ಸ್ಟಾರ್‌ಗಳಾದ ಕರೀನಾ ಕಪೂರ್-ಸೈಫ್ ಅಲಿ ಖಾನ್ ಪುತ್ರನಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಸ್ಥಾನ..?

kareen new for web
Published on

ನವದೆಹಲಿ: 2008ರಲ್ಲಿ ಆರಂಭಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್ ಇದುವರೆಗೂ ಎಲ್ಲ ವರ್ಗದ ಜನರನ್ನು ತಲುಪಿದೆ. ಸದ್ಯ ಕರೊನಾ ಮಹಾಮಾರಿಯಿಂದಾಗಿ ಯುಎಇಯಲ್ಲಿ 13ನೇ ಐಪಿಎಲ್ ನಡೆಯುತ್ತಿದೆ. ಹಿಂದಿನ ಆವೃತ್ತಿಗಳಲ್ಲಿ ಸೆಲೆಬ್ರಿಟಿಗಳು ಕೂಡ ಸ್ಟೇಡಿಯಂಗೆ ಆಗಮಿಸಿ ಪಂದ್ಯ ವೀಕ್ಷಿಸುತ್ತಿದ್ದರು. ಆದರೆ, ಈ ಬಾರಿ ಅಂಥ ಅವಕಾಶ ಕೈತಪ್ಪಿದೆ. ಕ್ರಿಕೆಟ್ ಅಭಿಮಾನಿಯಾಗಿರುವ ಬಾಲಿವುಡ್ ನಟಿ ಕರೀನಾ ಕಪೂರ್, ಬ್ಯಾಟ್ ಹಿಡಿದು ನಿಂತಿರುವ ತಮ್ಮ ಮಗನ ಫೋಟೋ ಪ್ರಕಟಿಸಿ, ಯಾರಾದರೂ ನನಗೆ ಆಡಲು ಅವಕಾಶ ನೀಡುವಿರಾ ಎಂದು ಮಗ ಹೇಳಿದಂತೆ ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಕರೀನಾ ಕಪೂರ್ ಹಾಕಿದ್ದ ಫೋಟೋಗೆ ತಕ್ಷಣವೇ ಪ್ರತಿಕ್ರಿಯಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಬಾಲಿವುಡ್ ನ ಸ್ಟಾರ್ ದಂಪತಿ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಮಗ ತೈಮೂರ್‌ಗೆ ಅವಕಾಶ ನೀಡುವುದಾಗಿ ಇನ್‌ಸ್ಟಾಗ್ರಾಂನಲ್ಲೇ ಘೋಷಿಸಿದೆ. ನವಾಬ್ ಕುಟುಂಬದ ಕುಡಿಗೆ ಸ್ಥಾನ ಇಲ್ಲ ಎನ್ನಲು ಸಾಧ್ಯವೆ. ಆತ ನಮ್ಮ ತಂಡದಲ್ಲಿ ಇರಲು ಬಯಸುತ್ತೇವೆ. ನವಾಬ್ ಯಾವಾಗಲೂ ರಾಜಧಾನಿಗೆ ಸೇರಿದವರು ಎಂದು ಬರೆಯಲಾಗಿದೆ.

ಸೈಫ್ ಆಲಿ ಖಾನ್ ಕೂಡ ಕ್ರಿಕೆಟಿಗರಾಗಿದ್ದರು. ಸೈಫ್ ತಂದೆ ಮನ್ಸೂರ್ ಅಲಿ ಖಾನ್ ಪಟೌಡಿ, ಭಾರತೀಯ ಕ್ರಿಕೆಟ್‌ನ ದಿಗ್ಗಜ ಆಟಗಾರರಾಗಿದ್ದರು. ಸೈಫ್ ಅವರ ಮತ್ತೋರ್ವ ಮಗ ಇಬ್ರಾಹಿಂ ಕೂಡ ತಂದೆ-ತಾತನಂತೆ ಕ್ರಿಕೆಟ್ ಕುರಿತ ಆಸಕ್ತಿ ಹೊಂದಿದ್ದಾರೆ. ಬಾಲಿವುಡ್ ನಟ-ನಟಿಯರು, ಮಾಜಿ ಕ್ರಿಕೆಟಿಗರು ತೈಮೂರ್‌ ಚಿತ್ರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net