

ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಕೋವಿಡ್-19ರ ವಿರುದ್ಧದ ಹೋರಾಟ ಮುಂದುವರಿಸಿದ್ದಾರೆ. ಈಗಾಗಲೇ 50 ಲಕ್ಷ ರೂ. ದೇಣಿಗೆ ನೀಡಿರುವ ಸಚಿನ್, ಒಂದು ತಿಂಗಳಿಗೆ 5 ಸಾವಿರ ಮಂದಿಗೆ ರೇಷನ್ ನೀಡಲು ನಿರ್ಧರಿಸಿದ್ದಾರೆ.
ಮುಂಬೈ ನಗರದ ಬಡ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಎನ್ಜಿಒ ಅಪ್ನಾಲಯ ಜತೆ ಕೈಜೋಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅಪ್ನಾಲಯ, ಸಚಿನ್ ತೆಂಡುಲ್ಕರ್ ಮಾಡಿರುವ ಸಹಾಯಕ್ಕೆ ಧನ್ಯವಾದ ಅರ್ಪಿಸಿದೆ.
ಬಿಟಿಸಿಯಿಂದ 25 ಲಕ್ಷ ರೂ. ದೇಣಿಗೆ: ಬೆಂಗಳೂರು ಟರ್ಫ್ ಕ್ಲಬ್ (ಬಿಟಿಸಿ) ವತಿಯಿಂದ ಕೋವಿಡ್-19ರ ವಿರುದ್ಧದ ಹೋರಾಟಕ್ಕೆ 25 ಲಕ್ಷ ರೂ. ದೇಣಿಗೆ ನೀಡಲಾಗಿದೆ. ಬಿಟಿಸಿ ಮುಖ್ಯಸ್ಥ ಡಿ.ವಿನೋದ್ ಶಿವಪ್ಪ ಶುಕ್ರವಾರ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರನ್ನು ಭೇಟಿಯಾಗಿ ಚೆಕ್ ಹಸ್ತಾಂತರಿಸಿದರು.