ಮೊದಲ ಟೆಸ್ಟ್​ನಲ್ಲೇ ಸಾಯಿ ಸುದರ್ಶನ್​ ಡಕ್​ಔಟ್​! ಅಪಾರ ನಿರೀಕ್ಷೆ ಹುಸಿ ಮಾಡಿದ ಸ್ಟಾರ್​ ಆಟಗಾರ | IND vs ENG Test

ವಿಜಯವಾಣಿ (74)
Published on

IND vs ENG Test: ಇಂದು ಇಂಗ್ಲೆಂಡ್​ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿ ಆರಂಭಗೊಂಡಿದ್ದು, ಕೈಗೆ ಕಪ್ಪು ಪಟ್ಟಿ ಧರಿಸಿ ಟೀಮ್ ಇಂಡಿಯಾ ಅಖಾಡಕ್ಕಿಳಿದಿದೆ. ಟಾಸ್​ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಇಂಗ್ಲೆಂಡ್​ ಕ್ಯಾಪ್ಟನ್ ಬೆನ್​ ಸ್ಟೋಕ್ಸ್, ಬ್ಯಾಟ್​ ಮಾಡುವಂತೆ ಭಾರತಕ್ಕೆ ಆಹ್ವಾನಿಸಿದ್ದಾರೆ. ಅಂತೆಯೇ ಬ್ಯಾಟಿಂಗ್​ಗಿಳಿದ ಟೀಮ್ ಇಂಡಿಯಾಗೆ ಸಾಯಿ ಸುದರ್ಶನ್​ ವಿಕೆಟ್​ ದೊಡ್ಡ ಆಘಾತ ನೀಡಿದೆ.

ಅಪಾರ ನಿರೀಕ್ಷೆಯೊಂದಿಗೆ ಇಂಗ್ಲೆಂಡ್​ ವಿರುದ್ಧದ ಮೊದಲ ಟೆಸ್ಟ್​ಗೆ ಪದಾರ್ಪಣೆ ಮಾಡಿದ ಸಾಯಿ ಸುದರ್ಶನ್, ತಮ್ಮ ಚೊಚ್ಚಲ ಪಂದ್ಯದಲ್ಲೇ ಕ್ರಿಕೆಟ್​ ಪ್ರೇಮಿಗಳು ಮತ್ತು ದಿಗ್ಗಜರ ನಿರೀಕ್ಷೆಯನ್ನು ಹುಸಿ ಮಾಡಿದ್ದಾರೆ. ಕೇವಲ ನಾಲ್ಕು ಎಸೆತಗಳನ್ನು ಎದುರಿಸಿದ ಸುದರ್ಶನ್​, ಒಂದೇ ಒಂದು ರನ್ ಗಳಿಸದೆ ಪೆವಿಲಿಯನ್ ಹಾದಿ ಹಿಡಿದರು. ಆಂಡರ್ಸನ್-ಟೆಂಡೂಲ್ಕರ್ ಟ್ರೋಫಿಯ ಭಾಗವಾಗಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಹೆಡಿಂಗ್ಲಿಯಲ್ಲಿ ನಡೆಯುತ್ತಿದೆ. ಮೊದಲ ದಿನದ ಬ್ರೇಕ್​ ವೇಳೆಗೆ ಭಾರತ 2 ವಿಕೆಟ್‌ ನಷ್ಟಕ್ಕೆ 92 ರನ್ ಗಳಿಸಿದೆ. ಯಶಸ್ವಿ ಜೈಸ್ವಾಲ್ (42) ಬಾರಿಸಿದರೆ, ನಾಯಕ ಶುಭಮನ್​ ಗಿಲ್ (6 *) ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

42 ರನ್​ ಗಳಿಸಿ ಔಟ್ ಆದ ಕನ್ನಡಿಗ ಕೆ.ಎಲ್. ರಾಹುಲ್ ಬಳಿಕ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸಾಯಿ ಸುದರ್ಶನ್ ಉತ್ತಮ ಇನ್ನಿಂಗ್ಸ್ ಆಡುವಲ್ಲಿ ಎಡವಿದರು. ಬೆನ್ ಸ್ಟೋಕ್ಸ್ ಬೌಲಿಂಗ್‌ನಲ್ಲಿ ಜೇಮ್ಸ್ ಸ್ಮಿತ್‌ಗೆ ಕ್ಯಾಚ್ ಹಿಡಿದ ಹಿನ್ನಲೆ ಸಾಯಿ ಪೆವಿಲಿಯನ್​ ಹಾದಿ ಹಿಡಿಯಬೇಕಾಯಿತು. ಐಪಿಎಲ್‌ನಲ್ಲಿ ಮಿಂಚಿದ ಸಾಯಿ ಸುದರ್ಶನ್​, ಟೀಮ್ ಇಂಡಿಯಾ ಪರ ಮೊದಲ ಟೆಸ್ಟ್ ಪಂದ್ಯದಲ್ಲಿ ತಮ್ಮ ಸಾಮರ್ಥ್ಯ ತೋರಿಸಲು ವಿಫಲರಾಗಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net