ಮನೆಯಿಂದ ತಮ್ಮ ಮಾಜಿ ಪತಿಯ ಹೆಸರನ್ನು ಕಿತ್ತು ಹಾಕಿದ ಸಾನಿಯಾ! Sania Mirza removes Shoaib Malik name from Dubai house

sania mirza
Published on

ದುಬೈ: ( Sania Mirza removes Shoaib Malik name from Dubai house ) ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಪಾಕಿಸ್ತಾನಿ ಮಾಜಿ ಕ್ರಿಕೆಟಿಗ ಶೋಯೆಬ್​ ಮಲ್ಲಿಕ್​ಗೆ ​​ವಿಚ್ಛೇದನ ನೀಡಿದ್ದು ಗೊತ್ತೆ ಇದೆ. ಈಗ ದುಬೈ ಮನೆಯಿಂದ ಹೆಸರನ್ನು ತೆಗೆದು ಹಾಕಿದ್ದಾರೆ.

ಸಾನಿಯಾ ಮಿರ್ಜಾ ತಮ್ಮ ದುಬೈ ಮನೆಯಿಂದ ತಮ್ಮ ಮಾಜಿ ಪತಿ ಶೋಯೆಬ್ ಮಲಿಕ್ ಹೆಸರನ್ನು ತೆಗೆದು ಹಾಕಿದ್ದಾರೆ ಎಂಬ ಸುದ್ದಿ ಈಗ ಹೊರ ಬಿದ್ದಿದೆ. ಸಾನಿಯಾ ಮಿರ್ಜಾ ಈಗ ತಮ್ಮ ದುಬೈ ಮನೆಯ ಮೇಲೆ ಶೋಯೆಬ್ ಮಲಿಕ್ ಹೆಸರಿನ ಬದಲು  ತಮ್ಮ ಮಗ ಇಜಾನ್ ಹೆಸರನ್ನು ಬರೆದಿದ್ದಾರೆ. ಸಾನಿಯಾ ತನ್ನ ದುಬೈ ಮನೆಯಿಂದ ಶೋಯೆಬ್ ಮಲಿಕ್ ಹೆಸರನ್ನು ತೆಗೆದುಹಾಕುವ ಮೂಲಕ ತನ್ನ ಜೀವನದಲ್ಲಿ ಗಮನಾರ್ಹ ಬದಲಾವಣೆಯನ್ನು ಮಾಡಿದ್ದಾರೆ.

ಸಾನಿಯಾ ಈ ಮನೆಯಲ್ಲಿ ತಮ್ಮ ಮಗ ಇಜಾನ್ ಜೊತೆ ವಾಸಿಸುವ ಮೂಲಕ ಹೊಸ ಜೀವನ ಆರಂಭ ಮಾಡೋದಕ್ಕೆ ಸಜ್ಜಾಗಿದ್ದಾರಂತೆ. ಬಹಳ ದಿನಗಳಿಂದ ತನ್ನ ಮಗನೊಂದಿಗೆ ಯುಎಇಯಲ್ಲಿ ವಾಸಿಸುತ್ತಿರುವ ಸಾನಿಯಾ ಮಿರ್ಜಾ, ಇಜಾನ್ ಈಗ ನನ್ನ ಬದುಕಿನ ದೊಡ್ಡ ಆದ್ಯತೆ ಎಂದು ಹೇಳಿದ್ದರು.

2010ರಲ್ಲಿ ಶೋಯೆಬ್ ಮಲಿಕ್ ಮತ್ತು ಸಾನಿಯಾ ಮಿರ್ಜಾ ಹೈದರಾಬಾದ್‌ನಲ್ಲಿ ವಿವಾಹವಾಗಿದ್ದರು. 2018ರಲ್ಲಿ, ಸಾನಿಯಾ ಮಿರ್ಜಾ ಇಜಾನ್‌ಗೆ ಜನ್ಮ ನೀಡಿದ್ದರು.  ನಂತರ ಇಬ್ಬರೂ 2023 ರಲ್ಲಿ ವಿಚ್ಛೇದನ ಪಡೆದರು. ಇದೀಗ ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರನ್ನು ಶೋಯೆಬ್ ಮಲಿಕ್ ವಿವಾಹವಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net