ತನ್ನ ದಾಖಲೆ ಸರಿಗಟ್ಟಿದ ಕೊಹ್ಲಿಗೆ ಸಚಿನ್ ಶುಭಾಶಯ: ಏನಂದ್ರು ಕ್ರಿಕೆಟ್ ದೇವರು?

Sachin Kohli
Published on

ಕೋಲ್ಕತ: 'ಕ್ರಿಕೆಟ್ ದೇವರ' ದಾಖಲೆಯನ್ನು ಹುಟ್ಟಿದ ದಿನದಂದೇ ಸರಿಗಟ್ಟಿ ಹೊಸ ದಾಖಲೆಯನ್ನು ಹುಟ್ಟುಹಾಕುವ ಭರವಸೆ ಮೂಡಿಸಿರುವ ವಿರಾಟ್ ಕೊಹ್ಲಿಗೆ ಇದೀಗ ಸಚಿನ್ ತೆಂಡುಲ್ಕರ್ ಶುಭಾಶಯ ಕೋರಿದ್ದಾರೆ.

ಕೋಲ್ಕತದ ಈಡನ್​ ಗಾರ್ಡನ್​ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್​ ಪಂದ್ಯದಲ್ಲಿ ಭಾರತ ಕ್ರಿಕೆಟ್​ ತಂಡದ ಸ್ಟಾರ್​ ಬ್ಯಾಟ್ಸ್​ಮನ್​ ವಿರಾಟ್ ಕೊಹ್ಲಿ ಇಂದು ಶತಕ ಬಾರಿಸುವ ಮೂಲಕ ಸಚಿನ್ ದಾಖಲೆ ಸರಿಗಟ್ಟಿ ತಮ್ಮ ಜನ್ಮದಿನವನ್ನು ಅವಿಸ್ಮರಣೀಯ ಆಗಿಸಿಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಇಂದು ಅಮೋಘ ಆಟವನ್ನು ಪ್ರದರ್ಶಿಸಿದ ವಿರಾಟ್​ ಕೊಹ್ಲಿ ಈ ಸಾಧನೆ ಮಾಡಿದ್ದು, ಏಕದಿನ ಕ್ರಿಕೆಟ್​ನಲ್ಲಿ 49ನೇ ಶತಕ ಬಾರಿಸುವ ಮೂಲಕ ಸಚಿನ್ ತೆಂಡುಲ್ಕರ್ ಮಾಡಿದ್ದ ಅದೇ ಸಾಧನೆಯನ್ನು ಸರಿಗಟ್ಟಿದ್ದಾರೆ.

ಈ ವರ್ಷದ ಆರಂಭದಲ್ಲಿ 49ರಿಂದ 50ಕ್ಕೆ ಹೋಗಲು ನನಗೆ 365 ದಿನಗಳು ಬೇಕಾದವು. ನೀವು 49ರಿಂದ 50ಕ್ಕೆ ಹೋಗಿ ಮುಂದಿನ ಕೆಲವು ದಿನಗಳಲ್ಲಿ ನನ್ನ ದಾಖಲೆಯನ್ನು ಮುರಿಯುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದು ವಿರಾಟ್ ಕೊಹ್ಲಿಗೆ ಸಚಿನ್ ತೆಂಡುಲ್ಕರ್ ಶುಭಾಶಯ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net