ಶ್ರೀಲಂಕಾಗೆ ಮಣಿದ ಬಾಂಗ್ಲಾದೇಶ: ಶತಕವಂಚಿತ ಸಧೀರ ಸಮರ ವಿಕ್ರಮ

New-Project-4
Published on

ಕೊಲಂಬೊ: ಬ್ಯಾಟರ್ ಸಧೀರ ಸಮರ ವಿಕ್ರಮ (93 ರನ್, 72 ಎಸೆತ, 8 ಬೌಂಡರಿ, 2 ಸಿಕ್ಸರ್) ಶತಕವಂಚಿತ ಬ್ಯಾಟಿಂಗ್ ನೆರವಿನಿಂದ ಜಂಟಿ ಆತಿಥೇಯ ಶ್ರೀಲಂಕಾ ತಂಡ ಏಷ್ಯಾಕಪ್ ಏಕದಿನ ಟೂರ್ನಿಯ ಸೂಪರ್-4 ಪಂದ್ಯದಲ್ಲಿ ಬಾಂಗ್ಲಾದೇಶ ಎದುರು 21 ರನ್‌ಗಳಿಂದ ಗೆಲುವು ದಾಖಲಿಸಿದೆ. ಇದರೊಂದಿಗೆ ದಸುನ್ ಶನಕ ಪಡೆ ಏಕದಿನ ಕ್ರಿಕೆಟ್‌ನಲ್ಲಿ ಗೆಲುವಿನ ಓಟ ಸತತ 13 ಪಂದ್ಯಕ್ಕೆ ವಿಸ್ತರಿಸಿದೆ. ಆದರೆ, ಶಕೀಬ್ ಅಲ್ ಹಸನ್ ಪಡೆ ಸೂಪರ್-4 ರೇಸ್‌ನಿಂದ ಬಹುತೇಕ ಹೊರಬಿದ್ದಂತಾಗಿದೆ.

ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ಸಧೀರ ಸಮರವಿಕ್ರಮ ಹಾಗೂ ಕುಸಲ್ ಮೆಂಡಿಸ್ (50) ಅರ್ಧಶತಕಗಳ ಬಲದಿಂದ 9 ವಿಕೆಟ್‌ಗೆ 257 ರನ್ ಪೇರಿಸಿದೆ. ಪ್ರತಿಯಾಗಿ ತೌಹಿದ್ ಹೃದಯ್ (82 ರನ್, 97 ಎಸೆತ, 7 ಬೌಂಡರಿ, 1 ಸಿಕ್ಸರ್) ಏಕಾಂಗಿ ಹೋರಾಟ ನಡುವೆಯೂ, ಬಾಂಗ್ಲಾದೇಶ 48.1 ಓವರ್‌ಗಳಲ್ಲಿ 236 ರನ್‌ಗಳಿಗೆ ಸರ್ವಪತನ ಕಂಡಿತು.

ಶ್ರೀಲಂಕಾ: 9 ವಿಕೆಟ್‌ಗೆ 257 (ದಿಮುತ್ 18, ನಿಸ್ಸಂಕಾ 40, ಕುಸಲ್ 50, ಸಮರ ವಿಕ್ರಮ 93, ಅಸಲಂಕಾ 10, ಶನಕ 24, ಟಸ್ಕಿನ್ 62ಕ್ಕೆ 3, ಹಸನ್ ಮಹಮುದ್ 57ಕ್ಕೆ 3).

ಬಾಂಗ್ಲಾದೇಶ: 48.1 ಓವರ್‌ಗಳಲ್ಲಿ 236 (ಮೊಹಮದ್ ನಯೀಮ್ 21, ಮೆಹಿದಿ 28, ಲಿಟನ್ 15, ಶಕೀಬ್ 3, ಮುಶ್ಫೀಕರ್ 29, ತೌಹಿದ್ 82, ತೀಕ್ಷಣ 69ಕ್ಕೆ3, ಶನಕ 28ಕ್ಕೆ3, ಪಥೀರಣ 58ಕ್ಕೆ3).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net