

ರಾಂಚಿ: ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಹುಟ್ಟುಹಬ್ಬಕ್ಕೆ ವಿಶ್ವ ಕ್ರಿಕೆಟ್ ವಲಯದಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಧೋನಿ ಪತ್ನಿ ಸಾಕ್ಷಿ ಸಿಂಗ್ ಮಾತ್ರ ತಮ್ಮ ಪತಿಗೆ ಭಾವನಾತ್ಮಕವಾಗಿ ಸಂದೇಶ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಧೋನಿ ಪತ್ನಿ, ಮಂಗಳವಾರ ಇನ್ಸ್ಟಾಗ್ರಾಂನಲ್ಲಿ 4 ಸಾಲುಗಳಲ್ಲಿ ಧೋನಿ ಕುರಿತು ಬರೆದುಕೊಂಡಿದ್ದಾರೆ. ಧೋನಿ ಸಾಮಾಜಿಕ ಜಾಲತಾಣಗಳಿಂದ ದೂರು ಇರುವುದರಿಂದ ಅಭಿಮಾನಿಗಳ ಪಾಲಿಗೆ ಸಾಕ್ಷಿಯೇ ಪ್ರಮುಖ ಕೊಂಡಿದ್ದಾರೆ.
ಇದನ್ನೂ ಓದಿ: VIDEO: ಧೋನಿ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರ
ನೀವು ಹುಟ್ಟಿದ ದಿನದ ಗುರುತು ಇದು. ಮತ್ತೊಂದು ವರ್ಷ ಬಂದಿದೆ. ತಲೆ ಕೂದಲು ಸ್ವಲ್ಪ ಜಾಸ್ತಿ ಬಿಳಿಯಾಗಿದ್ದರೂ ನೀವು ಮತ್ತಷ್ಟು ಸ್ಮಾರ್ಟ್ ಹಾಗೂ ಸಿಹಿಯಾಗಿರುವಿರಿ (ನಿಜವಾಗಿಯೂ). ಶುಭಾಶಯಗಳು, ಉಡುಗೊರೆಗಳಿಗೆ ಬೀಗುವುದಿಲ್ಲ, ಕೇಕ್ ಕಟ್ಟಿಂಗ್ ಹಾಗೂ ಕ್ಯಾಂಡಲ್ ಹಚ್ಚಿಸುವ ಮೂಲಕ ಮತ್ತೊಂದು ವರ್ಷವನ್ನು ಆಚರಿಸಿಸೋಣ ಎಂದು ಪತಿ ಧೋನಿ ಕುರಿತು ಸಾಕ್ಷಿ ಸಿಂಗ್ ಭಾವನಾತ್ಮಕ ಸಂದೇಶದೊಂದಿಗೆ ಬರೆದುಕೊಂಡಿದ್ದಾರೆ. ಫಾರ್ಮ್ ಹೌಸ್ನಲ್ಲಿ ಧೋನಿ ನಾಯಿಗಳೊಂದಿಗೆ ಇರುವ ಫೋಟೋಗಳನ್ನು ಪ್ರಕಟಿಸಿದ್ದಾರೆ. ಧೋನಿ ಹಾಗೂ ಸಾಕ್ಷಿ ಜೋಡಿ ಜುಲೈ 4 ರಂದು 10ನೇ ವರ್ಷ ವಿವಾಹ ವಾಷಿರ್ಕೋತ್ಸವ ಆಚರಿಸಿಕೊಂಡಿತ್ತು.
ಭಾರತದ ತಂಡದ ಹಾಲಿ ಹಾಗೂ ಮಾಜಿ ಆಟಗಾರರು ಧೋನಿ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯ ಕೋರುತ್ತಿದ್ದಾರೆ. ಸಿಎಸ್ಕೆ ತಂಡದ ಆಲ್ರೌಂಡರ್ ಡ್ವೇನ್ ಬ್ರಾವೊ ವಿಶೇಷ ಆಲ್ಪಂ ಬಿಡುಗಡೆ ಮಾಡಿದ್ದಾರೆ. 2019ರ ಏಕದಿನ ವಿಶ್ವಕಪ್ ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ಎದುರು ಸೋತ ಬಳಿಕ ಧೋನಿ ಕ್ರಿಕೆಟ್ನಿಂದ ದೂರ ಉಳಿದಿದ್ದಾರೆ. ಐಪಿಎಲ್ನಲ್ಲಿ ಆಡಲು ಚೆನ್ನೈ ಆಗಮಿಸಿದರೂ ಕರೊನಾ ವೈರಸ್ ಲಾಕ್ಡೌನ್ನಿಂದಾಗಿ ತವರಿಗೆ ವಾಪಸಾಗಿದ್ದರು.