'ಸಂಜಯ್ ಸಿಂಗ್ ನನ್ನ ಸಂಬಂಧಿ ಅಲ್ಲ…ಅವರು ಭೂಮಿಹಾರ್, ನಾನು ರಜಪೂತ': ಬ್ರಿಜ್ ಭೂಷಣ್ ಶರಣ್ ಸಿಂಗ್

bhushan1
Published on

ನವದೆಹಲಿ: ಭಾರತೀಯ ಕುಸ್ತಿ ಅಸೋಸಿಯೇಷನ್‌ನ ಮೇಲೆ ಕ್ರೀಡಾ ಸಚಿವಾಲಯದ ಕ್ರಮದ ನಂತರ, ಸಂಸ್ಥೆಯ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದ ನಂತರ ಬ್ರಿಜ್ ಭೂಷಣ್ ಶರಣ್ ಸಿಂಗ್ ಹಲವು ಹೇಳಿಕೆಗಳನ್ನು ನೀಡಿದರು. ಇನ್ನು ಕುಸ್ತಿ ಸಂಘಕ್ಕೂ ನನಗೂ ಸಂಬಂಧವಿಲ್ಲ. ಸಂಜಯ್ ಸಿಂಗ್ ನನ್ನ ಸಂಬಂಧಿ ಅಲ್ಲ. ಕುಸ್ತಿ ಸಂಘದಲ್ಲಿ ನನ್ನ ಪಾತ್ರ ಕೊನೆಗೊಂಡಿದೆ. 12 ವರ್ಷಗಳಿಂದ ಕುಸ್ತಿ ಸಂಘದಲ್ಲಿ ಕೆಲಸ ಮಾಡಿದ್ದೇನೆ. ನಾನು ಕುಸ್ತಿ ಸಂಘದಿಂದ ನಿವೃತ್ತಿ ಹೊಂದಿದ್ದೇನೆ ಮತ್ತು ಈಗ ಕುಸ್ತಿ ಸಂಘಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದರು.

ನಾನು ಲೋಕಸಭೆ ಚುನಾವಣೆ ತಯಾರಿಯಲ್ಲಿ ನಿರತನಾಗಿದ್ದೇನೆ, ಇನ್ನು ಕುಸ್ತಿ ಸಂಘದ ಬಗ್ಗೆ ತೆಗೆದುಕೊಳ್ಳಬೇಕಾದ ನಿರ್ಧಾರವನ್ನು ಆಯ್ಕೆಯಾದವರು ಮಾತ್ರ ತೆಗೆದುಕೊಳ್ಳುತ್ತಾರೆ. ಈಗ ಕುಸ್ತಿ ಸಂಘವು ನ್ಯಾಯಾಲಯದ ಮೊರೆ ಹೋಗುವುದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಹೊಸ ಒಕ್ಕೂಟದೊಂದಿಗೆ ನನಗೆ ಯಾವುದೇ ಸಂಬಂಧವಿಲ್ಲ ಅಥವಾ ಸಂಜಯ್ ಸಿಂಗ್ ನನ್ನ ಸಂಬಂಧಿಯೂ ಅಲ್ಲ. ಈಗ ನಾನು ಕುಸ್ತಿ ಸಂಘದ ಚುನಾವಣೆಗೂ ಸ್ಪರ್ಧಿಸಲು ಹೋಗುತ್ತಿಲ್ಲ ಎಂದರು.

ಕೇಂದ್ರ ಕ್ರೀಡಾ ಸಚಿವಾಲಯವು ರಾಷ್ಟ್ರೀಯ ಕುಸ್ತಿ ಫೆಡರೇಷನ್ ಸಂಸ್ಥೆ ಅಮಾನತು ಮಾಡಿದ ನಂತರ, ಬ್ರಿಜ್ ಭೂಷಣ್ ಶರಣ್ ಸಿಂಗ್, "ನಾನು 12 ವರ್ಷಗಳಿಂದ ಕುಸ್ತಿಪಟುಗಳಿಗಾಗಿ ಕೆಲಸ ಮಾಡಿದ್ದೇನೆ. ನಾನು ನ್ಯಾಯ ಸಲ್ಲಿಸಿದ್ದೇನೆಯೇ ಎಂಬುದನ್ನು ಸಮಯ ಹೇಳುತ್ತದೆ'' ಎಂದು ತಿಳಿಸಿದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net