

ಡಬ್ಲಿನ್ (ಐರ್ಲೆಂಡ್): ಐರ್ಲೆಂಡ್ ವಿರುದ್ಧ ಟಿ-20 ಪಂದ್ಯದಲ್ಲಿ ಭಾರತವು ಏಳು ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಅಂತಾರಾಷ್ಟ್ರೀಯ ತಂಡದ ನಾಯಕತ್ವವನ್ನು ಮೊದಲ ಬಾರಿ ವಹಿಸಿಕೊಂಡಿದ್ದ ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡದಲ್ಲಿ ಈ ಗೆಲುವು ಸಿಕ್ಕಿದೆ.
ಮಳೆರಾಯನ ಅಡ್ಡಿಯಿಂದ 12 ಓವರ್ಗಳಿಗೆ ನಿಗದಿಯಾದ ಈ ಪಂದ್ಯದಲ್ಲಿ ಐರ್ಲೆಂಡ್ ತಂಡ ಕೇವಲ 4 ವಿಕೆಟ್ಗಳನ್ನು ಕಳೆದುಕೊಂಡು 108 ರನ್ಗಳನ್ನು ಗಳಿಸಿತ್ತು. ಐರ್ಲೆಂಡ್ ನೀಡಿದ ಗುರಿಯನ್ನು ಬೆನ್ನಟ್ಟಿದ ಭಾರತ 9.2 ಓವರ್ಗಳಿಗೆ 3 ವಿಕೆಟ್ಗಳನ್ನು ಕಳೆದುಕೊಂಡು 111 ರನ್ಗಳನ್ನು ಕಲೆ ಹಾಕಿ ಜಯ ಸಾಧಿಸಿತು.
ಭಾರತ ತಂಡದ ಪರ ಆರಂಭಿಕ ಆಟಗಾರ ಇಶಾನ್ ಕಿಶನ್ ಔಟಾಗದೇ 47 ರನ್ ಗಳಿಸಿದರು. ದೀಪಕ್ ಹೂಡಾ 26 ರನ್, ಸೂರ್ಯಕುಮಾರ್ ಯಾದವ್ 0, ನಾಯಕ ಹಾರ್ದಿಕ್ ಪಾಂಡ್ಯ 24 ಮತ್ತು ದಿನೇಶ್ ಕಾರ್ತಿಕ್ 4 ರನ್ಗಳನ್ನು ಕಲೆ ಹಾಕಿ ಅಜೇಯರಾಗಿ ಉಳಿದರು. ಐರ್ಲೆಂಡ್ ತಂಡದ ಪರ ಕ್ರೇಗ್ ಯಂಗ್ 2 ವಿಕೆಟ್ ಪಡೆದರೆ, ಜೋಶುವಾ ಲಿಟಲ್ 1 ವಿಕೆಟ್ ಪಡೆದರು.
ಭಾರತ ತಂಡ ಪರ ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಯುಜ್ವೇಂದ್ರ ಚಹಲ್ ಮತ್ತು ನಾಯಕ ಹಾರ್ದಿಕ್ ಪಾಂಡ್ಯ ತಲಾ ಒಂದೊಂದು ವಿಕೆಟ್ ಪಡೆಯುವ ಮೂಲಕ ಐರ್ಲೆಂಡ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದರು.
ಟಾಸ್ ಸೋತು ಮೊದಲ ಬ್ಯಾಟಿಂಗ್ ಆರಂಭಿಸಿತ್ತು ಐರ್ಲೆಂಡ್ ತಂಡ. ತಂಡದ ಪರ ಪಾಲ್ ಸ್ಟಿರ್ಲಿಂಗ್ 4 ರನ್, ನಾಯಕ ಆಂಡ್ರ್ಯೂ ಬಾಲ್ಬಿರ್ನಿ 0, ಗರೆಥ್ ಡೆಲಾನಿ 8 ರನ್, ಲೋರ್ಕನ್ ಟಕರ್ 18 ರನ್ ಗಳಿಸಿ ಔಟಾದರು. ಹ್ಯಾರಿ ಟೆಕ್ಟರ್ ಔಟಾಗದೇ 33 ಎಸೆತಗಳಲ್ಲಿ 64 ರನ್ಗಳಿಸಿದರೆ, 4 ರನ್ಗಳಿಸಿದ ಜಾರ್ಜ್ ಡಾಕ್ರೆಲ್ ಅಜೇಯರಾಗಿ ಉಳಿದರು.