ಸೆಮಿಫೈನಲ್‌ಗೇರಿದ ಭಾರತ: ನೇಪಾಳ ಎದುರು 2-0 ಜಯ

ind ftt
Published on

ಬೆಂಗಳೂರು: ನಾಯಕ ಸುನೀಲ್ ಛೇಟ್ರಿ (61ನೇ ನಿಮಿಷ) ಹಾಗೂ ಮಹೇಶ್ ಸಿಂಗ್ (70) ದ್ವಿತೀಯಾರ್ಧದಲ್ಲಿ ಸಿಡಿಸಿದ ಗೋಲುಗಳ ನೆರವಿನಿಂದ ‘ಬ್ಲೂ ಟೈಗರ್ಸ್‌’ ಖ್ಯಾತಿಯ ಭಾರತ ುಟ್‌ಬಾಲ್ ತಂಡ ಪ್ರತಿಷ್ಠಿತ ಸ್ಯಾಫ್ ಚಾಂಪಿಯನ್‌ಷಿಪ್‌ನ ತನ್ನ ಎರಡನೇ ಪಂದ್ಯದಲ್ಲಿ ನೇಪಾಳ ಎದುರು 2-0 ಅಂತರದಿಂದ ಗೆಲುವು ದಾಖಲಿಸಿದೆ. ಇದರೊಂದಿಗೆ ಎ ಗುಂಪಿನಿಂದ 2ನೇ ತಂಡವಾಗಿ ಸೆಮಿಫೈನಲ್‌ ಸ್ಥಾನ ಖಚಿತಪಡಿಸಿಕೊಂಡಿದೆ.

ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಜಿದ್ದಾಜಿದ್ದಿನ ಹೋರಾಟ ಪ್ರದರ್ಶಿಸಿದ ಉಭಯ ತಂಡಗಳು ಮೊದಲಾರ್ಧದಲ್ಲಿ ದೊರೆತ ಅವಕಾಶಗಳಲ್ಲಿ ಗೋಲು ಸಿಡಿಸಲು ವಿಲವಾದವು. ಹಿಂದಿನ ಐದು ಪಂದ್ಯಗಳಲ್ಲಿ ನೇಪಾಳ ವಿರುದ್ಧ ಗೆದ್ದು ಬೀಗಿದ್ದ ಆತಿಥೇಯರಿಗೆ ಈ ಬಾರಿ ಪ್ರಬಲ ಸವಾಲು ಎದುರಾಯಿತು. ಆರಂಭಿಕ ಆಡುವ 11ರ ಬಳಗದಲ್ಲಿ ಎಂಟು ಆಟಗಾರರ ಬದಲಾವಣೆಯೊಂದಿಗೆ ಕಣಕ್ಕಿಳಿದ ಭಾರತ, ಆರಂಭದಿಂದಲೂ ಆಕ್ರಮಣಕಾರಿ ಆಟ ಪ್ರದರ್ಶಿಸಿತು. ಪಂದ್ಯದ 61ನೇ ನಿಮಿಷದಲ್ಲಿ ಸುನೀಲ್ ಛೇಟ್ರಿ ಭಾರತಕ್ಕೆ ಮೊದಲ ಯಶಸ್ಸು ತಂದರು. ಇದು ಸುನೀಲ್ ಛೇಟ್ರಿ ಭಾರತದ ಪರ ಸಿಡಿಸಿದ 91ನೇ ಗೋಲು ಆಗಿದೆ. ಬಳಿಕ 10 ನಿಮಿಷದ ಆಂತರದಲ್ಲಿ ಛೇಟ್ರಿ ಮತ್ತೊಂದು ಗೋಲು ಗಳಿಸುವ ಅವಕಾಶ ಪಡೆದರು. ಆಗ ಕ್ರಾಸ್ ಬಾರ್‌ಗೆ ತಗುಲಿ ರಿಬೌಂಡ್ ಆದ ಚೆಂಡನ್ನು ಮಹೇಶ್ ಸಿಂಗ್ ಗೋಲುಪೆಟ್ಟಿಗೆ ಸೇರಿಸಿದರು. ಈ ಮೂಲಕ ಭಾರತ ಪಂದ್ಯದಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net