ಫ್ರೆಂಡ್‌ಶಿಷ್ ಡೇ - ಬಾಲ್ಯ ನೆನಪಿಸಿಕೊಂಡ ದಿಗ್ಗಜ ಸಚಿನ್ ತೆಂಡುಲ್ಕರ್

friendship day for webv
Published on

ಬೆಂಗಳೂರು: ಆಗಸ್ಟ್ ಮೊದಲ ಭಾನುವಾರ ಇಡೀ ವಿಶ್ವದಾದ್ಯಂತ ಫ್ರೆಂಡ್‌ಶಿಷ್ ಡೇ ಆಚರಿಸಿಕೊಂಡು ಬರಲಾಗುತ್ತದೆ. ಸೆಲೆಬ್ರಿಟಿಗಳು, ಕ್ರೀಡಾ ತಾರೆಯರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಶುಭಕೋರುವ ಮೂಲಕ ಆಚರಿಸುತ್ತಿದ್ದಾರೆ. ಎಲ್ಲರಿಗಿಂತ ಸ್ವಲ್ಪ ಡಿರೆಂಡ್ ಆಗಿ ವಿಷ್ ಮಾಡಿರುವ ದಿಗ್ಗಜ ಸಚಿನ್ ತೆಂಡುಲ್ಕರ್, ಫ್ರೆಂಡ್‌ಶಿಷ್ ಎಂದರೆ, ಕ್ರಿಕೆಟ್ ಮೈದಾನದಲ್ಲಿರುವ ಫ್ಲಡ್ ಲೈಟ್ಸ್ ಇದ್ದಂತೆ. ಮೈದಾನದ ಎಲ್ಲ ಮೂಲೆಯಲ್ಲಿ ಎಂಜಾಯ್ ಮಾಡುತ್ತಾರೆ. ಸೂರ್ಯ ಮುಳುಗುತ್ತಿದ್ದರೂ ಆ ಫ್ಲಡ್‌ಲೈಟ್‌ಗಳೇ ನಮಗೆ ಹೆಚ್ಚು ಬೆಳಗು ನೀಡುತ್ತವೆ’ ಎಂದು ಟ್ವೀಟ್ ಮಾಡಿದ್ದಾರೆ. ಜತೆಗೆ ತಮ್ಮ ಬಾಲ್ಯದ ಗೆಳೆಯರ ಜತೆಗಿರುವ ಫೋಟೋ ಪ್ರಕಟಿಸಿದ್ದಾರೆ.

ವಿಡಿಯೋ ಬಿಡುಗಡೆ ಮಾಡಿದ ಸಿಎಸ್‌ಕೆ

ಇಂಡಿಯನ್ ಪ್ರೀಮಿಯರ್ ಲೀಗ್ (ಸಿಎಸ್‌ಕೆ) ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಕೂಡ ತಂಡದ ನಾಯಕ ಎಂಎಸ್ ಧೋನಿ-ಸುರೇಶ್ ರೈನಾ ಜತೆಗಿನ ಒಡನಾಟದ ವಿಡಿಯೋವೊಂದನ್ನು ತನ್ನ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದೆ. 

ಭಾರತ ತಂಡದ ಮಾಜಿ ಆಟಗಾರ ದೊಡ್ಡ ಗಣೇಶ್, ದಿಗ್ಗಜರಾದ ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ರಾಹುಲ್ ದ್ರಾವಿಡ್, ಸುನೀಲ್ ಜೋಷಿ, ಜತೆಗಿರುವ ಚಿತ್ರವನ್ನು ಪ್ರಕಟಿಸಿ ಶುಭಾಶಯ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net