ಸಚಿನ್​ @47: ತೆಂಡೂಲ್ಕರ್ ಸಾಧನೆಗಳ ಮೆಲುಕು

Sachin tendulkar
Published on

2 ದಶಕಗಳ ಕಾಲ ಕ್ರಿಕೆಟ್ ಜಗತ್ತನ್ನು ಆಳಿದ ದಿಗ್ಗಜ ಸಚಿನ್ ತೆಂಡುಲ್ಕರ್ ಶುಕ್ರವಾರ 47ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಈಗಲೂ ಅಚ್ಚಳಿಯದೆ ಉಳಿದಿರುವ ಸಚಿನ್, ಕರೊನಾ ಹಾವಳಿಯ ನಡುವೆ ಈ ಬಾರಿ ಜನ್ಮದಿನದ ಸಂಭ್ರಮವನ್ನು ಆಚರಿಸುವುದಿಲ್ಲ ಎಂದಿದ್ದಾರೆ. ಇದರ ನಡುವೆಯೂ ಅವರ ಹೆಸರಿನಲ್ಲಿರುವ 47 ಪ್ರಮುಖ ದಾಖಲೆಗಳ ಸಂಕ್ಷಿಪ್ತ ಮೆಲುಕು ಇಲ್ಲಿದೆ.

  1. ಭಾರತರತ್ನ ಪ್ರಶಸ್ತಿ ಪುರಸ್ಕೃತ ಏಕೈಕ ಕ್ರೀಡಾಪಟು. ಖೇಲ್​ರತ್ನ, ಅರ್ಜುನ, ಪದ್ಮಶ್ರೀ, ಪದ್ಮವಿಭೂಷಣ ಪ್ರಶಸ್ತಿಗಳನ್ನೆಲ್ಲ ಪಡೆದ ಏಕೈಕ ಕ್ರಿಕೆಟಿಗ.
  2. ಟೆಸ್ಟ್ (15,921) ಮತ್ತು ಏಕದಿನ (18,426) ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್.
  3. ಅತಿ ಹೆಚ್ಚು ಟೆಸ್ಟ್ (200) ಮತ್ತು ಏಕದಿನ (463) ಪಂದ್ಯಗಳನ್ನು ಆಡಿದ ಸಾಧನೆ.
  4. ಟೆಸ್ಟ್ (51) ಮತ್ತು ಏಕದಿನ (49) ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಶತಕಗಳು.
  5. ಅತಿ ಹೆಚ್ಚು ಮೈದಾನಗಳಲ್ಲಿ ಟೆಸ್ಟ್ (59) ಮತ್ತು ಏಕದಿನ (96) ಪಂದ್ಯ ಆಡಿದ ಸಾಧನೆ.
  6. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್ (34,347) ಗಳಿಕೆ.
  7. ಸತತವಾಗಿ ಅತಿಹೆಚ್ಚು ಏಕದಿನ (185), ಟೆಸ್ಟ್ (85) ಪಂದ್ಯ ಆಡಿದ ದಾಖಲೆ.
  8. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಬೌಂಡರಿ (4,074) ಸಿಡಿಸಿದ ಸಾಧನೆ.
  9. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಗರಿಷ್ಠ ಪಂದ್ಯಶ್ರೇಷ್ಠ ಪ್ರಶಸ್ತಿ (72).
  10. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 100 ಶತಕದ ಸಾಧನೆ.
  11. ಟೆಸ್ಟ್ (5) ಮತ್ತು ಏಕದಿನ (15) ಕ್ರಿಕೆಟ್​ನಲ್ಲಿ ಗರಿಷ್ಠ ಸರಣಿಶ್ರೇಷ್ಠ ಗರಿ.
  12. 4 ಬಾರಿ ಒಂದೇ ವರ್ಷದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 2 ಸಾವಿರಕ್ಕಿಂತ ಹೆಚ್ಚು ರನ್.
  13. ಏಕದಿನ ಕ್ರಿಕೆಟ್​ನಲ್ಲಿ ದ್ವಿಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟ್ಸ್​ಮನ್.
  14. ಒಟ್ಟಾರೆಯಾಗಿ ಒಂದೇ ದೇಶದ ವಿರುದ್ಧ (ಆಸ್ಟ್ರೇಲಿಯಾ) ಅತಿ ಹೆಚ್ಚು 6,707 ರನ್ ಗಳಿಕೆ.
  15. ಒಂದೇ ದೇಶದ ವಿರುದ್ಧ (ಆಸ್ಟ್ರೇಲಿಯಾ) ಅತಿ ಹೆಚ್ಚು 20 ಶತಕ ಸಿಡಿಸಿದ ಸಾಧನೆ.
