

ಬೆಂಗಳೂರು: ಕರೊನಾ ವೈರಸ್ ಲಾಕ್ಡೌನ್ನಿಂದಾಗಿ ಕಳೆದ ಎರಡೂವರೆ ತಿಂಗಳಿಂದ ಜಾಗತಿಕ ಕ್ರೀಡಾಲೋಕವೇ ನಿಂತ ನೀರಾಗಿತ್ತು. ಇದೀಗ ಹಂತ ಹಂತವಾಗಿ ಕ್ರೀಡಾ ಚಟುವಟಿಕೆಗಳು ಆರಂಭಗೊಳ್ಳುತ್ತಿವೆ. ಭಾರತೀಯ ಕ್ರೀಡಾ ಪ್ರಾಧಿಕಾರ ಹಾಗೂ ಕ್ರೀಡಾ ಸಚಿವಾಲಯದ ಕೆಲವೊಂದು ಮಾರ್ಗಸೂಚಿಗಳೊಂದಿಗೆ ಕ್ರೀಡಾ ಚಟುವಟಿಕೆಗಳಿಗೆ ಅಸ್ತು ಎಂದಿವೆ. ಆದರೆ, ದೈಹಿಕ ಸಂಪರ್ಕ ಕ್ರೀಡೆಗಳಿಗೆ ಇನ್ನು ಅನುಮತಿ ಸಿಕ್ಕಿಲ್ಲ. ಇದರಿಂದಾಗಿ 2016ರ ರಿಯೋ ಒಲಿಂಪಿಕ್ಸ್ ಪದಕ ವಿಜೇತೆ ಕುಸ್ತಿ ಪಟು ಸಾಕ್ಷಿ ಮಲಿಕ್ ತವರಿನಲ್ಲಿ ದೇಸಿ ಅಖಾಡದಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ.
ಇದನ್ನೂ ಓದಿ: ವಲಸೆ ಕಾರ್ಮಿಕರ ಸಂಕಷ್ಟಕ್ಕೆ ಮಿಡಿದ ಸೆಹ್ವಾಗ್ ಕುಟುಂಬ
ಒಲಿಂಪಿಕ್ ಪದಕ ವಿಜೇತೆ ಸಾಕ್ಷಿ
2016ರ ರಿಯೋ ಒಲಿಂಪಿಕ್ಸ್ ಮಹಿಳೆಯರ 58 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಸಾಕ್ಷಿ ಮಲಿಕ್ ಕಂಚಿನ ಪದಕ ಜಯಿಸಿದ್ದರು. ಈ ಮೂಲಕ ಕೂಟದಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟಿದ್ದರು. ಬಳಿಕ ಸಾಕ್ಷಿ ನಿರ್ವಹಣೆ ಕೂಡ ಅಷ್ಟಾಗಿ ಸುಧಾರಿಸಲಿಲ್ಲ. ಲಾಕ್ಡೌನ್ ವೇಳೆ ಮನೆಯಲ್ಲೇ ಲಾಕ್ ಆಗಿದ್ದ ಸಾಕ್ಷಿ ದೂರದರ್ಶನದಲ್ಲಿ ಮರುಪ್ರಸಾರಗೊಂಡ ‘ಮಹಾಭಾರತ್’ ಧಾರಾವಾಹಿ ವೀಕ್ಷಿಸಿದರಂತೆ. ನನ್ನ ಪಾಲಕರು ಯಾವಾಗಲೂ ಈ ಧಾರಾವಾಹಿ ಬಗ್ಗೆ ಹೇಳುತ್ತಿದ್ದರು, ಪ್ರತಿ ಎಪಿಸೋಡ್ ನೋಡಿದೆ ಎಂದು ಸಾಕ್ಷಿ ಹೇಳುತ್ತಾರೆ.