ತಾಯಿಯಾದ ಬಳಿಕ ಸಾನಿಯಾ ಮಿರ್ಜಾ ಇಳಿಸಿದ ದೇಹದ ತೂಕವೆಷ್ಟು ಗೊತ್ತೇ..?

sania mirza for web
Published on

ಮುಂಬೈ: ಸಾಮಾನ್ಯವಾಗಿ ಹೆಣ್ಣುಮಕ್ಕಳು ತಾಯಿಯಾದ ಬಳಿಕ ದಪ್ಪ ಆಗುವುದು ಸಾಮಾನ್ಯ. ಊಟ ಉಪಚಾರದಲ್ಲಿ ಎಷ್ಟೇ ಕಟ್ಟುನಿಟ್ಟಾಗಿ ಇದ್ದರೂ ದೇಹದಲ್ಲಿ ವ್ಯತ್ಯಾಸ ಕಾಣುತ್ತೇವೆ. ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಕೂಡ ಇದಕ್ಕೆ ಹೊರತಾಗಿಲ್ಲ. ಗರ್ಭಿಣಿ ವೇಳೆ 23 ಕೆಜಿ ತೂಕ ಜಾಸ್ತಿಯಾಗಿದ್ದೆ, ಇದರಿಂದಾಗಿ ಮತ್ತೆ ಟೆನಿಸ್ ಆಡುತ್ತೇನೆ ಎಂದುಕೊಂಡಿರಲಿಲ್ಲ ಎಂದು ಸಾನಿಯಾ ಹೇಳಿಕೊಂಡಿದ್ದಾರೆ. ತಾಯ್ತನ ಜತೆಗೆ ವೃತ್ತಿರಂಗಕ್ಕೆ ವಾಪಸ್ ಬರುವುದು ಅಷ್ಟು ಸುಲಭವಲ್ಲ ಎಂದು ಹೇಳಿದ್ದಾರೆ.

ಗರ್ಭಿಣಿ ವೇಳೆ ಹಾಗೂ ನಂತರ ದೇಹವನ್ನು ಸರಿಯಾಗಿ ಇಟ್ಟುಕೊಳ್ಳುವುದು ಕೊಂಚ ಕಷ್ಟವಾಗುತ್ತದೆ. ಆದರೆ, ಇದನ್ನೇ ಸವಾಲಾಗಿ ಸ್ವೀಕರಿಸಿ ಫಿಟ್ನೆಸ್ ವಾಪಸ್ ಪಡೆದೆ ಎಂದು ಸಾನಿಯಾ ಹೇಳಿದ್ದಾರೆ. ಗರ್ಭಿಣಿ ಸಂದರ್ಭದಲ್ಲಿ ನನ್ನ ದೇಹ ತೂಕ ಜಾಸ್ತಿಯಾಗಿದ್ದರಿಂದ ಮತ್ತೆ ಟೆನಿಸ್ ಆಡುತ್ತೇನೆ ಎಂದುಕೊಂಡಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಸಾಕಷ್ಟು ದೈಹಿಕ ಕಸರತ್ತು ನಡೆಸಿದರೆ, ಇದರ ಲವಾಗಿ 26 ಕೆಜಿ ದೇಹ ತೂಕ ಇಳಿಸಿದೆ. ಫಿಟ್ನೆಸ್ ಕುರಿತು ಸಾಕಷ್ಟು ನಿಗಾವಹಿಸಿ ಮತ್ತೆ ಕೋರ್ಟ್‌ಗಿಳಿದೆ ಎಂದರು.

ಸಾನಿಯಾ ಮಿರ್ಜಾ 2010ರಲ್ಲಿ ಪಾಕಿಸ್ತಾನ ಕ್ರಿಕೆಟಿಗ ಶೋಯಿಬ್ ಮಲಿಕ್ ಅವರನ್ನು ಮದುವೆಯಾದರು. 2018ರ ಅಕ್ಟೋಬರ್‌ನಲ್ಲಿ ಮಗ ಇಜಾನ್‌ಗೆ ಜನ್ಮ ನೀಡಿದರು. ಬಳಿಕ 2020ರ ಜನವರಿಯಲ್ಲಿ ಟೆನಿಸ್ ಅಂಕಣಕ್ಕೆ ವಾಪಸಾಗಿ ಡಬ್ಲ್ಯುಟಿಎ ಅಂತಾರಾಷ್ಟ್ರೀಯ ಟೆನಿಸ್ ಟೂರ್ನಿಯಲ್ಲಿ ಉಕ್ರೇನ್‌ನ ಜತೆಗಾರ್ತಿ ನಾಡಿಯಾ ಕಿಚೆನೊಕ್ ಜತೆಗೂಡಿ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net