

ವಾಷಿಂಗ್ಟನ್: ಷಾಟ್ಪುಟ್ನಲ್ಲಿ ಭಾರತದ ಏಷಿಯನ್ ಚಾಂಪಿಯನ್ಷಿಪ್ನಲ್ಲಿ ಕಂಚಿನ ಪದಕ ಪಡೆದುಕೊಂಡಿರುವ ಇಕ್ಬಾಲ್ ಸಿಂಗ್ ಕೊಲೆಗಾರನಾಗಿರುವ ಘಟನೆ ಇದು.
ಅಮೆರಿಕದಲ್ಲಿ ವಾಸಿಸಿರುವ ಈತ, ತನ್ನ ಪತ್ನಿ ಹಾಗೂ ತಾಯಿಯನ್ನು ಕೊಂದಿರುವ ಆರೋಪದ ಮೇಲೆ ಇದೀಗ ಬಂಧನಕ್ಕೆ ಒಳಗಾಗಿದ್ದಾನೆ.
ಪೆನ್ಸಿಲ್ವೇನಿಯಾದ ಡೆಲವೇರ್ ಕೌಂಟಿಯ 62 ವರ್ಷದ ಸಿಂಗ್ ಪತ್ನಿ ಹಾಗೂ ತಾಯಿಯನ್ನು ಕೊಂದು ಮಕ್ಕಳಿಗೆ ಕರೆ ಮಾಡಿ ನಿಮ್ಮ ತಾಯಿ ಮತ್ತು ಅಜ್ಜಿಯ ಗಂಟಲು ಸೀಳಿ ಕೊಲೆ ಮಾಡಿದ್ದೇನೆ. ನೋಡಿ ಬನ್ನಿ. ಹಾಗೆಯೇ ಪೊಲೀಸರಿಗೆ ವಿಷಯ ತಿಳಿಸಿ ಎನ್ನುವ ಮೂಲಕ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.
ತಂದೆಯ ಮಾತು ಕೇಳಿ ಭಯಭೀತರಾದ ಮಕ್ಕಳು ಮನೆಗೆ ಬಂದಾಗ ತಾಯಿ ಮತ್ತು ಅಜ್ಜಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡಿದ್ದಾರೆ. ಕೂಡಲೇ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಇಕ್ಬಾಲ್ನನ್ನು ಬಂಧಿಸಿದ್ದಾರೆ. ತಾನೇ ಈ ಕೊಲೆ ಮಾಡಿರುವುದಾಗಿಯೂ ಆತ ಒಪ್ಪಿಕೊಂಡಿದ್ದಾನೆ. ಆದರೆ ಕೊಲೆಗೆ ಕಾರಣ ಮಾತ್ರ ಇನ್ನೂ ನಿಗೂಢವಾಗಿದೆ ಎಂದಿದ್ದಾರೆ ಪೊಲೀಸರು. ಮೇಲ್ನೋಟಕ್ಕೆ ಕೂಡ ಈ ಕೊಲೆ ಮಾಡಲು ಯಾವುದೇ ಕಾರಣಗಳು ಕಾಣಿಸುತ್ತಿಲ್ಲ. ಸದ್ಯ ಇಕ್ಬಾಲ್ ಕೂಡ ಮೌನವಾಗಿದ್ದು ಏನನ್ನೂ ಬಾಯಿ ಬಿಡುತ್ತಿಲ್ಲ. ಈ ಕೊಲೆ ಮಕ್ಕಳನ್ನೂ ದಿಗಿಲುಗೊಳಿಸಿದೆ. ಅವರಿಗೂ ಕೊಲೆಯ ಕಾರಣ ಏನೆಂದು ತಿಳಿಯದಾಗಿದೆ ಎಂದಿದ್ದಾರೆ. ಪೊಲೀಸರು.
ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಿದಾರೆ.