

ನವದೆಹಲಿ: ಟೀಮ್ ಇಂಡಿಯಾದ ಯುವ ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್ ಜಿಂಬಾಬ್ವೆ ಬೌಲರ್ಗಳನ್ನು ಬಗ್ಗು ಬಡಿದರು. ಭಾರೀ ಹೊಡೆತಗಳಿಂದ ಹರಾರೆ ಕ್ರೀಡಾಂಗಣದಲ್ಲಿ ಇಂದು ರನ್ ಮಳೆಯನ್ನೇ ಹರಿಸಿದರು. ಜಿಂಬಾಬ್ವೆ ವಿರುದ್ಧ ನಡೆದ ಐದನೇ ಟಿ20 ಪಂದ್ಯದಲ್ಲಿ ಕೇವಲ 45 ಎಸೆತಗಳನ್ನು ಎದುರಿಸಿದ ಸಂಜು, 58 ರನ್ ಗಳಿಸಿದರು. ಕೇವಲ 1 ಬೌಂಡರಿ ಬಾರಿಸಿದರೆ, ಬರೋಬ್ಬರಿ 4 ಸಿಕ್ಸರ್ ಸಿಡಿಸಿದರು. ಅದರಲ್ಲಿ ಒಂದು ಚೆಂಡು 110 ಮೀಟರ್ ದೂರದಲ್ಲಿ ಹೋಗಿ ಲ್ಯಾಂಡ್ ಆಯಿತು.
ಅಕ್ಷರಶಃ, ಸಂಜು ಸ್ಯಾಮ್ಸನ್ ಹೊಡೆತಕ್ಕೆ ಚೆಂಡು ಕ್ರೀಡಾಂಗಣದಿಂದ ಮಾಯವಾಯಿತು. ಆರಂಭದಲ್ಲಿ ವಿಕೆಟ್ ಪತನವಾಗುತ್ತಿದ್ದಂತೆ ನಿಧಾನವಾಗಿ ಆಡಿದ ಸಂಜು ನಂತರ ವೇಗವಾಗಿ ರನ್ ಗಳಿಸಲು ಯತ್ನಿಸಿದರು. ಆರಂಭದಲ್ಲಿ ಯಾವುದೇ ಹೊಡೆತಕ್ಕೆ ಕೈಹಾಕಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ನಾಯಕ ಶುಭಮನ್ ಗಿಲ್ (13) ಮತ್ತು ಯಶಸ್ವಿ ಜೈಸ್ವಾಲ್ (12) ಕಡಿಮೆ ರನ್ಗೆ ಔಟಾಗುವ ಮೂಲಕ ಆರಂಭಿಕ ಆಘಾತ ನೀಡಿದರು.
ಒನ್ ಡೌನ್ನಲ್ಲಿ ಬಂದ ಅಭಿಷೇಕ್ ಶರ್ಮ (14) ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಇದಾದ ಬಳಿಕ ಸಂಜು ಜತೆ ರಿಯಾನ್ ಪರಾಗ್ (22) ಮತ್ತು ಶಿವಂ ದುಬೆ (26) ಕೆಲವೊತ್ತು ಸಾಥ್ ನೀಡಿದರು. ಕ್ರೀಸ್ನಲ್ಲಿ ನೆಲೆಯೂರುತ್ತಿದ್ದಂತೆ ಸಂಜು ಸ್ಯಾಮ್ಸನ್ ಅಬ್ಬರಿಸಿದರು. ಅಂತಿಮವಾಗಿ ಟೀಮ್ ಇಂಡಿಯಾ 20 ಓವರ್‌ಗಳ ಅಂತ್ಯಕ್ಕೆ 167 ರನ್ ಗಳಿಸಿತು.
ಬಳಿಕ ಟೀಮ್ ಇಂಡಿಯಾ ನೀಡಿದ 168 ರನ್ಗಳ ಗುರಿಯನ್ನು ಬೆನ್ನತ್ತಿದ ಜಿಂಬ್ವಾಬೆ 18.3 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 125 ರನ್ ಗಳಿಸುವ ಮೂಲಕ ಸೋಲಿಗೆ ಶರಣಾಯಿತು. ಐದು ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ 4-1ರಿಂದ ಸರಣಿಯನ್ನು ವಶಕ್ಕೆ ಪಡೆದುಕೊಂಡಿತು. (ಏಜೆನ್ಸೀಸ್)