78 ರನ್‌ಗೆ ಆಲ್‌ಔಟ್‌ ಆದ ಭಾರತ... ಮೂವರು ಸೊನ್ನೆ, ಇಬ್ಬರು ಎರಡಂಕಿ...!

cricket
Published on

ಲೀಡ್ಸ್: ಭಾರತ ಮತ್ತು ಇಂಗ್ಲೆಂಡ್‌ ನಡುವೆ ಲೀಡ್ಸ್‌ನ ಹೆಡಿಂಗ್ಲೆ ಮೈದಾನಲ್ಲಿ ಮೂರನೇ ಟೆಸ್ಟ್‌ ಪಂದ್ಯ ನಡೆಯುತ್ತಿದ್ದು, ಮೊದಲನೆಯ ಇನಿಂಗ್ಸ್‌ನಲ್ಲಿ 78 ರನ್‌ ಗಳಿಸುವ ಮೂಲಕ ಭಾರತ ಆಲ್‌ಔಟ್‌ ಆಗಿದೆ!

ಕೆಎಲ್‌ ರಾಹುಲ್‌, ಮೊಹಮ್ಮದ್‌ ಶಮಿ ಮತ್ತು ಜಸ್ಪೀತ್‌ ಬುಮ್ರಾ ಶೂನ್ಯ ಸಂಪಾದನೆ ಮಾಡಿದ್ದರೆ, ರೋಹಿತ್ ಶರ್ಮ 19, ಅಜಿಂಕ್ಯಾ ರಹಾನೆ 18 ರನ್‌ ಮೂಲಕ ಎರಡಂಕಿ ಗಳಿಸಿದ್ದಾರೆ. ಉಳಿದಂತೆ ಚೇತೇಶ್ವರ ಪೂಜಾರ 1, ವಿರಾಟ್ ಕೊಹ್ಲಿ 7, ರಿಷಬ್ ಪಂತ್ 2, ರವೀಂದ್ರ ಜಡೇಜ 4, ಇಶಾಂತ್ ಶರ್ಮಾ ಅಜೇಯ 8 ಹಾಗೂ ಮೊಹಮ್ಮದ್ ಸಿರಾಜ್ 3 ರನ್ ಗಳಿಸಿದ್ದಾರೆ.

ಇಂಗ್ಲೆಂಡ್ ಆಟಗಾರರ ಮಾರಕ ದಾಳಿಗೆ ಭಾರತೀಯ ಆಟಗಾರರು ಕನಿಷ್ಠ ಮೊತ್ತ ಗಳಿಸಬೇಕಾಯಿತು. ಇಂಗ್ಲೆಂಡ್‌ನ ಜೇಮ್ಸ್ ಆಂಡರ್ಸನ್ 3, ಕ್ರೇಗ್ ಓವರ್ ಟನ್ 3, ಒಲಿ ರಾಬಿನ್ಸನ್ 2, ಸ್ಯಾಮ್ ಕರ್ರನ್ 2 ವಿಕೆಟ್ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net