

ಲಂಡನ್: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ರ 2011ರ ವಿಶ್ವಕಪ್ ಗೆಲುವಿನ ಕ್ಷಣ ಗ್ರೇಟೆಸ್ಟ್ ಲೌರೇಸ್ ಸ್ಪೋರ್ಟಿಂಗ್ ಮೂವ್ವೆುಂಟ್ ಅವಾರ್ಡ್ಸ್ ಪ್ರಶಸ್ತಿಗೆ ಶಾರ್ಟ್ ಲಿಸ್ಟ್ ಆಗಿದೆ. ಕಳೆದ 20 ವರ್ಷಗಳಲ್ಲಿ ಕ್ರೀಡಾಲೋಕದ 20 ಸ್ಮರಣೀಯ ಕ್ಷಣಗಳನ್ನು ಅಂತಿಮ ಪಟ್ಟಿಯಲ್ಲಿ ಇಡಲಾಗಿದೆ. 2011ರಲ್ಲಿ ಭಾರತ ತಂಡ ಏಕದಿನ ವಿಶ್ವಕಪ್ ಗೆದ್ದ ಬಳಿಕ ಸಚಿನ್ ತೆಂಡುಲ್ಕರ್ರನ್ನು ತಂಡದ ಸಹ ಆಟಗಾರರು ತಮ್ಮ ಭುಜದ ಮೇಲೆ ಹೊತ್ತು ವಾಂಖೆಡೆ ಸ್ಟೇಡಿಯಂನ ಸುತ್ತು ಬಂದಿದ್ದರು, ಈ ಕ್ಷಣವನ್ನು ‘ದೇಶವನ್ನು ಭುಜದ ಮೇಲೆ ಹೊತ್ತ ಕ್ಷಣ’ ಎಂದು ಹೆಸರಿಡಲಾಗಿದೆ.
ಜನವರಿ 10 ರಿಂದ ಫೆ.16ರವರೆಗೆ ಅಭಿಮಾನಿಗಳು ಪ್ರಶಸ್ತಿಗೆ ವೋಟ್ ಮಾಡುವ ಅವಕಾಶ ಹೊಂದಿದ್ದು, ಫೆ. 17 ರಂದು ಬರ್ಲಿನ್ನಲ್ಲಿ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟವಾಗಲಿದೆ. ಸಚಿನ್ ಮಾತ್ರವಲ್ಲದೆ, 2005ರ ಆಶಸ್ ಗೆಲುವಿನ ಬಳಿಕ ಇಂಗ್ಲೆಂಡ್ನ ಫ್ಲಿಂಟಾಪ್ ವಿಜಯದ ಸಂಭ್ರಮ ಆಚರಿಸುವ ಬದಲು ಬ್ರೆಟ್ ಲೀಗೆ ಹಸ್ತಲಾಘವ ಮಾಡಿದ ಕ್ಷಣ ಕೂಡ ಪ್ರಶಸ್ತಿಯ ರೇಸ್ನಲ್ಲಿದೆ.