  16. ಭಾರತ ಪರ ಟೆಸ್ಟ್ ಮತ್ತು ಏಕದಿನ (16 ವರ್ಷ) ಪಂದ್ಯ ಆಡಿದ ಅತಿ ಕಿರಿಯ ಆಟಗಾರ.
  17. ವಿದೇಶಿ ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ (8,705).
  18. ಏಕದಿನದಲ್ಲಿ ಆರಂಭಿಕನಾಗಿ ಅತಿ ಹೆಚ್ಚು (15,310) ರನ್, ಶತಕ (45), ಅರ್ಧಶತಕ (75).
  19. ಟೆಸ್ಟ್​ನಲ್ಲಿ ಒಂದೇ (4) ಕ್ರಮಾಂಕದಲ್ಲಿ ಅತಿ ಹೆಚ್ಚು (13,482) ರನ್, ಶತಕ (44), ಅರ್ಧಶತಕ (58).
  20. 20ನೇ ವಯಸ್ಸಿಗೆ ಕಾಲಿಡುವ ಮುನ್ನವೇ ಟೆಸ್ಟ್ ಕ್ರಿಕೆಟ್​ನಲ್ಲಿ 5 ಶತಕ ಸಿಡಿಸಿದ ಸಾಧನೆ.
  21. 1990ರಿಂದ 1998ರ ನಡುವೆ ಸತತವಾಗಿ 239 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕಣಕ್ಕೆ.
  22. ಟೆಸ್ಟ್​ನಲ್ಲಿ ಅತಿ ಹೆಚ್ಚು 50 ಪ್ಲಸ್ (51 ಶತಕ+68 ಅರ್ಧಶತಕ=119) ಗಳಿಕೆ.
  23. ಟೆಸ್ಟ್​ನಲ್ಲಿ ಔಟ್ ಆಗುವ ನಡುವೆ ಗರಿಷ್ಠ 497 ರನ್ (241*, 60*, 194*, 2) ಗಳಿಸಿದ ಸಾಧನೆ.
  24. ಏಕದಿನದಲ್ಲಿ 3 ಬಾರಿ 175 ಪ್ಲಸ್ ರನ್ ಇನಿಂಗ್ಸ್.
  25. ರಣಜಿ, ಇರಾನಿ, ದುಲೀಪ್ ಟ್ರೋಫಿ ದೇಶೀಯ ಟೂರ್ನಿಗಳಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿದ ಏಕೈಕ ಆಟಗಾರ.
  26. ಭಾರತ ಪರ ಅತಿ ಹೆಚ್ಚು ಟೆಸ್ಟ್ (72), ಏಕದಿನ (234) ಗೆಲುವು.
  27. ಜಿಂಬಾಬ್ವೆ ಮತ್ತು ಬಾಂಗ್ಲಾದೇಶ ಹೊರತಾಗಿ ಟೆಸ್ಟ್ ಆಡುವ ಉಳಿದ 7 ರಾಷ್ಟ್ರಗಳ ವಿರುದ್ಧ ಕನಿಷ್ಠ ಒಂದು ಸಾವಿರ ರನ್.
  28. ಟೆಸ್ಟ್​ನಲ್ಲಿ ಪೂರ್ಣಗೊಂಡ ಇನಿಂಗ್ಸ್​ಗಳ ಪೈಕಿ 53 ಬಾರಿ ತಂಡದ ಗರಿಷ್ಠ ಸ್ಕೋರರ್.
  29. ಟೆಸ್ಟ್ ಕ್ರಿಕೆಟ್ ಆಡುವ ಎಲ್ಲ 9 ದೇಶಗಳ ವಿರುದ್ಧ ಕನಿಷ್ಠ 2 ಶತಕ ಸಿಡಿಸಿರುವ ಏಕೈಕ ಬ್ಯಾಟ್ಸ್​ಮನ್.
  30. ಗಂಗೂಲಿ ಜತೆ ಗರಿಷ್ಠ ರನ್ (6,609), ಶತಕದ (21) ಆರಂಭಿಕ ಜತೆಯಾಟ.
  31. ಏಕದಿನದಲ್ಲಿ ಶ್ರೀಲಂಕಾ (3,113) ಮತ್ತು ಆಸ್ಟ್ರೇಲಿಯಾ ವಿರುದ್ಧ (3,077) 3 ಸಾವಿರಕ್ಕಿಂತ ಹೆಚ್ಚು ರನ್.
  32. ಕ್ಯಾಲೆಂಡರ್ ವರ್ಷ (1998) ಒಂದರಲ್ಲಿ ಅತಿ ಹೆಚ್ಚು ಏಕದಿನ ಶತಕ (9).
