ನಿರಾಸೆ ಕಂಡ ಸಾನಿಯಾ ಮಿರ್ಜಾ ಜೋಡಿ

SANIA
Published on

ಕತಾರ್: ಭಾರತದ ಸಾನಿಯಾ ಮಿರ್ಜಾ ಹಾಗೂ ಫ್ರಾನ್ಸ್​ನ ಕ್ಯಾರೊಲಿನ್ ಗಾರ್ಸಿಯಾ ಜೋಡಿ ಕತಾರ್ ಓಪನ್ ಟೆನಿಸ್ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲೇ ನಿರಾಸೆ ಅನುಭವಿಸಿತು.

ಸೋಮವಾರ ನಡೆದ ಪಂದ್ಯದಲ್ಲಿ ಇಂಡೋ-ಫ್ರಾನ್ಸ್ ಜೋಡಿ 4-6, 5-7 ನೇರ ಸೆಟ್​ಗಳಿಂದ ಟರ್ಕಿಯ ಕಾಗ್ಲಾ ಬುಯೂಕಾಕ್ಸಿ ಹಾಗೂ ಜರ್ಮನಿಯ ಲೌರಾ ಸಿಗ್ಮಂಡ್ ಎದುರು ಸೋಲು ಕಂಡಿತು. ಸಾನಿಯಾ-ಗಾರ್ಸಿಯಾ ಜೋಡಿ ಮೊದಲ ಸೆಟ್​ನಲ್ಲಿ ಯಾವುದೇ ಪೈಪೋಟಿ ನೀಡದೆ ಸೋತರೆ, 2ನೇ ಸೆಟ್​ನಲ್ಲಿ 3-0ಯಿಂದ ಮುನ್ನಡೆಯಲ್ಲಿದ್ದರೂ ಪಂದ್ಯದಲ್ಲಿ ಹಿಡಿತ ಸಾಧಿಸಲು ವಿಫಲವಾಯಿತು.

ತಾಯ್ತನದ ರಜೆ ಬಳಿಕ ಸಾನಿಯಾ ಆಡಿದ 4ನೇ ಟೂರ್ನಿ ಇದಾಗಿದೆ. ಹೋಬರ್ಟ್ ಇಂಟರ್​ನ್ಯಾಷನಲ್​ನಲ್ಲಿ ಮೊದಲ ಬಾರಿಗೆ ಕಣಕ್ಕಿಳಿದಾಗ ಪ್ರಶಸ್ತಿಗೆ ಮುತ್ತಿಕ್ಕಿದ್ದರೆ, ಕಳೆದ ವಾರ ದುಬೈನಲ್ಲಿ 2ನೇ ಸುತ್ತಿನಲ್ಲೇ ಎಡವಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net