ಸೈನಾ-ಕಶ್ಯಪ್​ ಮತ್ತೆ ಲವ್​ಆಲ್​!: ವೈವಾಹಿಕ ಜೀವನದ ಬಿರುಕು ಸರಿಪಡಿಸಲು ಮುಂದಾದ ಕ್ರೀಡಾ ಜೋಡಿ

New Project
Published on

ಬೆಂಗಳೂರು: ಭಾರತೀಯ ಬ್ಯಾಡ್ಮಿಂಟನ್​ ತಾರೆಯರಾದ ಸೈನಾ ನೆಹ್ವಾಲ್​ ಮತ್ತು ಪಾರುಪಳ್ಳಿ ಕಶ್ಯಪ್​ ಮತ್ತೆ ಒಂದಾಗುವ ಮೂಲಕ ಏಳು ವರ್ಷಗಳ ದಾಂಪತ್ಯ ಜೀವನಕ್ಕೆ ಮರುಜೀವ ನೀಡಲು ಬಯಸಿದ್ದು, ಇವರಿಬ್ಬರು ಜತೆಯಾಗಿರುವ ಚಿತ್ರವೊಂದನ್ನು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಜಂಟಿಯಾಗಿ ಹಂಚಿಕೊಂಡಿದ್ದಾರೆ.

ಪಾರುಪಳ್ಳಿ ಕಶ್ಯಪ್​ ಅವರಿಂದ ವಿಚ್ಛೇದನ ಪಡೆಯಲು ನಿರ್ಧರಿಸಿರುವ ವಿಷಯವನ್ನು ಸೈನಾ ನೆಹ್ವಾಲ್​ ಕಳೆದ ಜುಲೈ 13ರಂದು ಇನ್​ಸ್ಟಾಗ್ರಾಮ್​ ಸ್ಟೋರಿ ಮೂಲಕ ಪ್ರಕಟಿಸಿದ್ದರು. ಆದರೆ ಶನಿವಾರ ದಂಪತಿ ಹಂಚಿಕೊಂಡಿರುವ ಪೋಸ್ಟ್​ನಲ್ಲಿ, "ಕೆಲವೊಮ್ಮೆಅಂತರವು ಕೆಲವೊಬ್ಬರ ಅನುಪಸ್ಥಿತಿಯ ಮೌಲ್ಯವನ್ನು ನಮಗೆ ತಿಳಿಸುತ್ತದೆ. ನಾವು ಮತ್ತೆ ಒಂದಾಗಲು ಪ್ರಯುತ್ನಿಸುತ್ತಿದ್ದೇವೆ' ಎಂದು ಬರೆದಿದ್ದಾರೆ. ಈ ಮೂಲಕ ತಮ್ಮ ನಡುವಿನ ಬಿರುಕು ಸರಿಪಡಿಸಿಕೊಳ್ಳುವ ನಿರ್ಧಾರವನ್ನು ತಿಳಿಸಿದ್ದಾರೆ.

ಹೈದರಾಬಾದ್​ನ ಪಿ. ಗೋಪಿಚಂದ್​ ಅಕಾಡೆಮಿಯಲ್ಲಿ ಜತೆಯಾಗಿ ತರಬೇತಿ ಮತ್ತು ಬ್ಯಾಡ್ಮಿಂಟನ್​ ಟೂರ್ನಿಗಳಲ್ಲಿ ಆಡುತ್ತ ಆಪ್ತರಾಗಿದ್ದ ಸೈನಾ&ಕಶ್ಯಪ್​ 2018ರ ಡಿಸೆಂಬರ್​ನಲ್ಲಿ ವಿವಾಹವಾಗಿದ್ದರು. ಲಂಡನ್​ ಒಲಿಂಪಿಕ್ಸ್​ ಕಂಚು ವಿಜೇತೆ 35 ವರ್ಷದ ಸೈನಾ, ಅವಳಿ ಕಾಮನ್ವೆಲ್ತ್​ ಗೇಮ್ಸ್​ ಚಾಂಪಿಯನ್​ ಸಹ ಆಗಿದ್ದಾರೆ. 2014ರ ಕಾಮನ್ವೆಲ್ತ್​ ಗೇಮ್ಸ್​ ಸ್ವರ್ಣ ವಿಜೇತ 38 ವರ್ಷದ ಕಶ್ಯಪ್​, ಕಳೆದ ವರ್ಷ ನಿವೃತ್ತಿ ಹೊಂದಿದ್ದು, ಪ್ರಸಕ್ತ ಕೋಚಿಂಗ್​ನತ್ತ ಗಮನಹರಿಸಿದ್ದಾರೆ. 2012ರಲ್ಲಿ ಅರ್ಜುನ ಪ್ರಶಸ್ತಿಯೂ ಅವರಿಗೆ ಒಲಿದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net