2021ರ ಮೊದಲ ಪ್ರಶಸ್ತಿ ಗೆಲುವಿನ ಸನಿಹದಲ್ಲಿ ಸಾನಿಯಾ ಮಿರ್ಜಾ

sania web
Published on

ಒಸ್ಟ್ರಾವಾ (ಜೆಕ್ ಗಣರಾಜ್ಯ): ಭಾರತದ ತಾರೆ ಸಾನಿಯಾ ಮಿರ್ಜಾ ಮತ್ತು ಚೀನಾದ ಝಂಗ್ ಶುಯಿ ಜೋಡಿ ಓಸ್ಟ್ರಾವಾ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಡಬಲ್ಸ್ ವಿಭಾಗದಲ್ಲಿ ಫೈನಲ್‌ಗೇರಿದೆ. ಇದರಿಂದ ಸಾನಿಯಾ ಕಳೆದ ವರ್ಷದ ಜನವರಿಯಲ್ಲಿ ಗೆದ್ದ ಹೋಬರ್ಟ್ ಓಪನ್ ಬಳಿಕ ಮೊದಲ ಪ್ರಶಸ್ತಿ ಗೆಲುವಿನ ಸನಿಹದಲ್ಲಿದ್ದಾರೆ.

2ನೇ ಶ್ರೇಯಾಂಕಿತ ಸಾನಿಯಾ-ಶುಯಿ ಜೋಡಿ ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಜಪಾನ್‌ನ ಇರಿ ಹೊಝುಮಿ ಮತ್ತು ಮಕೊಟೊ ನಿನೊಮಿಯ ಜೋಡಿಯನ್ನು 6-2, 7-5 ನೇರಸೆಟ್‌ಗಳಿಂದ ಮಣಿಸಿತು.

ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಸಾನಿಯಾ ಜೋಡಿ ಅಮೆರಿಕದ ಕೈಟಿನ್ ಕ್ರಿಶ್ಚಿಯನ್ ಮತ್ತು ನ್ಯೂಜಿಲೆಂಡ್‌ನ ಇರಿನ್ ರೌಟ್‌ಲಿಫ್​ ಜೋಡಿಯನ್ನು ಎದುರಿಸಲಿದೆ. 34 ವರ್ಷದ ಸಾನಿಯಾಗೆ ಇದು 2021ರ ಋತುವಿನ 2ನೇ ಫೈನಲ್ ಪಂದ್ಯವಾಗಿದೆ. ಕಳೆದ ಆಗಸ್ಟ್‌ನಲ್ಲಿ ಕ್ಲೆವ್‌ಲ್ಯಾಂಡ್ ಓಪನ್‌ನಲ್ಲಿ ಅವರು ರನ್ನರ್‌ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net