನೀಡಿ ಎಂದು ಅಭಿಮಾನಿಗಳು ಇದಕ್ಕೆ ಕಾಮೆಂಟ್ ಹಾಕಿದ್ದಾರೆ.
ಸಂಜು ಮತ್ತು ಚಾರುಲತಾ 2018ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಅದಕ್ಕೆ ಮುನ್ನ 5 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.