

ಮೆಲ್ಬೋರ್ನ್: ವಿಶ್ವ ಕ್ರಿಕೆಟ್ನ ದಿಗ್ಗಜ ಬ್ಯಾಟ್ಸ್ಮನ್ ಸಚಿನ್ ತೆಂಡುಲ್ಕರ್, ಆಸ್ಟ್ರೇಲಿಯಾದ ಮಾಜಿ ಆಟಗಾರ ರಿಕಿ ಪಾಂಟಿಂಗ್ ತಂಡದ ಕೋಚ್ ಆಗಿದ್ದಾರೆ! ಆಸ್ಟ್ರೇಲಿಯಾದಲ್ಲಿ ಕಾಡ್ಗಿಚಿನಿಂದಾಗಿ ಉಂಟಾದ ಹಾನಿಗೆ ಪರಿಹಾರ ನಿಧಿ ಸಂಗ್ರಹಿಸುವ ಸಲುವಾಗಿ ಫೆಬ್ರವರಿ 8ರಂದು ಬುಶ್ಫೈರ್ ಕ್ರಿಕೆಟ್ ಬ್ಯಾಶ್ ನಡೆಯಲಿದ್ದು, ಟೀಮ್ ರಿಕಿ ಪಾಂಟಿಂಗ್ ಹಾಗೂ ಟೀಮ್ ಶೇನ್ ವಾರ್ನ್ ತಂಡಗಳು ಮುಖಾಮುಖಿಯಾಗಲಿವೆ. ಇದರಲ್ಲಿ ರಿಕಿ ಪಾಂಟಿಂಗ್ ತಂಡಕ್ಕೆ ಸಚಿನ್ ತೆಂಡುಲ್ಕರ್ ಕೋಚ್ ಆಗಿದ್ದರೆ, ಶೇನ್ ವಾರ್ನ್ ತಂಡಕ್ಕೆ ವೆಸ್ಟ್ ಇಂಡೀಸ್ನ ದಿಗ್ಗಜ ವೇಗಿ ರ್ಕ್ನಟಿ ವಾಲ್ಶ್ ಕೋಚ್ ಆಗಿರಲಿದ್ದಾರೆ. ಫೆ. 8 ರಂದು ನಡೆಯಲಿರುವ ಬಿಗ್ಬಾಷ್ ಫೈನಲ್ಗೂ ಮುನ್ನ ಈ ಪಂದ್ಯ ನಡೆಯಲಿದ್ದು, ಜ.31 ರಂದು ಯಾವ ಮೈದಾನದಲ್ಲಿ ಪಂದ್ಯ ನಡೆಯಲಿದೆ ಎನ್ನುವುದು ನಿರ್ಧಾರವಾಗಲಿದೆ. ಪಾಂಟಿಂಗ್, ವಾರ್ನರ್ರೊಂದಿಗೆ ಜಸ್ಟಿನ್ ಲ್ಯಾಂಗರ್, ಆಡಂ ಗಿಲ್ಕ್ರಿಸ್ಟ್, ಬ್ರೆಟ್ ಲೀ, ಶೇನ್ ವ್ಯಾಟ್ಸನ್, ಅಲೆಕ್ಸ್ ಬ್ಲಾ್ಯಕ್ವೆಲ್ ಹಾಗೂ ಮೈಕೆಲ್ ಕ್ಲಾರ್ಕ್ ಈಗಾಗಲೇ ಈ ಪಂದ್ಯ ಆಡುವುದಾಗಿ ತಿಳಿಸಿದ್ದಾರೆ.