  33. ಗರಿಷ್ಠ 6 ವಿಶ್ವಕಪ್​ಗಳಲ್ಲಿ (1992-2011) ಆಡಿದ ದಾಖಲೆಯಲ್ಲಿ ಪಾಕಿಸ್ತಾನದ ಜಾವೇದ್ ಮಿಯಾಂದಾದ್ ಜತೆ ಸಮಬಲ.
  34. ಏಕದಿನ ವಿಶ್ವಕಪ್​ನಲ್ಲಿ ಗರಿಷ್ಠ ರನ್ (2,278), ಶತಕ (6), ಅರ್ಧಶತಕ (15).
  35. ಒಂದೇ ವಿಶ್ವಕಪ್​ನಲ್ಲಿ (2003) ಅತಿ ಹೆಚ್ಚು 673 ರನ್.
  36. ಟೆಸ್ಟ್​ನಲ್ಲಿ 20 ಬಾರಿ 150 ಪ್ಲಸ್ ಇನಿಂಗ್ಸ್.
  37. ಏಕದಿನದಲ್ಲಿ 15 ಸಾವಿರಕ್ಕಿಂತ ಹೆಚ್ಚು ರನ್ ಮತ್ತು 150 ವಿಕೆಟ್ ಗಳಿಸಿದ ಏಕೈಕ ಕ್ರಿಕೆಟಿಗ.
  38. ದ್ರಾವಿಡ್ ಜತೆ 2ನೇ ವಿಕೆಟ್​ಗೆ 331 ರನ್ ಸೇರಿಸಿರುವುದು ಏಕದಿನದಲ್ಲಿ ಯಾವುದೇ ವಿಕೆಟ್​ಗೆ ಗರಿಷ್ಠ ಜತೆಯಾಟ.
  39. ಸ್ಪರ್ಧಾತ್ಮಕ ಕ್ರಿಕೆಟ್​ನಲ್ಲಿ 50 ಸಾವಿರಕ್ಕಿಂತ ಹೆಚ್ಚು ರನ್ ಸಿಡಿಸಿದ ಏಕೈಕ ಭಾರತೀಯ.
  40. ಏಕದಿನದಲ್ಲಿ ಅತಿ ಹೆಚ್ಚು 50 ಪ್ಲಸ್ (49 ಶತಕ+ 96 ಅರ್ಧಶತಕ) ಇನಿಂಗ್ಸ್.
  41. ಟೆಸ್ಟ್ ಕ್ರಿಕೆಟ್​ನಲ್ಲಿ 12, 13, 14, 15 ಸಾವಿರ ರನ್ ಪೂರೈಸಿದ ಮೊದಲ ಬ್ಯಾಟ್ಸ್​ಮನ್.
  42. ಐಸಿಸಿ ಟೆಸ್ಟ್ ಬ್ಯಾಟಿಂಗ್ ರ್ಯಾಂಕಿಂಗ್​ನಲ್ಲಿ 10 ವರ್ಷಗಳ ಕಾಲ ಅಗ್ರ 10ರಲ್ಲಿ ಸ್ಥಾನ.
  43. ಏಕದಿನದಲ್ಲಿ 21 ಆಟಗಾರರೊಂದಿಗೆ 99 ಬಾರಿ 100 ಪ್ಲಸ್ ರನ್ ಜತೆಯಾಟದಲ್ಲಿ ಭಾಗಿ.
  44. 129 ಬಾರಿ ಭಾರತ ಪರ ಗರಿಷ್ಠ ಸ್ಕೋರರ್ ಎನಿಸಿದ್ದು ಜಾಗತಿಕ ಏಕದಿನ ಕ್ರಿಕೆಟ್​ನಲ್ಲಿ ದಾಖಲೆ.
  45. ಗೆದ್ದ ಏಕದಿನ ಪಂದ್ಯದಲ್ಲಿ (234) ಅತಿ ಹೆಚ್ಚು 11,157 ರನ್, 33 ಶತಕ ಬಾರಿಸಿದ ಹೆಗ್ಗಳಿಕೆ.
  46. ಟೆಸ್ಟ್​ನಲ್ಲಿ 593 (108 ಸಹ, 485 ಎದುರಾಳಿ), ಏಕದಿನದಲ್ಲಿ 866 (123 ಸಹ, 743 ಎದುರಾಳಿ) ಆಟಗಾರರೊಂದಿಗೆ ಆಟ.
  47. ವಿವಿಧ ಕ್ರಿಕೆಟ್ ಪ್ರಕಾರಗಳಲ್ಲಿ (ಟೆಸ್ಟ್, ಏಕದಿನ, ಟಿ20, ಐಪಿಎಲ್, ಚಾಂಪಿಯನ್ಸ್ ಲೀಗ್ ಟಿ20, ವಿಶ್ವಕಪ್, ರಣಜಿ ಟ್ರೋಫಿ) ಗೆಲುವಿನೊಂದಿಗೆ ವಿದಾಯ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net